Advertisement

ಗಾಂಧಿ ಹತ್ಯೆಯಿಂದ ಲಾಭವಾಗಿರುವುದು ಕಾಂಗ್ರೆಸಿಗೆ: ಉಮಾ ಭಾರತಿ

09:40 AM Oct 14, 2017 | Team Udayavani |

ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹತ್ಯೆಯಿಂದ ಲಾಭವಾಗಿರುವುದು ಕಾಂಗ್ರೆಸಿಗೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕಾಂಗ್ರೆಸ್‌ ವಿಸರ್ಜನೆಯಾಗಬೇಕೆಂದು ಗಾಂಧೀಜಿ ಬಯಸಿದ್ದರು, ಅವರು ಆ ಕುರಿತು ಘೋಷಣೆಯನ್ನೂ ಮಾಡಿದ್ದರು. ಆದರೆ ಹತ್ಯೆಯಾದ ಕಾರಣ ಗಾಂಧೀಜಿ ಆಶಯ ಈಡೇರದೆ  ಕಾಂಗ್ರೆಸ್‌ಗೆ ಲಾಭವಾಯಿತು ಎಂದಿದ್ದಾರೆ.

Advertisement

ಮಹಾತ್ಮಾ ಗಾಂಧಿ ಹತ್ಯಾ ತನಿಖೆಯನ್ನು ಮರುಪ್ರಾರಂಭಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ , ನಿಜವಾಗಿ ನೋಡಿದರೆ ಗಾಂಧಿ ಹತ್ಯೆಯಿಂದ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಹೆಚ್ಚು ಹಾನಿಯಾಗಿದೆ. ನಾವು ಜೈಲಿಗೆ ಹೋದೆವು ಹಾಗೂ ಈಗಲೂ ನಾವು ಅದರ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ದೇಶಕ್ಕೂ ಭಾರೀ ಹಾನಿಯಾಗಿದೆ. ಆದರೆ ಕಾಂಗ್ರೆಸ್‌ ಭರಪೂರ ಲಾಭ ಮಾಡಿತು. ವಿಸರ್ಜನೆಯಾಗಬೇಕಾದ ಪಕ್ಷ 6 ದಶಕ  ಅಧಿಕಾರ ಅನುಭವಿಸಿತು ಎಂದಿದ್ದಾರೆ. ಗಾಂಧಿ ದೇಹದಲ್ಲಿದ್ದ ನಾಲ್ಕನೇ ಗುಂಡಿನ ಕುರಿತು ತನಿಖೆ ನಡೆಸಲು ಆಗ್ರಹಿಸಿ ಪಂಕಜ್‌ ಫ‌ಡ್ನಿಸ್‌ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದು ಈ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next