Advertisement
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೇನಾಮಿ ಎಂದು ಯಾರಾದರೂ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಸವಾಲು ಹಾಕಿದರು. ನಾನು ಭ್ರಷ್ಟ ನಲ್ಲ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂತಹ ಸುಳ್ಳು ಹೇಳಿಕೆಗಳನ್ನು ಕ್ಷೇತ್ರದಲ್ಲಿ ಹರಿಬಿಡಲಾಗುತ್ತಿದೆ ಎಂದರು.
Related Articles
Advertisement
ಮಾಜಿ ಶಾಸಕ ಎಂ.ಶಿವಾನಂದ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಶಾಸಕರಾಗಲು ಹವಣಿ ಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕ್ಷೇತ್ರಗಳ ಅಭಿವೃದ್ಧಿಯೊಂದೇ ಮೂಲಮಂತ್ರವಾಗಿದೆ. ಹಲವು ವರ್ಷಗಳ ಹಿಂದೆ ಸಿ.ವಿ.ವೆಂಕಟರಾಯಪ್ಪ ಹಾಗೂ ಕೆ.ಬಿ.ಪಿಳ್ಳಪ್ಪರ ನಡುವೆ ನಡೆದ ಪೈಪೋಟಿಯು ಪ್ರಸ್ತುತದ ಚುನಾವಣೆಯಲ್ಲಿ ಮರುಕಳುಹಿಸಲಿದ್ದು, ಪ್ರದೀಪ್ ಈಶ್ವರ್ ಗೆಲುವು ಶತಸಿದ್ಧ ಎಂದು ನುಡಿದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್‌ರೆಡ್ಡಿ, ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಹನುಮಂತಪ್ಪ, ಎಪಿಎಂಸಿ ಮಾಜಿ ನಿರ್ದೇಶಕರಾದ ಮಿಲ್ಟನ್ ವೆಂಕಟೇಶ್ ಮಂಚನಬಲೆ ಇಸ್ಮಾಯಿಲ್, ಪ್ರಕಾಶ್, ಜಯರಾಮ್ ಇದ್ದರು.
ಮನೆ ಬಾಡಿಗೆ ನೀಡದಂತೆ ಕುತಂತ್ರ: ಆರೋಪ : ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಸೋಲುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಗೃಹ ಕಚೇರಿಗೆ ಮನೆ ನೋಡಿದರೆ ಕೆಲವರನ್ನು ಕಳುಹಿಸಿ ಮನೆ ಬಾಡಿಗೆ ನೀಡದಂತೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿದರೆ ಹೆದರುವುದಿಲ್ಲ. ಆದರೆ ನಾನು ಅವರನ್ನು ಟಾರ್ಗೆಟ್ ಮಾಡಿದರೆ ಅದನ್ನು ಸಮರ್ಥವಾಗಿ ಎದುರಿಸಲು ಅವರು ವಿಫಲವಾಗಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಹೇಳಿದರು.
66 ಕಾರ್ಯಕರ್ತರ ವಿರುದ್ಧ ದೂರು : ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಮಾತನಾಡಿ, 2013ಕ್ಕೆ ಹೋಲಿಸಿದರೆ ಸುಧಾಕರ್ ಅವರ ಆಸ್ತಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ಷೇತ್ರದಲ್ಲಿ ಅವರ ವಿರುದ್ಧ ಮಾತನಾಡಿರುವ 66 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿ 21 ಮಂದಿಯನ್ನು ಜೈಲಿಗೆ ಕಳುಹಿಸಿದ್ದರು. ಸೇಡಿನ ರಾಜಕಾರಣ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆರೋಪಿಸಿದರು.