Advertisement

ಶಿರಾ ಕ್ಷೇತ್ರದಲ್ಲಿ 58,705 ಮಂದಿ ಕಾಂಗ್ರೆಸ್‌ಗೆ ನೋಂದಣಿ

04:02 PM Apr 19, 2022 | Team Udayavani |

ಶಿರಾ: ರಾಜ್ಯದಲ್ಲಿ 2023ನೇ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇ ಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, ಶಿರಾ ತಾಲೂಕು ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿ ಆಶಾಭಾವನೆ ಮೂಡಿಸಿದೆ.

Advertisement

ಏಪ್ರಿಲ್‌ 16ಕ್ಕೆ ಮುಕ್ತಾಯಗೊಂಡ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ತುಮಕೂರು ಜಿಲ್ಲೆಯಲ್ಲಿ 3,83,858 ಲಕ್ಷ ಮಂದಿ ನೋಂದಾಯಿಸಿದ್ದಾರೆ. ಇದರಲ್ಲಿ ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ 9154, ತಿಪಟೂರು 39,646, ತುರುವೇಕೆರೆ 31, 562, ಕುಣಿಗಲ್‌ 58,718, ತುಮಕೂರು ನಗರ 22,739, ತುಮಕೂರು ಗ್ರಾಮಾಂತರ 5,512, ಕೊರಟಗೆರೆ 58,846, ಗುಬ್ಬಿ 5010, ಶಿರಾ ತಾಲೂಕಿ ನಲ್ಲಿ 58,705, ಪಾವಗಡ 44,423, ಮಧುಗಿರಿ 49,543 ಮಂದಿ ಕಾಂಗ್ರೆಸ್‌ ಪಕ್ಷಕ್ಕೆ ನೋಂದಾಯಿಸಿದ್ದಾರೆ.

ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ಶಿರಾ ಕ್ಷೇತ್ರದಲ್ಲಿ ಹೆಚ್ಚು ಸದಸ್ಯತನ್ನು ನೋಂದಾಯಿ ಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಧು ಗಿರಿಯಲ್ಲಿ ನಡೆದ ಪಕ್ಷ ಸಂಘ ಟನೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾ ನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಬರಗೂರು, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ. ಆರ್‌. ಮಂಜುನಾಥ್‌ ಅವರು ನಗರ ಹಾಗೂ ತಾಲೂ ಕಿನಾದ್ಯಂತ ಸುತ್ತಿ 58,705 ಜನರನ್ನು ನೋಂದಾ ಯಿಸಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನಕ್ಕೆ ಶಿರಾ ಕ್ಷೇತ್ರದಲ್ಲಿ ಉತ್ಸಾಹ ತೋರಿದ್ದು, ಏ.16 ರವರೆಗೆ 58,705 ಮಂದಿ ನೋಂದಾಯಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. -ಪಿ.ಆರ್‌.ಮಂಜುನಾಥ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು

ನಗರ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ನಾನು ತಾಲೂಕಿನಾದ್ಯಂತ ಸಂಚರಿಸಿ ಟಿ.ಬಿ.ಜಯಚಂದ್ರ ಅವರ ಮಾರ್ಗದರ್ಶನ, ಸಹಕಾರದೊಂದಿಗೆ ಶಿರಾ ತಾಲೂಕಿನಲ್ಲಿ 58,705 ಸದಸ್ಯತ್ವ ಆಗಿದೆ. ಮುಂಬರುವ 2023 ರ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರೇ ವಿಜಯ ಸಾಧಿಸಲಿದ್ದಾರೆ. -ನಟರಾಜ್‌ ಬರಗೂರು, ಶಿರಾ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next