Advertisement

ರಫೇಲ್‌ ಡೀಲ್‌:ಹಿಮಾಚಲ ಪ್ರದೇಶದಲ್ಲಿ ಆ.2ರಂದು ಕಾಂಗ್ರೆಸ್‌ ಪ್ರತಿಭಟನೆ

12:39 PM Jul 28, 2018 | udayavani editorial |

ಶಿಮ್ಲಾ : ಫ್ರಾನ್ಸ್‌ ಜತೆಗಿನ ರಫೇಲ್‌ ಫೈಟರ್‌ ಜೆಟ್‌ ಡೀಲ್‌ನಲ್ಲಿ ಅವ್ಯವಹಾರ ನಡೆದಿರುವುದನ್ನು ಆರೋಪಿಸಿ ಕಾಂಗ್ರೆಸ್‌ ಆಗಸ್ಟ್‌ 2ರಂದು ಹಿಮಾಚಲ ಪ್ರದೇಶದ ಎಲ್ಲ 12 ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಎಚ್‌ಪಿಸಿಸಿ ಅಧ್ಯಕ್ಷ ಸುಖವೀಂದ್ರ್ ಸಿಂಗ್‌ ಸುಖು ತಿಳಿಸಿದ್ದಾರೆ.

Advertisement

ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರ ಇದೇ ವ್ಯವಹಾರವನ್ನು ಕುದುರಿಸಿದ್ದ ದರಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಅದೇ ವ್ಯವಹಾರವನ್ನು ಈಗಿನ ಸರಕಾರ ಕುದುರಿಸಿರುವುದರ ಔಚಿತ್ಯ ಏನೆಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ವಿವರಿಸಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಗೆ ತಲುಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್‌ ಅಂದು ಮನವಿ ಸಲ್ಲಿಸಲಿದೆ ಎಂದು ಸುಖವಿಂದರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next