Advertisement

ರಫೇಲ್‌ ವಹಿವಾಟು: ಜಂಟಿ ಸಂಸದೀಯ ಸಮಿತಿ ರಚನೆಗೆ ಕಾಂಗ್ರೆಸ್‌ ಆಗ್ರಹ

04:26 PM Jul 25, 2018 | Team Udayavani |

ಹೊಸದಿಲ್ಲಿ : ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ವಿಮಾನ ವಹಿವಾಟಿನ ಸತ್ಯಾಂಶಗಳನ್ನು ಪರಿಶೀಲಿಸಲು ಸಂಸದೀಯ ಜಂಟಿ ಸಮಿತಿಯೊಂದನ್ನು ರಚಿಸಬೇಕು ಎಂದು  ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

Advertisement

ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, “ಬೊಫೋರ್ಸ್‌ ಕೇಸಿನಲ್ಲಿ ಮಾಡಿದ ರೀತಿಯಲ್ಲೇ ರಫೇಲ್‌ ಕೇಸಿನಲ್ಲಿ ಕೂಡ ವಹಿವಾಟಿನ ಸತ್ಯಾಂಶಗಳನ್ನು ಹೇಳಲು ಸಂಸದೀಯ ಜಂಟಿ ಸಮಿತಿಯನ್ನು ರೂಪಿಸಬೇಕು; ಒಂದೊಮ್ಮೆ ಇದು ಕಾಂಗ್ರೆಸ್‌ ಇತ್ಯರ್ಥಪಡಿಸಿದ್ದ ದರಕ್ಕಿಂತಲೂ ಅಗ್ಗದ್ದಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಹೇಳಬೇಕಿತ್ತು’ ಎಂದು ನುಡಿದರು. 

ರಫೇಲ್‌ ಫೈಟರ್‌ ಜೆಟ್‌ ವಹಿವಾಟು ಕುರಿತಂತೆ ಆಳುವ ಬಿಜೆಪಿ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದೆ ಎಂದು ಖರ್ಗೆ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next