ಬೆಂಗಳೂರು: ಸಿ.ಡಿ.ಪ್ರಕರಣದ ಹಿಂದಿರುವ “ಮಹಾ ನಾಯಕ’ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ವಾರ್ ಮುಂದುವರಿದಿದೆ.
ಬಿಜೆಪಿಯು ಸಿ.ಡಿ.ಪ್ರಕರಣದ ಆರೋಪಿ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬೆನ್ನಲ್ಲೇ ಕಾಂಗ್ರೆಸ್ ಮತ್ತೂಬ್ಬ ಆರೋಪಿ ಜತೆ ಸಂಸದ ಪ್ರತಾಪಸಿಂಹ ಇರುವ ಫೋಟೋ ಹಾಕಿ ತಿರುಗೇಟು ನೀಡಿದೆ. ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ ಕರ್ನಾಟಕ, ದೇಶದ್ರೋಹಿ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದೆ.
ತೇಜಸ್ವಿ ಸೂರ್ಯ ಹಾಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ? ಪ್ರತಾಪ ಸಿಂಹ ಗೂ ಆರೋಪಿಗೂ ಏನು ಸಂಬಂಧ? ಯುವರಾಜನಿಗೂ ಲಕ್ಷ್ಮಣ ಸವದಿಗೂ ಏನು ಸಂಬಂಧ ಎಂದು ಪ್ರಶ್ನಿಸಿ, ಹೆಗಲು ಮುಟ್ಟಿ ಕೊಂಡು ತಡೆಯಾಜ್ಞೆ ತಂದಿದ್ದು ಯಾರು ಎಂದು ಪ್ರಶ್ನೆ ಮಾಡಿದೆ. ಮತ್ತೂಂದು ಟ್ವೀಟ್‌ನಲ್ಲಿ, ಇವರು ಬರೀನಾಯಕರೋ “ಮಹಾ ನಾಯಕ’ರೋ, ತಾವು ಉತ್ತರಿಸದಿದ್ದಲ್ಲಿ ಬಸನಗೌಡ ಅವರು ಉತ್ತರಿಸ ಬಹುದು. ಸಿಡಿ ನಕಲಿ ಎಂದಿದ್ದೀರಿ, ಹಾಗಿದ್ದರೂ ಹಣ ಕೊಟ್ಟಿದ್ದೇಕೆ? ಹಣ ಕೊಟ್ಟಿದ್ಯಾರು ? ಯಾರಿಗೆ ಕೊಟ್ಟಿದ್ದು? ಎಷ್ಟು ಕೊಟ್ಟಿದ್ದು? ಅಷ್ಟು ಮೊತ್ತವನ್ನು ಕಪ್ಪು ಹಣ ಎಲ್ಲಿಂದ ಬಂತು? ಆ ಹಣ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್‌ಗೆ ಸಂದಾಯವಾಗಿದೆಯೇ? ಈ ಪ್ರಕರಣ ಇಡಿ ತನಿಖೆಯಾಗಬೇಕಲ್ಲವೇ. ಬಿಜೆಪಿ ಸರ್ಕಾರ ತಕ್ಷಣತನಿಖೆಗೆ ವಹಿಸಿ ಎಂದು ಒತ್ತಾಯಿಸಲಾಗಿದೆ.ರಮೇಶ್‌ಜಾರಕಿಹೊಳಿ ಅವರಿಂದ ಶೋಷಣೆಗೆ ಒಳಪಟ್ಟ ಯುವತಿ ರಕ್ಷಣೆಗೆ ಅಂಗಲಾಚಿದ್ದಾಳೆ.
ಪೋಷಕರು ಯುವತಿ ಕಾಣೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದಾರೆ. ಹೆಣ್ಣಿನ ದುರ್ಬಳಕೆ ಹಾಗೂ ಶೋಷಣೆಗಾಗಿರುವ ಆಯಾಮದಲ್ಲಿ ತನಿಖೆ ನಡೆಸದಿರುವಬಿಜೆಪಿ ಸರ್ಕಾರ ತನ್ನ ಮಹಿಳಾ ವಿರೋಧಿ ಧೋರಣೆಯನ್ನು ಸಾಬೀತು ಮಾಡಿದೆ ಎಂದು ಟೀಕಿಸಲಾಗಿದೆ. ಕಾಂಗ್ರೆಸ್‌ನ ಸರಣಿ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಸಮಯ ಬಂದಾಗ ದಾಖಲೆ ಬಿಚ್ಚಿಡುತ್ತೇನೆ. ಎಂದಿದ್ದ ಮಹಾನಾಯಕನ ಬಳಿ ಇರುವ ದಾಖಲೆ ಯಾವುದು ?ಈ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಜತೆ ಗಾಢ ಸಂಬಂಧ ಇತ್ತು ಎಂಬುದನ್ನು ಕೆಲವೊಂದು ಫೋಟೊಗಳು ಬಿಚ್ಚಿಡುತ್ತಿವೆ. ಆ ಆತ್ಮೀಯ ಸಂಬಂಧದ ಹಿನ್ನೆಲೆಯ ಬಗ್ಗೆ ಏನು ಹೇಳುತ್ತಾರೆ ಮಹಾನಾಯಕ ಎಂದು ಪ್ರಶ್ನಿಸಿದೆ.