Advertisement

ಯೂಸ್‌ ಆ್ಯಂಡ್‌ ಥ್ರೋ ರೀತಿ ದಳವನ್ನು ಕೈ, ಕಮಲ ಬಳಸುತ್ತಿವೆ

10:37 PM Oct 29, 2019 | Lakshmi GovindaRaju |

ನವದೆಹಲಿ: ಕರ್ನಾಟಕದಲ್ಲಿ 15 ವಿಧಾನ ಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾ ವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಜತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಎರಡೂ ಪಕ್ಷಗಳು ನಂಬಿಕೆಗೆ ಯೋಗ್ಯವಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಾಗ್ಧಾಳಿ ನಡೆಸಿದ್ದಾರೆ.

Advertisement

ಪಿಟಿಐಗೆ ಸಂದರ್ಶನ ನೀಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆ ಬಳಿಕ ಇಚ್ಛೆಯಿಲ್ಲದಿದ್ದರೂ ಕಾಂಗ್ರೆಸ್‌ ಜತೆ ಕೈಜೋಡಿಸಿದೆವು. ಚುನಾವಣೆ ಫ‌ಲಿತಾಂಶ ಬಂದ ಕೂಡಲೇ ಕಾಂಗ್ರೆಸ್‌ನವರು ನಮ್ಮ ಬಳಿ ಬಂದು ಸರ್ಕಾರ ರಚನೆಗೆ ಬೇಡಿಕೆಯಿಟ್ಟರು. ಇದಕ್ಕೆ ಮೊದಲು ನಾನು ಒಪ್ಪಿಗೆ ಸೂಚಿಸಿರಲಿಲ್ಲ. ಅವರು ಬಲವಂತ ಮಾಡಿದ್ದಕ್ಕಾಗಿ ನಾವು ಒಪ್ಪಿಕೊಂಡೆವು ಎಂದು ಸ್ಮರಿಸಿದ್ದಾರೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಳ್ಳಲಾ ಗುವುದು. ಈ ಎರಡೂ ಪಕ್ಷಗಳು ನಮ್ಮನ್ನು (ಜೆಡಿಎಸ್‌) ಬೇಕಾದಾಗ ಬಳಸಿಕೊಂಡು ಬಳಿಕ ಮೂಲೆಗುಂಪು ಮಾಡುತ್ತವೆ. ಈ ಉಭಯ ಪಕ್ಷಗಳ ಧೋರಣೆ ಒಂದೇ ರೀತಿ ಇದೆ ಎಂದು ಕಿಡಿಕಾರಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಬಿಜೆಪಿ ಮೇಲೆ ಮೃದು ಧೋರಣೆ ತೋರುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಆ ರೀತಿ ಏನೂ ಇಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next