Advertisement

Budget ಅಪಾರ ಅನುದಾನ ; ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ ಮಿತ್ರಪಕ್ಷ ಟಿಡಿಪಿ

02:41 PM Jul 23, 2024 | Team Udayavani |

ಹೊಸದಿಲ್ಲಿ:ಕೇಂದ್ರ ಬಜೆಟ್‌ನಲ್ಲಿ ಹೊಸ ರಾಜಧಾನಿ ಅಮರಾವತಿಗೆ 15,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಕ್ಕಾಗಿ ತೆಲುಗು ದೇಶಂ ಪಕ್ಷ ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸಿದೆ. TDP ನಾಯಕ ಮತ್ತು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಕೇಂದ್ರ ಸರಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಮರಾವತಿಯ ಅಭಿವೃದ್ಧಿಗೆ 15,000 ಕೋಟಿ ರೂಪಾಯಿ ಅನುದಾನ ಘೋಷಿಸಿರುವುದು ಸೇರಿದಂತೆ ಆಂಧ್ರಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.

ಟಿಡಿಪಿ ಘೋಷಣೆಗಳ ಪಟ್ಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಎಲ್ಲ ಪ್ರದೇಶಗಳ ಹಾಗೂ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಮೈತ್ರಿ ಸರ್ಕಾರದಿಂದ ಅಪಾರ ಅನುದಾನ ಬಂದಿದೆ. ಇದು ಚಂದ್ರಬಾಬು ನಾಯ್ಡು ಅವರ ದೆಹಲಿ ಭೇಟಿಯ ಫಲ’ ಎಂದು ಹೇಳಿಕೊಂಡಿದೆ.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಕ್ಕಿರುವ ಭರವಸೆಗಳ ಪಟ್ಟಿ

1. ಆಂಧ್ರಪ್ರದೇಶದ ಅಭಿವೃದ್ಧಿಗೆ ರೂ.15 ಸಾವಿರ ಕೋಟಿಗಳ ಆರ್ಥಿಕ ನೆರವು
2. ರಾಜ್ಯದ ಜೀವನಾಡಿ ಪೋಲವರಂ ಪೂರ್ಣಗೊಳಿಸಲು ಹೆಚ್ಚಿನ ಹಣ
3. ರಾಯಲಸೀಮಾ, ಪ್ರಕಾಶಂ ಮತ್ತು ಉತ್ತರಾಂಧ್ರ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್
4. ಕೈಗಾರಿಕಾ ಅಭಿವೃದ್ಧಿಗಾಗಿ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ
5. ವಿಶಾಖಪಟ್ಟಣಂ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್‌ನಲ್ಲಿ ನೋಡ್‌ಗಳಿಗೆ ವಿಶೇಷ ನೆರವು
6. ಕೊಪ್ಪರ್ತಿ ಮತ್ತು ಓರ್ವಕಲ್ಲು ಕೈಗಾರಿಕಾ ಕೇಂದ್ರಗಳ ಅಭಿವೃದ್ಧಿ
7. ವಿಶಾಖ-ಚೆನ್ನೈ ಕಾರಿಡಾರ್‌ನಲ್ಲಿ ಕೊಪ್ಪರ್ತಿ ಮತ್ತು ಹೈದರಾಬಾದ್-ಬೆಂಗಳೂರು ಕಾರಿಡಾರ್‌ನಲ್ಲಿ ಧನಸಹಾಯ
8. ನೀರು, ವಿದ್ಯುತ್, ರೈಲ್ವೆ, ರಸ್ತೆಗಳ ಯೋಜನೆಗಳಿಗೆ ವಿಶೇಷ ಹಣ
9. ವಿಭಜನೆ ಕಾಯಿದೆಯಲ್ಲಿರುವ ಖಾತರಿಗಳ ಜಾರಿ
10. ಪೂರ್ವೋದಯ ಯೋಜನೆಯ ಮೂಲಕ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆ

Advertisement

ಆಂಧ್ರಪ್ರದೇಶದ ರಾಜಧಾನಿ ಅಮರಾವತಿ, ಪೋಲಾವರಂ ಜೀವನದಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಲೋಕೇಶ್ ತೆಲುಗಿನಲ್ಲಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಬಜೆಟ್‌ನಲ್ಲಿ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಆಂಧ್ರಪ್ರದೇಶದ ಪುನರ್ನಿರ್ಮಾಣಕ್ಕೆ ಬದ್ಧವಾಗಿರುವ ಎನ್‌ಡಿಎ ಸರಕಾರ ಕ್ಕೆ ರಾಜ್ಯದ ಜನತೆಯ ಪರವಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಹೊಸ ರಾಜಧಾನಿಯ ಅಭಿವೃದ್ಧಿಗೆ ಕೇಂದ್ರವು ವಿಶೇಷ ಹಣಕಾಸಿನ ನೆರವು ನೀಡಲಿದೆ. ಪೋಲಾವರಂ ನೀರಾವರಿ ಯೋಜನೆಗೆ ಹಣಕಾಸು ನೆರವು ನೀಡಿ ಯೋಜನೆ ಪೂರ್ಣಗೊಳಿಸಲು ಕೇಂದ್ರವು ಸಂಪೂರ್ಣ ಬದ್ಧವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.ಆಂಧ್ರದ ಮಹಿಳಾ ನಿರ್ದಿಷ್ಟ ಯೋಜನೆಗಳಿಗೆ ಅನುದಾನ, ಮೂರು ಜಿಲ್ಲೆಗಳಿಗೆ ಹಿಂದುಳಿದ ಪ್ರದೇಶ ಅನುದಾನವನ್ನು ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next