Advertisement
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಪ್ರಚಾರ ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಶುಕ್ರವಾರ ಸಂಜೆ ಕಾರ್ಕಳದಿಂದ ಹೆಬ್ರಿಗೆ ಹೊರಟ ಕಾರು ಮತ್ತು ಬೈಕ್‌ಗಳ ಮೆರವಣಿಗೆ ಜನ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಯಿತು.
Related Articles
Advertisement
ಜಯಪ್ರಕಾಶ್ ಹೆಗ್ಡೆ ಅಧಿಕಾರದಲ್ಲಿರಲಿ ಇಲ್ಲದಿರಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡುತ್ತಿದ್ದಾರೆ. “ನಮ್ಮ ಮತ ನಿಮಗೇ” ಎಂದು ಮುಕ್ತ ಮನಸ್ಸಿನಿಂದ ಹೇಳುತ್ತಿದ್ದಾರೆ. ಒಬ್ಬ ಜನಪ್ರತಿನಿಧಿ ಜನಮಾನಸದಲ್ಲಿ ಉಳಿಯುವುದು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ. ಜನಪ್ರತಿನಿಧಿ ಎನಿಸಿಕೊಂಡವ ಜನರ ನಡುವೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ ಆತ ಯಾವುದೇ ಪಕ್ಷದಲ್ಲಿದ್ದರೂ ಜನ ಬೆಂಬಲಿಸುತ್ತಾರೆ ಎಂಬುದಕ್ಕೆ ಜಯಪ್ರಕಾಶ್ ಹೆಗ್ಡೆ ಉತ್ತಮ ನಿದರ್ಶನ.
ಹೆಗ್ಡೆ ಮತ ಯಾಚನೆ ಮಾಡುವಾಗಲೂ ಹಾಗೆ, ತನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆಯೇ ಹೊರತು ಜಾತಿ, ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಸ್ಪರ್ಧಿಯನ್ನು ಟೀಕಿಸುವ ಕೆಲಸವನ್ನೂ ಜೆಪಿ ಮಾಡುತ್ತಿಲ್ಲ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗೆ ಪಕ್ಷದ ಪ್ರಣಾಳಿಕೆಯ ಜೊತೆಯಲ್ಲೇ ತನ್ನದೇ ಆದ ಪ್ರಣಾಳಿಕೆಯನ್ನು ರೂಪಿಸಿಕೊಂಡು ಗೆದ್ದು ಬಂದರೆ ಅವೆಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಈಡೇರಿಸುವುದಾಗಿ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಯಾರದ್ದೋ ಅಲೆಗೆ ಸಿಲುಕಿ ತೇಲಿ ಹೋಗುವುದಕ್ಕಿಂತ ತಾನು ನಿಂತ ನೆಲದಲ್ಲೇ ಇದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಜನಪ್ರತಿನಿಧಿಯನ್ನು ಜನ ಬಯಸುತ್ತಿದ್ದಾರೆಂಬುದು ಸ್ಪಷ್ಟ.