ಮುಂಬಯಿ : ವೀರ್ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡುವಂತೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಭಾನುವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಾವರ್ಕರ್ ಮಹಾರಾಷ್ಟ್ರದ “ಧೀರ ಪುತ್ರ” ಎಂದು ಪ್ರತಿಪಾದಿಸಿದ ರಾವತ್, “ವೀರ್ ಸಾವರ್ಕರ್ ಮಹಾರಾಷ್ಟ್ರದ ದಂತಕಥೆಯಾಗಿದ್ದರು. ಅವರು ಮಹಾರಾಷ್ಟ್ರದ ವೀರ ಪುತ್ರ. ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ನೀಡಬೇಕು ಎಂದರು.
ಇದೆ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಸ್ಲಿಮರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ರಾವತ್ ಹೇಳಿದರು. ಬಿಜೆಪಿ ಮತ್ತು ಅಸಾದುದ್ದೀನ್ ಓವೈಸಿ ಅವರು ‘ರಾಮ್ ಮತ್ತು ಶ್ಯಾಮ್ ಕಿ ಜೋಡಿ’. ಶಿವಸೇನೆ ಏಕಾಂಗಿ ಹೋರಾಟ ನಡೆಸಲಿದೆ. ಅಸಾದುದ್ದೀನ್ ಓವೈಸಿ ಕಪ್ಪು ಶೆರ್ಬಾನಿ ಧರಿಸಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದರು.
ಸಾವರ್ಕರ್ ಚಿತ್ರ ನೋಟುಗಳ ಮೇಲಿರಲಿ
ಕರೆನ್ಸಿ ನೋಟುಗಳ ಮೇಲಿನ ಮಹಾತ್ಮ ಗಾಂಧಿ ಅವರ ಚಿತ್ರವನ್ನು ವಿ.ಡಿ.ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರದೊಂದಿಗೆ ಬದಲಾಯಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಭಾನುವಾರ ಒತ್ತಾಯಿಸಿದೆ.
Related Articles
ಮೀರತ್ ನ ಶಾರದಾ ರಸ್ತೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಕಚೇರಿಯಲ್ಲಿ ಸಾವರ್ಕರ್ ಅವರ 58ನೇ ಪುಣ್ಯತಿಥಿಯನ್ನು ಭಾನುವಾರ ಹವನ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಆಚರಿಸಲಾಯಿತು.
ಭಾರತ ಸರಕಾರಕ್ಕೆ ಬಹಿರಂಗ ಪತ್ರದಲ್ಲಿ ಹಿಂದೂ ಮಹಾಸಭಾ ಸಂಸತ್ ಭವನಕ್ಕೆ ಹೋಗುವ ರಸ್ತೆಗೆ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಳಿಕೊಂಡಿದೆ.
ಇದು ಮೋದಿ ಸರಕಾರದಿಂದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷ ಸಾವರ್ಕರ್ ಅವರಿಗೆ ನಿಜವಾದ ಗೌರವವಾಗಿರಲಿದೆ ಎಂದು ಮಹಾಸಭಾ ಮುಖಂಡರು ಹೇಳಿದ್ದಾರೆ.