Advertisement

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

03:30 PM Dec 27, 2021 | Team Udayavani |

ನಾರಾಯಣಪುರ: ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಯಣ್ಣಿವಡಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಬಸವರಾಜ ಮತ್ತು ಮಲ್ಲನಗೌಡ ಅವರನ್ನು ಶಾಲೆ ವತಿಯಿಂದ ಅಭಿನಂದಿಸಲಾಯಿತು.

Advertisement

ಮುಖ್ಯಗುರು ಸಂಗಯ್ಯ ಬಿಕ್ಷಾವತಿಮಠ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಣ್ಣಿವಡಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕೀರ್ತಿ ತಂದಿದ್ದಾರೆ. ಸರ್ಧಾತ್ಮಕ ಯುಗದಲ್ಲಿ ಪಠ್ಯ ಚಟುವಟಿಕೆಯಲ್ಲಿ ಉತ್ತಮ ಅಂಕ ಗಳಿಸುವ ಜತೆಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಇದ್ದು, ಇಂತಹ ರಸಪ್ರಶ್ನೆ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಪೂಜಾರಿ, ಶಿಕ್ಷಕರಾದ ಪ್ರಕಾಶ ದಿಡ್ಡಿಮನಿ, ಮಂಜುನಾಥ, ಶರಣಪ್ಪ, ಸಂಜೀವಕುಮಾರ, ಬಸವರಾಜ, ವೆಂಕಟೇಶ, ನೀಲಮ್ಮ, ಭೀಮಾಶಂಕರ ಇತರರಿದ್ದರು.

ಜೋಗುಂಡಭಾವಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಗಂಗಮ್ಮ ಜಗದೀಶ ಗುರಿಕಾರ, ರಕ್ಷಿತಾ ಗುರುಪಾದಪ್ಪ ಸಜ್ಜನ್‌ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಜಗದೇವ ಹುಲ್ಲೂರ ತಿಳಿಸಿದರು. ಈ ವೇಳೆ ಶಿಕ್ಷಕರಾದ ದೋಂಡಿಬಾ, ಗುಂಡಪ್ಪ ಕುರಿ, ಬಸಪ್ಪ ನಾಯ್ಕ, ಶ್ರೀಶೈಲ್‌, ವಿಜಯಾ, ಮಂಜುಳಾ, ಸವಿತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next