ಬೆಂಗಳೂರು: ಜೂನ್ 13 ರಂದು ನಡೆಯಲಿರುವ ಎಂಎಲ್‌ಸಿ ಚುನಾವಣೆಗೆ ಭಾನುವಾರ ಕಾಂಗ್ರೆಸ್ 7 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದೆ. ಜೂನ್ 17 ರಂದು ಆಗಲಿರುವ 11 ಮಂದಿ ಸದಸ್ಯರ ಸನ್ನಿಹಿತ ನಿವೃತ್ತಿಯಿಂದ ಚುನಾವಣೆ ಅಗತ್ಯವಾಗಿದೆ.
ನಿರೀಕ್ಷೆಯಂತೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್.ಬೋಸರಾಜು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ವಸಂತ್ ಕುಮಾರ್, ಕೆ ಗೋವಿಂದರಾಜ್, ಐವನ್ ಡಿಸೋಜಾ, ಬಿಲ್ಕಿಸ್ ಬಾನೋ ಮತ್ತು ಜಗದೇವ್ ಗುತ್ತೇದಾರ್ ಅವರಿಗೆ ಎಲ್ಲ ಲೆಕ್ಕಾಚಾರ ಮಾಡಿ ಟಿಕೆಟ್ ನೀಡಿದೆ.
ಇದನ್ನೂ ಓದಿ: Congress; ಖರ್ಗೆ ಪರಮಾಪ್ತ ಜಗದೇವ ಗುತ್ತೇದಾರ್ ಗೆ ಪರಿಷತ್ ಟಿಕೆಟ್
ಹೆಚ್ಚುವರಿಯಾಗಿ, ಮುಂಬರುವ ಎಂಎಲ್‌ಸಿ ಉಪಚುನಾವಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ತೆರವಾದ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ತೊರೆದಿದ್ದ ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದು ಮತ್ತೆ ಬಿಜೆಪಿಗೆ ಮರಳಿದ್ದರು. ಈ ಉಪಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗದಿದ್ದರೂ, ‘ಆ ಹುದ್ದೆಯನ್ನು ಭರ್ತಿ ಮಾಡುವ ಚುನಾವಣ ದಿನಾಂಕ ಇನ್ನೂ ಘೋಷಿಸಲಾಗಿಲ್ಲ ಆದರೆ ಚುನಾವಣೆ ನಡೆದಾಗ ಪಕ್ಷ ಬಸನಗೌಡ ಬಾದರ್ಲಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:Sindhanur: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್