Advertisement

ಅ.31: ಮಹಾರಾಷ್ಟ್ರ ಕಾಂಗ್ರೆಸ್‌ನಿಂದ ಜನಾಕ್ರೋಶ ಆಂದೋಲನ

04:40 PM Oct 26, 2017 | Team Udayavani |

ಮುಂಬಯಿ : ಮಹಾರಾಷ್ಟ್ರದಲ್ಲಿನ ಬಿಜೆಪಿ ನೇತೃತ್ವದ ಫ‌ಡ್ನವೀಸ್‌ ಸರಕಾರದ ಮೂರು ವರ್ಷಗಳ ವೈಫ‌ಲ್ಯವನ್ನು ಜನರಿಗೆ ಢಾಳಾಗಿ ಕಾಣಿಸುವ ಸಲುವಾಗಿ ಇದೇ ಅ.31ರಂದು ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್‌ ಜನಾಕ್ರೋಶ ಆಂದೋಲನವನ್ನು ಆರಂಭಿಸಲಿದೆ.

Advertisement

ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯ ದಿನವಾಗಿರುವ ಅ.31ರಂದು ಈ ಆಂದೋಲನವನ್ನು ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ಅಶೋಕ್‌ ಚವಾಣ್‌ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರದ ಕಳಪೆ ಕಾರ್ಯ ನಿರ್ವಹಣೆಯಿಂದ ಜನರು ನಿರಾಶರಾಗಿದ್ದಾರೆ. ಜನರಲ್ಲಿ ತೀವ್ರವಾದ ಅಸಮಾಧಾನವಿದೆ. ಸರಕಾರದ ತಪ್ಪು ನಿರ್ಧಾರಗಳ ಬಗ್ಗೆ ಜನರಲ್ಲಿ ಆಕ್ರೋಶವಿದೆ ಎಂದು ಚವಾಣ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next