ಹುಣಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ 19,388 ಲೈಂಗಿಕ ಕಿರುಕುಳ, 5,647 ಅತ್ಯಾಚಾರ, 6,521 ಕೊಲೆಗಳು ನಡೆದಿವೆ ಎಂದು ಸರ್ಕಾರವೇ ಬಿಡುಗಡೆ ಮಾಡಿದ್ದು, ಸ್ವತಃ ಮುಖ್ಯಮಂತ್ರಿಗಳು ಗೂಂಡಾ ಮುಕ್ತ ಬೆಂಗಳೂರನ್ನಾಗಿಸಬೇಕೆಂದು ಪೊಲೀಸರು ಸಂಕಲ್ಪ$ತೊಡಬೇಕೆಂದು ಕೋರಿರುವುದನ್ನು ಕಂಡರೆ ಇದು ಬದುಕಿದ್ದೂ ಸತ್ತ ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಪಟ್ಟಣದಲ್ಲಿ ನಡೆದ ಜನಸಂಪರ್ಕ ಯಾತ್ರೆ ಅಂಗವಾಗಿ ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅತ್ಯಾಚಾರ, ಗೂಂಡಾಗಿರಿ ಹೆಚ್ಚಿದೆ, ನಾಲ್ಕು ವರ್ಷಗಳಿಂದ ಏನು ಮಾಡ್ತಿದ್ರಿ, ನಿಮ್ಮ ಆಡಳಿತ ಗೂಂಡಾ ರಾಜ್ಯವಾಗಿದೆ ಎಂದು ನೀವೆ ಒಪ್ಪಿ$ಕೊಂಡಿದ್ದೀರ ಇದೀಗ ಪೊಲೀಸರನ್ನು ಗೂಂಡಾಗಿರಿ ತಡೆಯಿತೆಂದು ಆದೇಶಿಸುತ್ತಿರುವುದು, ನಿಮ್ಮ ಅಸಮರ್ಥ ಆಳ್ವಿಕೆ ಒಪ್ಪಿಕೊಂಡಹಾಗಿದ್ದು, ಬಡವರ, ರೈತರ ಪಾಲಿಗೆ ಕಂಠಕವಾಗಿರುವ ಸಿದ್ದರಾಮಯ್ಯರೇ ರಾಜೀನಾಮೆ ನೀಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಧಿಕಾರಕ್ಕೆ ಬಂದ 24 ಗಂಟೆಲಿ ತನಿಖೆ: ಕಾಂಗ್ರೆಸ್ ಸರಕಾರ ನೀರಾವರಿ ಯೋಜನೆಯಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆಸಿದ್ದು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿ ನಾಲ್ಕು ವರ್ಷದಲ್ಲಿ 36,413 ಕೋಟಿ, ಕಾವೇರಿ ನೀರಾವರಿ ಪ್ರದೇಶದಲ್ಲಿ 6,162 ಕೋಟಿ ಮಾತ್ರ ಖರ್ಚುಮಾಡಿ, ಕೃಷ್ಣಕೊಳ್ಳಕ್ಕೆ ವರ್ಷಕ್ಕೆ 10 ಸಾವಿರಕೋಟಿ ನೀಡುತ್ತೇವೆ. ನಾಲ್ಕು ವರ್ಷದ ಹಣವೆಲ್ಲಿ ಹೋಯ್ತು, ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ನೀಡಿ ಈ ರಾಜ್ಯದ ಜನರನ್ನು ವಂಚಿಸಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ತನಿಖೆಗೆ ಆದೇಶಿಸಿ, ತಕ್ಕ ಪಾಠ ಕಲಿಸುವೆನು ಎಂದರು.
ತುಘಲಕ್ ದರ್ಬಾರ್: ಯಾವುದೋ ಕಾರಣದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರು, ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಚೆಲ್ಲಾಟವಾಡುತ್ತಿದೆ. ಸಾಲ ಮನ್ನಾ ಮಾಡಲು ಕುಂಟು ನೆಪ ಹೇಳುತ್ತಿದೆ. ಸಿದ್ದರಾಮಯ್ಯ ಜೇಬು-ಮನೆಯಿಂದ ಹಣ ಕೊಡಲ್ಲ, ಜನರ ಹಣ ಜನರಿಗೆ ನೀಡುವುದು ಸೂಕ್ತ ಅದುಬಿಟ್ಟು, ಪ್ರಧಾನಿ ಕಡೆ ಬೊಟ್ಟು ತೋರಿಸುತ್ತಾ, ಅಧಿಕಾರ ನೀಡಿದ ರೈತರನ್ನು ವಂಚಿಸುತ್ತಿರುವುದು ಸರಿಯಲ್ಲ.
ಯಾರಧ್ದೋ ದುಡ್ಡು- ಸಿದ್ರಾಮಣ್ಣನ ಜಾತ್ರೆ: ಸಂಸದ ಪ್ರತಾಪಸಿಂಹ ಮಾತನಾಡಿ, ಕಳೆದ ವಾರ ಇದೇ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಸಿದ್ರಾಮಣ್ಣರ ಸಭೆಗೆ ಜನರಿಗೆ 500 ರೂ ಬಿರಿಯಾನಿ ತಿನ್ನಿಸಿ, ಬಾರ್‌ಗೆ ಚೀಟಿಕೊಟ್ಟು ಸಭೆಗೆ ಜನರನ್ನು ಕರೆಸಿದ್ದರು, ಆದ್ರೆ ನಮ್ ಯಡಿಯೂರಪ್ಪ ಬರ್ತಾರಂದ್ರೆ ಸಾವಿರಾರು ಜನ ಸೇರ್ತಾರೆ, ಕೇಂದ್ರ ಸರ್ಕಾರದ ಪಡಿತರವನ್ನು ತಮ್ಮದೆಂದು ಬಿಂಬಿಸಿಕೊಂಡು ಫೋಟೋ ಹಾಕಿಸಿಕೊಂಡು ಮೆರೀತಿದಾರೆ. ದುಡ್ಡು ಕೇಂದ್ರದ್ದು, ಸಿದ್ರಾಮಣ್ಣಂದು ಜಾತ್ರೆ, ಯಡಿಯೂರಪ್ಪ ಸರ್ಕಾರ ಇದ್ದಾಗ ಹಲವು ಜನಪರ ಕೆಲಸಗಳನ್ನು ಮಾಡಿ ಜನ ಮನ್ನಣೆಗಳಿಸಿದ್ದಾರೆ, ತಂಬಾಕು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದಾರೆ, ಮತ್ತೆ ಅಭಿವೃದ್ಧಿ ಪರ್ವ ಮುಂದುವರೆಯಲು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕು ಎಂದರು.
ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮಾಜಿ ಐಎಎಸ್ ಅಧಿಕಾರಿ ಶಿವರಾಂ, ತಾಲೂಕು ಘಟಕದ ಅಧ್ಯಕ್ಷ ಯೋಗಾನಂದಕುಮಾರ್, ನಗರಾಧ್ಯಕ್ಷ ರಾಜೇಂದ್ರ, ಜಿಪಂ ಮಾಜಿ ಸದಸ್ಯ ರಮೇಶ್‌ಕುಮಾರ್, ಮಾಜಿ ಸಚಿವ ಅರವಿಂದಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಸುಲೋಚನಾಭಟ್, ಮುಖಂಡರಾದ ಸಿ.ಸೋಮಶೇಖರ್, ನಾಗೇಂದ್ರ, ಡಾ. ಮಂಜುನಾಥ್, ಫಣೀಶ್, ಕಿರಣ್‌ಕುಮಾರ್, ಬಿ.ಎಂ.ರಾಮು, ಆರ್.ರಘು, ಹನಗೋಡು ಮಂಜುನಾಥ್, ವೀರೇಶ್‌ರಾವ್, ನಾಗರಾಜಪ್ಪ, ಚಂದ್ರಶೇಖರ್, ನಾಗರಾಜಮಲ್ಲಾಡಿ, ಅಪ್ಪಣ್ಣ ಇತರರು ಇದ್ದರು.