Advertisement

Youth Congress ಬ್ಯಾಂಕ್ ಖಾತೆಗಳ ಸ್ಥಗಿತ,ಪ್ರತಿಭಟನೆ; ತೆರಿಗೆ ನ್ಯಾಯಮಂಡಳಿಯಿಂದ ರಿಲೀಫ್

02:49 PM Feb 16, 2024 | Team Udayavani |

ಹೊಸದಿಲ್ಲಿ: ‘ಯುವ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿಕೆ ನೀಡಿದ ಬೆನ್ನಲ್ಲೇ, ”ಪಕ್ಷದ ಬ್ಯಾಂಕ್ ಖಾತೆಗಳ ಕಾರ್ಯ ನಿರ್ವಹಣೆಗೆ ಯಾವುದೇ ನಿರ್ಬಂಧಗಳಿಲ್ಲ” ಎಂದು ತೆರಿಗೆ ನ್ಯಾಯಮಂಡಳಿ(tax tribunal) ಹೇಳಿದೆ.

Advertisement

ಮಾಕೆನ್ ಹೇಳಿದ್ದೇನು?
“ಕಾಂಗ್ರೆಸ್ ಪಕ್ಷದ ಖಾತೆಗಳನ್ನೂ ಜಪ್ತಿ ಮಾಡಲಾಗಿದ್ದು. ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಿಂದ 210 ಕೋಟಿ ರೂ.ಆದಾಯ ತೆರಿಗೆ ಕೇಳಲಾಗಿದೆ. ನಮ್ಮ ಖಾತೆಗಳಲ್ಲಿ ಕ್ರೌಡ್ ಫಂಡಿಂಗ್ ಹಣವನ್ನು ಸ್ಥಗಿತಗೊಳಿಸಲಾಗಿದೆ. ಚುನಾವಣೆಗೆ ಎರಡು ವಾರಗಳ ಮೊದಲು, ಪ್ರತಿಪಕ್ಷಗಳ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಪ್ರಜಾಪ್ರಭುತ್ವವನ್ನು ಹೆಪ್ಪು ಗಟ್ಟಿಸಿರುವುದಕ್ಕೆ ಸಮಾನವಾಗಿದೆ” ಎಂದು ಮಾಕೆನ್ ಹೇಳಿದರು.

ಕೇಂದ್ರದ ಚುನಾವಣ ಬಾಂಡ್‌ಗಳ ಯೋಜನೆ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಮರುದಿನ ಈ ವಿದ್ಯಮಾನ ನಡೆದಿದೆ.

ನಿರ್ಬಂಧಗಳಿಲ್ಲ

ಪಕ್ಷದ ಬ್ಯಾಂಕ್ ಖಾತೆಗಳ ಕಾರ್ಯ ನಿರ್ವಹಣೆಗೆ ಯಾವುದೇ ನಿರ್ಬಂಧಗಳಿಲ್ಲ” ಎಂದು ತೆರಿಗೆ ನ್ಯಾಯಮಂಡಳಿ(tax tribunal) ಹೇಳಿದೆ. ಈ ಬೆಳವಣಿಗೆಯನ್ನು ರಾಜ್ಯಸಭಾ ಸಂಸದ ಮತ್ತು ವಕೀಲ ವಿವೇಕ್ ಟಂಖಾ ಅವರು ದೃಢಪಡಿಸಿದ್ದು, ದೆಹಲಿಯ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಪೀಠದ ಮುಂದೆ ಕಾಂಗ್ರೆಸ್ ಪಕ್ಷದ ಪರವಾಗಿ ಹಾಜರಾಗಿದ್ದೆ ಎಂದು ಹೇಳಿದ್ದಾರೆ.

Advertisement

ನ್ಯಾಯಮಂಡಳಿ ಎದುರು, ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಟಂಖಾ ವಾದಿಸಿದ್ದರು.

ದೆಹಲಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಮತ್ತು ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

 

ಬಿಜೆಪಿ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿ ” ಪ್ರತಿಯೊಬ್ಬರಿಗೂ ದೇಶದ ಕಾನೂನು ಅನ್ವಯಿಸುತ್ತದೆ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಮಾರ್ಗವಿಲ್ಲ, ಯಾವುದೇ ಉಲ್ಲಂಘನೆಯಾದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಅವರು ಎಲ್ಲೆಡೆ ರಾಜಕೀಯ ಮಾಡಲು ಪ್ರಯತ್ನಿಸಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಯಾವಾಗಲೂ ಹಣವನ್ನು ಅಕ್ರಮ ವಿಧಾನಗಳ ಮೂಲಕ ಸಂಗ್ರಹಿಸುವ ಮಾರ್ಗ ಹೊಂದಿದ್ದಾರೆ ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next