ದೊಡ್ಡಬಳ್ಳಾಪುರ: ಕಾಂಗ್ರೆಸ್ ಪ್ರಜಾದ್ವನಿ ಸಮಾವೇಶಕ್ಕೆ ಪ್ರಚಾರಕ್ಕಾಗಿ ಪಾದಚಾರಿಗಳ ಮಾರ್ಗದಲ್ಲಿ ಬಾವುಟ ಅಳವಡಿಸಲು ನೆಲಕ್ಕೆ ಅಳವಡಿಸಿದ್ದ ಸಿಮೆಂಟ್ ಟೈಲ್ಸ್ ಗಳಿಗೆ ಹಾನಿ ಮಾಡಿರುವುದು ಸಾರ್ವನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.
ಆಯೋಜಕರು ಪೊಲೀಸ್ ಇಲಾಖೆಯ ಮಾರ್ಗದರ್ಶನ ಪಾಲಿಸುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಪ್ರಚಾರಕ್ಕಾಗಿ ಪಾದಚಾರಿಗಳ ಮಾರ್ಗಕ್ಕೆ ಅಳವಡಿಸಿದ್ದ ಸಿಮೆಂಟ್ ಟೈಲ್ಸ್ ಹಾನಿ ಮಾಡಿರುವುದು ಸಾರ್ಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹರಿದ ಬ್ಯಾನರ್: ಈ ನಡುವೆ ನಗರದ ಪಿಎಸ್‌ಐ ಜಗದೀಶ್ ವೃತ್ತದಲ್ಲಿ ಅಳವಡಿಸಿದ್ದ ಕಾಂಗ್ರೆಸ್ ಸಮವೇಶದ ಬೃಹತ್ ಬ್ಯಾನರ್ ನ್ನು ಸುಮಾರು 50 ಮಂದಿ ಸೇರಿ ಅಳವಡಿಸಿದ್ದರು. ಆದರೆ, ಸೋಮವಾರ ರಾತ್ರಿ ಕಿಡಗೇಡಿಗಳು ಹರಿದು ಹಾಕಿದ್ದಾರೆ. ಈ ವಿಚಾರ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಟೈಲ್ಸ್ ಸರಿಪಡಿಸುವೆ: ಪ್ರಚಾರಕ್ಕಾಗಿ ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಸಿಮೆಂಟ್ ಟೈಲ್ಸ್‌ಗಳಿಗೆ ಹಾನಿಯಾಗಿರುವ ಕುರಿತು, ಸಾರ್ವಜನಿಕರ ಆಕ್ರೋಶದ ವರದಿಗೆ ಶಾಸಕ ಟಿ.ವೆಂಕಟರಮಣಯ್ಯ ಪ್ರತಿಕ್ರಿಯೆ ನೀಡಿದ್ದು, ಬುಧವಾರ ಹಾನಿಗೊಳಗಾದ ಟೈಲ್ಸ್‌ಗಳನ್ನು ಮರುಜೋಡಣೆ ಕಾಮಗಾರಿ ಮಾಡಲಾಗು ವುದೆಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದ ಹಿನ್ನೆಲೆ ದೇವನಹಳ್ಳಿ ತಾಲೂಕು ಸಮಿತಿ ದ್ವಜಗಳ ಅಳವಡಿಕೆ ವೇಳೆ ಕೆಲವೆಡೆ ಪಾದಾಚಾರಿ ಮಾರ್ಗದ ಸಿಮೆಂಟ್ ಟೈಲ್ಸ್ ಹಾನಿಗೀಡಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತಂತೆ ಬುಧವಾರ ಬೆಳಗ್ಗೆ ಖುದ್ದಾಗಿ ಸ್ಥಳಕ್ಕೆ ಬಂದು, ಸಿಮೆಂಟ್ ಬಳಸಿ ಟೈಲ್ಸ್‌ಗಳನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದ್ದಾರೆ.