Advertisement
ಆಗಸ್ಟ್ 6ರಂದು ಶಾಸಕ ಡಾ.ಜಿ. ಪರಮೇಶ್ವರ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಜನ್ಮ ದಿನಕ್ಕೆ ಶುಭ ಕೋರಿ ಪಟ್ಟಣದ ಹಲವು ಕಡೆ ಪ್ಲೆಕ್ಸ್ ಹಾಕಿದ್ದರು. 10 ದಿನಗಳು ಕಳೆದರೂ ಫ್ಲೆಕ್ಸ್ ತೆರವುಗೊಳಿಸಿರಲಿಲ್ಲ. ಅದೇ ರೀತಿ ಮಾಜಿ ಶಾಸಕ ಸುಧಾಕರ್ ಲಾಲ್ ಅವರ ಜನ್ಮ ದಿನ ಆಗಸ್ಟ್18 ರಂದು ಇರುವುದರಿಂದ ಪರಮೇಶ್ವರ ಜನ್ಮ ದಿನಕ್ಕೆ ಶುಭ ಕೋರಿದ ಫ್ಲೆಕ್ಸ್ ತೆರವು ಮಾಡುವಂತೆ ಪ.ಪಂ ಅಧಿಕಾರಿಗಳು ನೌಕರರಿಗೆ ತಿಳಿಸಿದ್ದರು. ನೌಕರರು ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ವೇಳೆ ಫ್ಲೆಕ್ಸ್ ಹರಿದಿದೆ ಇದರಿಂದ ಕೆಂಡಾ ಮಂಡಲರಾದ ಕಾಂಗ್ರೆಸ್ ಕಾರ್ಯಕರ್ತರು ಪ.ಪಂ ಮುಖ್ಯಾಧಿಕಾರಿ ಕಛೇರಿಗೆ ಬಂದು ಅಧಿಕಾರಿ ವಿರುದ್ದ ಹರಿಹಾಯ್ದರು. ಇದನ್ನು ತಿಳಿದ ಜೆಡಿಎಸ್ ಕಾರ್ಯಕರ್ತರು ಪ.ಪಂ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರ ನಡೆ ಪ್ರಶ್ನಿಸಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ. ಪಂ ಕಛೇರಿ ಕೆಲಹೊತ್ತು ರಣರಂಗವಾಯಿತು.
ಪಿಎಸ್ಐ ಮುತ್ತುರಾಜು ಮತ್ತು ತಂಡ ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಕಛೇರಿಯಿಂದ ಹೊರ ಕಳುಹಿಸಿದರು. ಅಲ್ಲದೇ ಜನಪ್ರತಿನಿಧಿಗಳಾಗಿ ಈ ರೀತಿ ವರ್ತಿಸಬಾರದು ಎಂದು ಸಲಹೆ ನೀಡಿ ತಾತ್ಕಾಲಿಕವಾಗಿ ಸಮಸ್ಯೆ ಶಮನ ಮಾಡಿದರು.
Related Articles
Advertisement
– ಲಕ್ಷ್ಮಣ್ ಕುಮಾರ್ ಪ. ಪಂ ಮುಖ್ಯಾಧಿಕಾರಿ.