Advertisement

ಕಾಂಗ್ರೆಸ್‌, ಬಿಜೆಪಿಯಿಂದ ಸಂವಿಧಾನದ ಬಗ್ಗೆ ನಿರ್ಲಕ್ಷ್ಯ

08:54 PM Oct 09, 2019 | Lakshmi GovindaRaju |

ಚಿಕ್ಕಬಳ್ಳಾಪುರ: ರೈತರ ವಿರೋಧಿ ಬಿಜೆಪಿ ಹಾಗೂ ಜನ ವಿರೋಧಿ ಕಾಂಗ್ರೆಸ್‌ ಮತ್ತಿತರ ರಾಜಕೀಯ ಪಕ್ಷಗಳು ಸಂವಿಧಾನದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿದ್ದು, ರಾಷ್ಟ್ರದಲ್ಲಿ ಮೂರನೇ ಶಕ್ತಿಯಾಗಿರುವ ಬಿಎಸ್ಪಿಯನ್ನು ಮೊದಲ ಸ್ಥಾನಕ್ಕೆ ತರಬೇಕು ಎಂದು ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಯಿರಾಂರವರ 13ನೇ ವರ್ಷದ ಪರಿನಿಬ್ಟಾಣ ದಿನದ ಅಂಗವಾಗಿ ಪಕ್ಷದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬಿಎಸ್‌ಪಿ ನಡಿಗೆ ಒಬಿಸಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೈಕಲ್‌ನಲ್ಲಿ ಸಂಚಾರ: ದೇಶ ಉದ್ಧಾರ ಆಗಬೇಕಾದರೆ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಸಮಾಜದಲ್ಲಿ ಶತಮಾನಗಳಿಂದ ಮೇಲ್ವರ್ಗಗಳ ಶೋಷಣೆ, ದೌರ್ಜನ್ಯ, ದಬ್ಟಾಳಿಕೆಗೆ ಒಳಗಾದ ಬಹುಜನರ ಅಭಿವೃದ್ಧಿಗಾಗಿ ಕಾನ್ಶಿರಾಂಜೀ, ಅಂಬೇಡ್ಕರ್‌ ಆಶಯಗಳ ಜಾರಿಗಾಗಿ ಸಾವಿರಾರು ಕಿ.ಮೀ ಸೈಕಲ್‌ನಲ್ಲಿ ಸಂಚರಿಸಿ ಪರಿಶ್ರಮದಿಂದ ಬಹುಜನ ಸಮಾಜ ಪಕ್ಷ ಕಟ್ಟಿದ್ದಾರೆ ಎಂದರು.

ಸಮಾನ ಹಕ್ಕು: ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್‌ ನಾರಾಯಣಸ್ವಾಮಿ ಮಾತನಾಡಿ, ಬಹುಜನ ಸಮಾಜ ಪಕ್ಷವನ್ನು ದೇಶದಲ್ಲಿ ದೊಡ್ಡ ಪಕ್ಷವಾಗಿ ಕಟ್ಟಿ ಬೆಳೆಸಬೇಕಿದೆ. ಸ್ವಾತಂತ್ರ್ಯ ನಂತರ ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಎಲ್ಲಾ ವರ್ಗದವರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ನಾಗಪ್ಪ, ನಂದಗುಂದ ವೆಂಕಟೇಶ್‌, ಜಿಲ್ಲಾ ಘಟಕ ಅಧ್ಯಕ್ಷ ಅಪ್ಸರ್‌ ಪಾಷ, ಜಿಲ್ಲಾ ಸಂಯೋಜಕ ಎಂ ಮುನಿಕೃಷ್ಣಯ್ಯ, ಜಿಲ್ಲಾ ಮಹಿಳಾ ಘಟಕ ಕಾರ್ಯದರ್ಶಿ ಶಶಿಕಲಾ, ಜಿಲ್ಲಾ ಉಪಾಧ್ಯಕ್ಷ ಬಾಗೇಪಲ್ಲಿ ವೆಂಕಟೇಶ್‌, ದೇವಪ್ಪ, ಕಾರ್ಯದರ್ಶಿ ಕೆ.ಮೂರ್ತಿ, ದೇವನಹಳ್ಳಿ ಪುರಸಭೆ ಸದಸ್ಯ ಡಿ.ಆರ್‌.ಬಾಲರಾಜ್‌ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಪೈಯಾಜ್‌ಅಹಮ್ಮದ್‌, ಮುಖಂಡರಾದ ಗುರìಯ್ಯ, ಪಿ.ಶ್ರೀನಿವಾಸ್‌, ದೇವರಾಜ್, ಉಸ್ಮಾನ್‌ ಉಪಸ್ಥಿತರಿದ್ದರು.

Advertisement

ದೇಶಾದ್ಯಂತ ಬಹುಜನ ಸಮಾಜ ಪಕ್ಷದ ವತಿಯಿಂದ ಕಾನ್ಶಿರಾಂ ಅವರ ಪರಿನಿಬ್ಟಾಣವನ್ನು ಸಂಕಲ್ಪ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂಬೇಡ್ಕರ್‌ ಅವರ ಪ್ರಜಾಪ್ರಭುತ್ವ ವ್ಯವಸ್ಥೆ, ಹೋರಾಟ ರಥವನ್ನು ಕಾನ್ಶಿರಾಂ ಮುನ್ನಡೆಸಿದರು.
-ಮಾರಸಂದ್ರ ಮುನಿಯಪ್ಪ, ಬಿಎಸ್ಪಿ, ರಾಜ್ಯ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next