Advertisement

ಆಂಗ್ಲೋ ಇಂಡಿಯನ್‌ ನಾಮಕರಣ: ಕಾಂಗ್ರೆಸ್‌-ಜೆಡಿಎಸ್‌ ಸುಪ್ರೀಂ ಕೋರ್ಟಿಗೆ

04:46 PM May 17, 2018 | udayavani editorial |

ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಗೆ ಆಂಗ್ಲೋ ಇಂಡಿಯನ್‌ ಸದಸ್ಯರೋರ್ವರನ್ನು ನಾಮಕರಣ ಮಾಡುವ ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಲು ಹತ್ತಿರುವ ಕಾಂಗ್ರೆಸ್‌ – ಜೆಡಿಎಸ್‌ ಕೂಟ, ರಾಜ್ಯ ವಿಧಾನಸಭೆಯಲ್ಲಿ  ಬಿಜೆಪಿ ತನಗಿರುವ ಬಹುಮತವನ್ನು ಸಾಬೀತುಪಡಿಸುವ ತನಕ ರಾಜ್ಯಪಾಲರು ನಾಮಕರಣ ಪ್ರಕ್ರಿಯೆ ನಡೆಸಕೂಡದು ಎಂದು ಹೇಳಿದೆ.

Advertisement

ಸುಪ್ರೀಂ ಕೋರ್ಟಿಗೆ ಇಂದು ಉಭಯ ಪಕ್ಷಗಳು ಈ ಬಗ್ಗೆ ಸಲ್ಲಿಸಿರುವ ಅರ್ಜಿಯು ನಾಳೆ ಶುಕ್ರವಾರ ಮುಖ್ಯ ಅರ್ಜಿಯೊಂದಿಗೆ ವಿಚಾರಣೆಗೆ ಬರಲಿದೆ. ನಿನ್ನೆ ರಾತ್ರಿ ಪೂರ್ತಿ ನಡೆದ ಹೈ ಡ್ರಾಮಾದಲ್ಲಿ ಸುಪ್ರೀಂ ಕೋರ್ಟ್‌, ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. 

ಇಂದು ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ ಯಡಿಯೂರಪ್ಪ ಅವರು ಸದನದಲ್ಲಿ ತಮಗಿರುವ ಬಹುಮತವನ್ನು ಸಾಬೀತು ಪಡಿಸುವ ತನಕ ರಾಜ್ಯಪಾಲರು ಮಾಡಿರುವ ಆಂಗ್ಲೋ ಇಂಡಿಯನ್‌ ವಿನಿಶಾ ನೀರೋ ಅವರ ನಾಮಕರಣವನ್ನು ಅನೂರ್ಜಿತಗೊಳಿಸಬೇಕು ಎಂದು ಕಾಂಗ್ರೆಸ್‌-ಜೆಡಿಎಸ್‌ ಆಗ್ರಹಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next