Advertisement
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಅಮಾನತು ಮಾಡುವಂತೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ ಹಾಗೂ ಇತರರು ಮನವಿ ಸಲ್ಲಿಸಿದ್ದಾರೆ. ಕೋಮುವಾದ ಕೇವಲ ಬಿಜೆಪಿಗೆ ಹಿಂದುಗಳಿಗೆ ಎಂದು ಲೇಬಲ್ ಅಂಟಿಸಿದಂತಿದೆ. ಶಾಲೆಯ ಶಿಕ್ಷಕಿಯ ತಪ್ಪು ತಿಳಿದೂ ಸಮುದಾಯದ ಪರವಾಗಿ ಮಾತನಾಡುವ ಐವನ್ ಕೂಡ ಓರ್ವ ಕೋಮುವಾದಿಯಾಗಿದ್ದಾರೆ. ಹಲವಾರು ಪ್ರಕರಣದಲ್ಲಿ ಇದು ಸಾಬೀತಾಗಿದೆ. ನಾವೂಕೂಡ ಅವರನ್ನು ಗಡೀಪಾರು ಮಾಡಿ ಎಂದು ಒತ್ತಾಯಸಬಹುದು ಎಂದರು.