ನವದೆಹಲಿ:ಅದಾನಿ ಗ್ರೂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್ “ಚೀನಾ ಜತೆಗೆ ನಿಕಟ ಸಂಪರ್ಕ ಇರುವ ಅದಾನಿ ಗ್ರೂಪ್‌ನ ಹಡಗು ವಿಭಾಗಕ್ಕೆ ದೇಶದಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದ್ದು ಏಕೆ?’ ಎಂದು ಪ್ರಶ್ನಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಪಕ್ಷದ ಸಂಪರ್ಕ ವಿಭಾಗದ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಚೀನಾ ಕಂಪನಿಗಳನ್ನು, ಆ್ಯಪ್‌ಗ್ಳನ್ನು ಭದ್ರತಾ ಕಾರಣಗಳಿಗಾಗಿ ತಡೆಯುವ ಕೇಂದ್ರ ಸರ್ಕಾರ, ಅದಾನಿ ಗ್ರೂಪ್‌ನ ಶಿಪ್ಪಿಂಗ್ ವಿಭಾಗದಲ್ಲಿ ಚೀನಾದ ನಾಗರಿಕ ಪ್ರಮುಖ ಹುದ್ದೆಯಲ್ಲಿದ್ದಾನೆ.
ಹೀಗಿರುವಾಗ ಆ ಸಂಸ್ಥೆಗೆ ದೇಶದ ಪ್ರಮುಖ ಬಂದರುಗಳಲ್ಲಿ ಅದಾನಿ ಶಿಪ್ಪಿಂಗ್‌ಗೆ ಕಾರ್ಯಾಚರಣೆ ನಡೆಸಲು ಏಕೆ ಅನುಮತಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
“ಅದಾನಿ ಶಿಪ್ಪಿಂಗ್ ಕಂಪನಿಯಲ್ಲಿ ಚಾಂಗ್ ಚುಂಗ್ ಲಿಯಾಂಗ್ ಎಂಬ ಚೀನಿ ನಾಗರಿಕ ಪ್ರಮುಖ ಹುದ್ದೆಯಲ್ಲಿದ್ದಾರೆ. ಎಪಿಎಂ ಟರ್ಮಿನಲ್ಸ್ ಮ್ಯಾನೇಜ್‌ಮೆಂಟ್, ತೈವಾನ್‌ನ ವಾನ್ ಹೈ ಲೈನ್ಸ್‌ಗೆ 2022ರಲ್ಲಿ ಚೀನಾ ಲಿಂಕ್‌ನ ಕಾರಣದಿಂದ ಮುಂಬೈನ ಜವಾಹರ್‌ಲಾಲ್ ನೆಹರೂ ಬಂದರು ಮಂಡಳಿಯಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಈಗ ಅದಾನಿ ಕಂಪನಿಗೆ ಬಂದರುಗಳ ನಿರ್ವಹಣೆ ಜವಾಬ್ದಾರಿಗೆ ಅನುಮತಿ ನೀಡಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.
ಶಾಂಘೈ ಮೂಲಕ ಎರಡು ಶಿಪ್ಪಿಂಗ್ ಕಂಪನಿಗಳ ಜತೆಗೆ ಅದಾನಿ ಗ್ರೂಪ್ ಕೆಲಸ ಮಾಡಿದೆ. ಅವುಗಳು ಉತ್ತರ ಕೊರಿಯಾಕ್ಕೆ ಅಕ್ರಮವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಕೆ ಮಾಡಿದ ಆರೋಪಗಳಿವೆ ಎಂದರು ಜೈರಾಮ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.