Advertisement

ಗುಜರಾತ್‌ನ 2 ಸೀಟುಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಕಟ; ಒಟ್ಟು ಸಂಖ್ಯೆ 357

09:21 AM Apr 05, 2019 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷ ಇಂದು ಗುರುವಾರ ಗುಜರಾತ್‌ ನ ಎರಡು ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

Advertisement

ಇದರೊಂದಿಗೆ ಕಾಂಗ್ರೆಸ್‌ ಈ ವರೆಗೆ ತನ್ನ 357 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ.

ಗುಜರಾತ್‌ನ ಭರೂಚ್‌ ಕ್ಷೇತ್ರದಿಂದ ಶೇರ್‌ ಖಾನ್‌ ಅಬ್ದುಲ್‌ ಶಕೂರ್‌ ಪಠಾಣ್‌ ಮತ್ತು ದಾಹೋದ್‌ (ಎಸ್‌ಟಿ) ಕ್ಷೇತ್ರದಿಂದ ಬಾಬುಭಾಯಿ ಕಟಾರಾ ಅವರನ್ನು ಕಾಂಗ್ರೆಸ್‌ ಪಕ್ಷ ಕಣಕ್ಕೆ ಇಳಿಸಿದೆ.

ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಅವರನ್ನು ಭರೂಚ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಗುಜರಾತ್‌ ಕಾಂಗ್ರೆಸ್‌ ಘಟಕ ಮನವಿ ಮಾಡಿಕೊಂಡ ಎರಡು ದಿನಗಳ ತರುವಾಯ ಪಕ್ಷದಿಂದ ಈ ಪ್ರಕಟನೆ ಹೊರ ಬಂದಿದೆ.

ಪಟೇಲ್‌ ಅವರು ಪ್ರಕೃತ ರಾಜ್ಯಸಭಾ ಸದಸ್ಯರಾಗಿದ್ದಾರೆ ಇವರು ಭರೂಚ್‌ ನಿಂದ 1977, 1980 ಮತ್ತು 1984ರಲ್ಲಿ ಒಟ್ಟು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆದರೆ 1991ರಲ್ಲಿ ಅಹ್ಮದ್‌ ಪಟೇಲ್‌ ಅವರು ಬಿಜೆಪಿಯ ಚಂದೂಭಾಯಿ ದೇಶ್‌ಮುಖ್‌ ಅವರೆದುರು ಪರಾಭವಗೊಂಡಿದ್ದರು. ಅಲ್ಲಿಯ ಬಳಿಕ ಪಟೇಲ್‌ ಈ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next