Advertisement
ಮೀನುಗಾರರಿಗೆ ಮೋಸಈ ಸಂದರ್ಭದಲ್ಲಿ ಮೀನುಗಾರರೊಂದಿಗೆ ಮಾತನಾಡಿದ ಪ್ರಸಾದ್‌ರಾಜ್ ಕಾಂಚನ್ ಅವರು ಮೀನುಗಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಕೆಲವೊಂದು ಸೌಲಭ್ಯಗಳು ಇನೂ °ಕೂಡ ಸಿಗದೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮಲ್ಪೆ ಬಂದರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಸರಕಾರದಿಂದ ಮಂಜೂರಾದ ಕೆಲವೊಂದು ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಆದರೆ ಬಿಜೆಪಿ ಸರಕಾರ ಮಾತ್ರ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಿ ಅದನ್ನು ಅನುಷ್ಟಾನಗೊಳಿಸದೆ ಮೀನುಗಾರರಿಗೆ ಮೋಸ ಮಾಡುತ್ತಿದೆ ಎಂದರು.
ಮೀನುಗಾರಿಕೆಯಿಂದ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಲಕ್ಷಾಂತರ ಜನರಿಗೆ ಉದ್ಯೋಗ, ಹಾಗೂ ಸತ್ವ ಭರಿತ ಆಹಾರ ನೀಡುತ್ತಿದರು. ಸರಕಾರ ಮೀನುಗಾರರ ಬಗ್ಗೆ ನಿರ್ಲಕ್ಷéಧೋರಣೆಯನ್ನು ತೋರಿಸುತ್ತದೆ. ಅವರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲ. ಮುಖ್ಯವಾಗಿ ಬಂದರುಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ಹೈಜಿನಿಕ್ ಟಾಯ್ಲೆಟ್, ಸಮರ್ಪಕ ಒಳಚರಂಡಿ, ಶುಚಿತ್ವ ಆಗಬೇಕಿದೆ. ನಾಡದೋಣಿ ಮೀನುಗಾರರಿಗೆ ಮಾಸಿಕ ಸೀಮೆ ಎಣ್ಣೆ ಹೆಚ್ಚಳ ಮತ್ತು ಪ್ರತ್ಯೇಕ ಧಕ್ಕೆ ನಿರ್ಮಾಣ, ದುರ್ಮರಣ ಹೊಂದಿದ ಮೀನುಗಾರರ ಬಾಕಿಯಿರುವ ಸಂಕಷ್ಟ ಪರಿಹಾರ ನಿಧಿಯನ್ನು ಆದಷ್ಟು ಶೀಘ್ರದಲ್ಲಿ ಒದಗಿಸಿಕೊಡುವುದು ಮತ್ತು ಮೀನುಗಾರಿಕೆಯ ತುರ್ತು ಸಂದರ್ಭದಲ್ಲಿ ಅವಘಡ ಸಂಭವಿಸಿದಾಗ ಸುರಕ್ಷಾ ಬೋಟ್ ಮತ್ತು ಸೀ ಅಂಬುಲೆನ್ಸ್ ಅನ್ನು ಒದಗಿಸುವ ಕೆಲಸ ಅವಶ್ಯವಾಗಿ ಆಗಬೇಕಾಗಿದೆ. ಶಾಸಕನಾಗಿ ಆಯ್ಕೆಗೊಂಡಲ್ಲಿ ಈ ಎಲ್ಲವನ್ನೂ ಆತೀ ಶೀಘ್ರದಲ್ಲಿ ಮಾಡುವ ಉದೇªಶ ನನ್ನದಾಗಿದೆ ಎಂದು ಪ್ರಸಾದ್‌ರಾಜ್ ಹೇಳಿದರು.
Related Articles
ಉಡುಪಿಯನ್ನು ಎಲ್ಲ ಸೌಲಭ್ಯದೊಂದಿಗೆ ಸ್ವಚ್ಛ, ಸುಂದರ, ಹಸುರು ನಗರವಾಗಿಸುವುದು ನನ್ನ ಕನಸು. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ. ದೇಶದಲ್ಲಿ ಯಾವುದೇ ನಗರವನ್ನು ನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ಕಲುಷಿತವಾಗಿದೆ. ಶುದ್ದ ನೀರು, ಪರಿಶುದ್ದವಾದ ವಾತಾವರಣ ಇಲ್ಲ. ಇದು ಮಕ್ಕಳು ಬೆಳೆಯುವಾಗ ಇದು ತುಂಬ ಅವಶ್ಯಕವಾದ ವಿಚಾರ. ಹಾಗಾಗಿ ಮುಂದಿನ 50 ವರ್ಷಕ್ಕೆ ಯೋಜನೆಯನ್ನು ಹಾಕಬೇಕಾಗಿದೆ. ಇಲ್ಲಿರುವ ಡ್ರೈನೇಜ್, ಕೊಳಚೆ ನೀರನ್ನು ಸಮುದ್ರಕ್ಕೆ ಬಿಡುವ ವ್ಯವಸ್ಥೆ ಅದನ್ನೆಲ್ಲ ನಾವು ಮೊದಲು ಸರಿಪಡಿಸಬೇಕಾಗಿದೆ.
Advertisement
ಬಿಜೆಪಿ ದುಡ್ಡಿದ್ದರವರಿಗೆ ಮಾತ್ರಬಿಜೆಪಿ ಸರಕಾರ ಶ್ರೀಮಂತರಿಗೆ ಮಾತ್ರ ಮಣಿ ಹಾಕುತ್ತದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ದುಡ್ಡಿದ್ದವರು ಇನ್ನೂ ಕೂಡ ಬಿಜೆಪಿ ಸರಕಾರವೇ ಬರಲಿ ಎಂದು ಹೇಳುತ್ತಿದ್ದಾರೆ. ಆದರೆ ನಾವು ಬಡವರು ಎಲ್ಲಿಗೆ ಹೋಗಬೇಕು. ಎಲ್ಲದಕ್ಕೂ ಬೆಲೆ ಏರಿಕೆ ಮಾಡಿದ್ದಾರೆ. ದಿನ ನಿತ್ಯದ ಮನೆ ಸಾಮಾಗ್ರಿಅಕ್ಕಿ, ಗ್ಯಾಸ್, ಕರೆಂಟ್ ಬಿಲ್ ಹೆಚ್ಚು ಹೆಚ್ಚು ಮಾಡುತ್ತಲೇ ಇದ್ದಾರೆ. ಬಂಗಾರ ಬೆಲೆ ಹೆಚ್ಚಳದಿಂದ ಇಂದು ಹೆಣ್ಣು ಮಕ್ಕಳಿಗೆ ಮದುವೆ ಮಾಡದ ಪರಿಸ್ಥಿತಿ ಇದೆ ಎಂದು ಮೀನುಗಾರ ಮಹಿಳೆಯರು ತಮ್ಮ ಆಳಲನ್ನು ತೋಡಿಕೊಂಡರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಉಸ್ತುವಾರಿ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಗಣೇಶ್ ನೆರ್ಗಿ, ಕೇಶವ ಎಂ. ಕೋಟ್ಯಾನ್, ಪದ್ಮನಾಭ್ ಸಾಲ್ಯಾನ್, ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಪ್ರವೀಣ್ ಜಿ. ಕೊಡವೂರು, ಚಂದ್ರಕಾಂತ್ ಪುತ್ರನ್, ಸತೀಶ್ ಕೊಡವೂರು, ಸುದರ್ಶನ್ ಪಡುಕರೆ, ಅಶೋಕ್ ಸುವರ್ಣ ಪಡುಕರೆ, ಸತೀಶ್ ಕುಂದರ್ ಕಲ್ಮಾಡಿ, ಆನಂದ ಕಾಂಚನ್ ಮೊದಲಾದವರು ಪಾಲ್ಗೊಂಡಿದ್ದರು.