Advertisement
ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಆ.16ರ ಬುಧವಾರ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ಸಭೆ ಕರೆದು ನಿಯಮ ಉಲ್ಲಂಘನೆ ಮತ್ತು ತಮ್ಮ ಸೂಚನೆಯನ್ನು ಮೀರಿ ಪ್ರಭಾರ ವಹಿಸಿಕೊಂಡಿರುವ ಡಾ. ಜಾಜಿ ದೇವೇಂದ್ರಪ್ಪ ಕೂಡಲೇ ಹುದ್ದೆಯಿಂದ ನಿರ್ಗಮಿಸಬೇಕು ಎಂದರು.
Related Articles
Advertisement
ತಾವು ಬಂದು ಸಭೆ ನಡೆಸುವ ತನಕ ತಡೆಯುವಂತೆ ಪ್ರೋ.ಜಗದೇವಿ ಕಲಶೆಟ್ಟಿ ಅವರಿಗೆ ಸೂಚನೆ ನೀಡಿದರೂ ಡಾ.ಜಾಜಿ ದೇವೆಂದ್ರಪ್ಪ ಅವರಿಗೆ ಪ್ರಭಾರ ವಹಿಸಿದ್ದು ಸರಿಯಲ್ಲ. ಆದ್ದರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣ ಉತ್ತಮವಾಗಿದ್ದರೆ ಮಾತ್ರ ಕಾಲೇಜಿನ ಗುಣಮಟ್ಟ ಮತ್ತು ಫಲಿತಾಂಶ ಚೆನ್ನಾಗಿ ಬರುತ್ತದೆ. ಆದ್ದರಿಂದ ಸದ್ಯ ಪ್ರೋ. ಜಗದೇವಿ, ಕಲಶೆಟ್ಟಿಯವರು ಪುನ: ಪ್ರಭಾರ ಪ್ರಾಚಾರ್ಯ ಮುಂದುವರೆಯಲಿದ್ದು, ಶೀಘ್ರವೇ ಮತ್ತೊಮ್ಮೆ ಸಭೆ ನಡೆಸಿ ನಿಯಮ ಅನುಸಾರ ಅರ್ಹರಿರುವ ಬೇರೆಯವರಿಗೆ ಪ್ರಭಾರ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆತಿಥಿ ಉಪನ್ಯಾಸಕರು ತಮಗೆ ಸೇವಾ ಭದ್ರತೆ ಕೊಡುವಂತೆ ಹಾಗೂ ಸರ್ಕಾರದಿಂದ ಎಂ.ಎ. ಇಂಗ್ಲಿಷ್ ಕೋರ್ಸ್ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕ ಗಾಲಿ ಜನಾರ್ದನರೆಡ್ಡಿ ಶೀಘ್ರದಲ್ಲಿ ಗಂಗಾವತಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಲ್ಲಿದ್ದು, ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದ್ದು ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಕೊಲ್ಲಿ ನಾಗೇಶ್ವರ ರಾವ್ ಸರಕಾರಿ ಮಹಾವಿದ್ಯಾಲಯ ಬೃಹತ್ ಕಾಲೇಜು ಆಗಿದ್ದು ಇಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮತ್ತು ಕಾಲೇಜಿನ ಅಭಿವೃದ್ಧಿಗೆ ಭೂ ದಾನಿಗಳ ಸಹಕಾರದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಪ್ರಾಧ್ಯಾಪಕರಾದ ಕರಿಗೂಳಿ ಹಾಗೂ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಪ್ರಭಾರ ಪ್ರಾಚಾರ್ಯರ ಹುದ್ದೆ ಸಂಬಂಧಪಟ್ಟಂತೆ ಗೊಂದಲವಿದ್ದು, ನಿಯಮಾನುಸಾರ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ. ಸಿಡಿಸಿ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಿರುವುದು ಸರಿಯಿದ್ದು, ಪ್ರಭಾರ ವಹಿಸುವ ವಿಚಾರದಲ್ಲಿ ಈ ಹಿಂದಿನ ಪ್ರಾಚಾರ್ಯರು ಎಲ್ಲಾ ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಡಿಸಿ ಅಧ್ಯಕ್ಷರ ಸೂಚನೆಯಂತೆ ನಡೆದುಕೊಳ್ಳಬೇಕಿತ್ತು. ಅವಸರದ ಪರಿಣಾಮ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ ಎಂದರು.
ಭೂದಾನಿಗಳ ಆಕ್ರೋಶ: ನಾಗೇಶ ರಾವ್ ಸರಕಾರಿ ಮಹಾವಿದ್ಯಾಲಯಕ್ಕೆ 5 ಎಕರೆ ಭೂಮಿ ದಾನ ನೀಡಿದ್ದಕೊಲ್ಲಿ ನಾಗೇಶರಾವ್ ಕುಟುಂಬದ ರಾಧ ಕೊಲ್ಲಿ, ಮಲ್ಲಿಕಾರ್ಜುನ ಕೊಲ್ಲಿ ಕಾಲೇಜಿಗೆ ಭೇಟಿ ನೀಡಿ ಸಿಡಿಸಿ ಅಧ್ಯಕ್ಷರು ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಅವರನ್ನು ಸನ್ಮಾನಿಸಿ ಕಾಲೇಜಿನ ಪ್ರಾಚಾರ್ಯರೂ ಸೇರಿ ಸಿಡಿಸಿಯವರು ಭೂದಾನಿಗಳಿಗೆ ಸರಿಯಾದ ಗೌರವ ಕೊಡಲ್ಲ. ಕಾಲೇಜ್ ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ನಮ್ಮ ಕುಟುಂಬ ಕಾಲೇಜಿಗೆ ಭೂಮಿ ಕೊಟ್ಟಿದ್ದು ಸಾರ್ಥಕವಾಗುತ್ತಿಲ್ಲ ಎಂಬ ಭಾವ ಬರುತ್ತಿದೆ. ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ಕೆ.ಆರ್.ಪಿ ಪಕ್ಷದ ಕಾರ್ಯಕರ್ತರಿದ್ದರು.