ಮುಂಬಯಿ: ಸಮಾಜ ಸೇವಕ,ಪ್ರಸಿದ್ಧ ಉದ್ಯಮಿ, ಆರ್. ಜಿ. ಗ್ರೂಪ್ ಆಫ್ ಹೊಟೇಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಬಂಜಾರ ಅವರ ನೂತನ ಹೊಟೇಲ್ ಗೋವಾದ ಪಂಜಿಮ್‌ನಲ್ಲಿ ಅ. 21 ರಂದು ಅದ್ದೂರಿಯಾಗಿ ಶುಭಾರಂಭಗೊಂಡಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಪ್ರಕಾಶ್ ಶೆಟ್ಟಿ ಅವರನ್ನು ಅಭಿನಂದಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಂಟರ ಮತ್ತು ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ್ಸ್ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ಕ್ವಾಲಿಟಿ ಸದಾನಂದ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ ಕಾಪು, ಡಾ| ಪಿ. ವಿ. ಶೆಟ್ಟಿ, ಭವಾನಿ ಶಿಪ್ಪಿಂಗ್ ಸಂಸ್ಥೆಯ ಮಾಲಕ ಕೆ.ಡಿ. ಶೆಟ್ಟಿ, ಬಂಟರ ಸಂಘದ ಟ್ರಸ್ಟಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಶಾಂತಾರಾಮ ಬಿ. ಶೆಟ್ಟಿ, ಗೋವಾ ಬಂಟರ ಸಂಘದ ಅಧ್ಯಕ್ಷ ಮುರಳೀಮನೋಹರ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾತೃಭೂಮಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಉಪ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ, ಅವೆನ್ಯೂ ರಘುರಾಮ್ ಶೆಟ್ಟಿ, ರಿಜೆನ್ಸಿ ಜಯರಾಮ ಎನ್. ಶೆಟ್ಟಿ, ಲತಾ ಜಯರಾಮ ಶೆಟ್ಟಿ, ಕರುಣಾಕರ ಶೆಟ್ಟಿ ಪೆನಿನ್ಸುಲಾ, ಸತೀಶ್ ಶೆಟ್ಟಿ ಪೆನಿನ್ಸುಲಾ, ಬಂಟರ ಸಂಘ ಮೀರಾ-ಭಾಯಂದರ್ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಶೆಟ್ಟಿ ಉಡುಪಿ, ದಿವಾಕರ ಶೆಟ್ಟಿ ರಮಾಡ, ಹರೀಶ್ ಶೆಟ್ಟಿ ರಮಾಡ, ಚಂದ್ರಶೇಖರ್ ಶೆಟ್ಟಿ ರಾಮಕೃಷ್ಣ, ಡಾ| ಮನೋಹರ ಹೆಗ್ಡೆ, ಪ್ರಭಾಕರ ಜೆ. ಶೆಟ್ಟಿ ಉಲ್ಲಾಸ್ ನಗರ, ವಾಸುದೇವ ಶೆಟ್ಟಿ ಕಾಪು, ರೋಹಿತ್ ಹೆಗ್ಡೆ ಎರ್ಮಾಳ್, ವಾದಿರಾಜ ಶೆಟ್ಟಿ ದುಬಾೖ, ಚಲನಚಿತ್ರ ನಟರುಗಳಾದ ಸುನೀಲ್ ಶೆಟ್ಟಿ, ಅಂಬರೀಶ್, ಯಶ್, ರಾಕ್‌ಲೈನ್ ವೆಂಕಟೇಶ್, ಉಪೇಂದ್ರ, ಸುಮಲತಾ, ಮೊದಲಾದವರು ಪಾಲ್ಗೊಂಡು ಶುಭಹಾರೈಸಿದರು.