Advertisement
ನಗರಸಭೆಯ 35 ಸ್ಥಾನಗಳಲ್ಲಿ 17 ಕಾಂಗ್ರೆಸ್, ಬಿಜೆಪಿ 14 ಜೆಡಿಎಸ್ 02 ಹಾಗೂ ಪಕ್ಷೇತರ 02 ಸದಸ್ಯರಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಆಡಳಿತ ಮಂಡಳಿಗೆ ಜೆಡಿಎಸ್ ಬಿಜೆಪಿ ತಲಾ ಒರ್ವ ಸದಸ್ಯರ ಬೆಂಬಲವಿದ್ದು ಅವಿಶ್ವಾಸ ಗೊತ್ತುವಳಿಗೆ 17 ಕಾಂಗ್ರೆಸ್ ಹಾಗೂ ಒರ್ವ ಜೆಡಿಎಸ್ ಸದಸ್ಯ ಸಹಿ ಹಾಕಿ ಜಿಲ್ಲಾಧಿಕಾರಿಗಳಿಗೆ ಬೇಗನೆ ಅವಿಶ್ವಾಸಗೊತ್ತುವಳಿ ಸಭೆ ನಡೆಸುವಂತೆ ಮನವಿ ಮಾಡಲಾಗಿದೆ.
Related Articles
Advertisement
ಈ ಮಧ್ಯೆ ಕಾಂಗ್ರೆಸ್ ಪುನಃ ಹೈಕಮಾಂಡ್‌ಗೆ ಹತ್ತಿರದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದು ಕಳೆದ 20 ವರ್ಷಗಳಿಂದ ನಗರಸಭೆಯ ಹಿಡಿತ ಕೈ ತಪ್ಪದಂತೆ ಯೋಜನೆ ರೂಪಿಸಿದ್ದು ಸ್ವತಹ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಖಾಡಕ್ಕೆ ಇಳಿದಿದ್ದು ಮೇಲಿಂದ ಮೇಲೆ ಸಭೆ ನಡೆಸಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಅಥವಾ ಮಾಜಿ ಎಂಎಲ್ಸಿ ಎಚ್.ಆರ್. ರಚಿಸುವ ನಾಗರೀಕ ವೇದಿಕೆ ಕಡೆ ವಾಲದಂತೆ ಕಾರ್ಯತಂತ್ರ ಹೆಣೆದಿದ್ದಾರೆ.
ಹೈಕಮಾಂಡ್ ಆದೇಶದಂತೆ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದೆ. ಪ್ರತಿಯೊಂದು ವರ್ಗದವರಿಗೆ ಆಧ್ಯತೆ ನೀಡುವ ಉದ್ದೇಶವಿರಬಹುದು. ಸದ್ಯ ಹೈಕಮಾಂಡ್ ನ ಸೂಚನೆ ಪಾಲನೆ ಮಾಡಲಾಗಿದೆ. ಮುಂದಿನ ಬೆಳವಣಿಗೆ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಒಂದು ಭಾರಿ ಬಿಜೆಪಿಯವರು ಅಧಿಕಾರ ಪಡೆಯಲು ಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ. ಬಿಜೆಪಿಯವರು ನಗರದ ಪ್ರಭಾವಿಗಳ ಮನೆಯಲ್ಲಿ ಸಭೆ ನಡೆಸಿದ ಮಾತ್ರಕ್ಕೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಪುನಃ ಅಧಿಕಾರ ಹಿಡಿಯುವಷ್ಟು ಬಹುಮತವಿದೆ. ಜಾತ್ಯತೀತ ನಿಲುಗಳ ಬಗ್ಗೆ ಮಾತನಾಡುವ ನಗರದ ಹಿರಿಯ ಮುಖಂಡರು ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿಗೆ ಬೆಂಬಲಿಸಿದರೆ ಮುಂದೆ ಇದಕ್ಕೆ ಪ್ರತಿಫಲ ಪಡೆಯಲು ಸಿದ್ದರಾಗಿರಬೇಕು.-ಶಾಮೀದ್ ಮನಿಯಾರ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು. ಕಳೆದ ಒಂದುವರೆ ವರ್ಷದಿಂದ ನಗರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಾಂಗ್ರೆಸ್ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಆಡಳೀತಾರೂಢ ಸದಸ್ಯರೇ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಬಿಜೆಪಿಯವರು ಸಹ ಅವಿಶ್ವಾಸಗೊತ್ತುವಳಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಗುತ್ತದೆ. ಕಳೆದ ಭಾರಿ ತಮ್ಮ ತಾಯಿ ಜಯಶ್ರೀ ಸಿದ್ದಾಪೂರ ಅವರನ್ನು ಬಿಜೆಪಿ ಸದಸ್ಯರು ಶಾಸಕರು ಸಂಸದರು ಪಕ್ಷದ ಮುಖಂಡರು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದು ಈ ಭಾರಿ ಬಿಜೆಪಿಗೆ ಅಧಿಕಾರ ಸಿಗುವ ಸಾಧ್ಯತೆ ಇದೆ.
-ರಾಚಪ್ಪ ಸಿದ್ದಾಪೂರ ಬಿಜೆಪಿ ಮುಖಂಡರು ನಗರಸಭೆ ಮಾಜಿ ಸದಸ್ಯರು. ಕಳೆದ ಒಂದುವರೆ ವರ್ಷದಿಂದ ನಗರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಸದ್ಯ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ನವರು ಅವಿಶ್ವಾಸಗೊತ್ತುವಳಿ ಮಂಡನೆ ಮಾಡಿದ್ದಾರೆ. ಸಾಧಕ ಬಾಧಕ ಪರಿಶೀಲಿಸಿ ನಾಗರೀಕ ವೇದಿಕೆ ರಚನೆ ಮಾಡಿಕೊಂಡು ಪಕ್ಷಾತೀತವಾಗಿ ಆಡಳಿತ ನಡೆಸುವವರಿಗೆ ಜೆಡಿಎಸ್ ಒರ್ವ ಸದಸ್ಯ ಪಕ್ಷೇತರರು ಬಿಜೆಪಿಯವರು ಮತ್ತು ಅತೃಪ್ತ ಕಾಂಗ್ರೆಸ್ ಸದಸ್ಯರ ಬೆಂಬಲದೊಅದಿಗೆ ಸಹಕಾರ ನೀಡಲಾಗುತ್ತದೆ. ಈಗಾಗಲೇ ನಗರಸಭೆಯ ಕೆಲ ಸದಸ್ಯರು ತಮ್ಮ ಭೇಟಿಯಾಗಿ ಮಾತನಾಡಿದ್ದಾರೆ.
-ಎಚ್.ಆರ್.ಶ್ರೀನಾಥ ಮಾಜಿ ಎಂಎಲ್ಸಿ ಈಗಾಗಲೇ ತಮ್ಮ ವಿರುದ್ಧ ಸ್ವಪಕ್ಷೀಯರು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಹೈಕಮಾಂಡ್ ಹೇಳಿದ್ದರೆ ತಾವೇ ಸ್ವತಹ ರಾಜೀನಾಮೆ ಸಲ್ಲಿಸುತ್ತಿದ್ದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ಭೇಟಿಯಾಗಿ ಮುಂದಿನ ನಿರ್ಧಾರ ಮಾಡಲಾಗುತ್ತದೆ.
-ಮಾಲಾಶ್ರೀ ಸಂದೀಪ್ ಅಧ್ಯಕ್ಷರು ನಗರಸಭೆ