Advertisement

ಕಾಂಗ್ರೆಸ್‌ ವಿಭಜಸಿದ ಆಂಧ್ರ, ತೆಲಂಗಾಣ ಇಂದಿಗೂ ಸಂಕಷ್ಟದಲ್ಲಿ: ಮೋದಿ

06:00 PM Nov 27, 2018 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣವನ್ನು ಸೃಷ್ಟಿಸಿತು. ಪರಿಣಾಮ ಏನಾಯಿತು ? ಎರಡೂ ರಾಜ್ಯಗಳು ಇಂದಿಗೂ ಯಾತನೆಯನ್ನು ಅನುಭವಿಸುತ್ತಿವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧದ ತಮ್ಮ ದಾಳಿಯನ್ನು ಮುಂದುವರಿಸಿದ್ದಾರೆ. 

Advertisement

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕೂಡ ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರವನ್ನು ವಿಭಜಿಸಿ ಆರು ರಾಜ್ಯಗಳನ್ನು ಸೃಷ್ಟಿಸಿದ್ದರು. ಈಗ ಆ ಎಲ್ಲ ರಾಜ್ಯಗಳು ಅತ್ಯಂತ ತ್ವರಿತ ಗತಿಯ ಅಭಿವೃದ್ಧಿಯನ್ನು ಕಾಣುತ್ತಿವೆ ಎಂದು ಮೋದಿ ಹೇಳಿದರು. 

ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದ ಮೆಹಬೂಬನಗರದಲ್ಲಿಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ, ಕೇಂದ್ರ ದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧನೆಗೆ ಕಟಿಬದ್ಧವಾಗಿದೆ ಎಂದು ಹೇಳಿದರು. 

ತೆಲಂಗಾಣದಲ್ಲಿ ಡಿ.7ರಂದು ಚುನಾವಣೆ ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆದು ಫ‌ಲಿತಾಂಶ ಪ್ರಕಟವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next