Advertisement

ಸಂಸದ ಗೋಪಾಲ್‌ ಶೆಟ್ಟಿ ಅವರಿಗೆ ಅಭಿನಂದನೆ

06:38 PM Jan 12, 2021 | Team Udayavani |

ಮುಂಬಯಿ : ಸರ್ವಶ್ರೇಷ್ಠ ಸಂಸದರಾಗಿ ಆಯ್ಕೆಗೊಂಡ ಸಂಸದ ಗೋಪಾಲ ಸಿ. ಶೆಟ್ಟಿ ಅವರನ್ನು ಜ. 9ರಂದು ತುಳು ಸಂಘ ಬೊರಿವಲಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

Advertisement

ಉತ್ತರ ಮುಂಬಯಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಓರ್ವ ನಿಷ್ಠಾವಂತ ಜನಪ್ರತಿಧಿಯಾಗಿ ಸದಾ ಜನಸಂಪರ್ಕದಲ್ಲಿ ಕಾರ್ಯನಿರತ ಸಮಾಜ ಸೇವಕನಾಗಿ, ಕೋವಿಡ್ ಮಹಾಮಾರಿಯ ಸಮಯದಲ್ಲಿ ಸಾರ್ವಜನಿಕವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸಿ ದಿಟ್ಟ ನಿಲುವಿನೊಂದಿಗೆ ಹೋರಾಡಿದ, ರಾಜ್ಯ ಹಾಗೂ ರಾಷ್ಟ ಕಾರ್ಯಕಲಾ ಪಗಳ ಪರಾಮರ್ಶೆಯಲ್ಲಿ ಅಗ್ರಪಂಕ್ತಿಯ ಸಂಸದನಾಗಿ ದ್ವಿತೀಯ ಬಾರಿಗೆ ಮಹಾರಾಷ್ಟ್ರದಲ್ಲಿ ಸರ್ವಶ್ರೇಷ್ಠ ಸಂಸದ ನೆಂಬ ಪುರಸ್ಕಾರ ಪಡೆದ ಗೋಪಾಲ ಸಿ. ಶೆಟ್ಟಿ ಅವರನ್ನು ತುಳು ಸಂಘ ಬೊರಿವಲಿಯ ಪದಾಧಿಕಾರಿಗಳು ಸಂಸದರ ಬೊರಿವಲಿಯ ಕಚೇರಿಯಲ್ಲಿ ಪುಷ್ಪಗುತ್ಛ ನೀಡಿ ಗೌರವಿಸಿ ಅಭಿನಂದಿಸಿದರು.

ಇದನ್ನೂ ಓದಿ:ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರ : ಸಚಿವ ರಾಜನಾಥ್ ಸಿಂಗ್

ಈ ಸಂದರ್ಭ ತುಳು ಸಂಘ ಬೊರಿವಲಿ ಇದರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ, ಗೌರವ ಕೋಶಾಧಿಕಾರಿ ಹರೀಶ್‌ ಮೈಂದನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ ಅವರು ಉಪಸ್ಥಿತರಿದ್ದರು.

ವರದಿ: ರಮೇಶ್‌ಉದ್ಯಾವರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next