ನಂಜನಗೂಡು: ಜ್ಯುಬಿಲಿಯಂಟ್ ಕಂಪನಿಯಲ್ಲಿ ದುಡಿಯುತ್ತಿರುವ ಕಾರ್ಮಿಕ ಎಷ್ಟು ಎಂಬ ಬಗ್ಗೆ ಕಂದಾಯ ಹಾಗೂ ತಾಲೂಕು ಆರೋಗ್ಯ ಇಲಾಖೆ ನಡುವೆ ಗೊಂದಲವಿದೆ. ಕಳೆದ ತಿಂಗಳು 23ರಂದು ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆಗಾಗಿ ವಿವರ ಕೇಳಿದಾಗ ಈ ಕಾರ್ಖಾನೆ ಕೇವಲ 763 ಮಂದಿ ಎಂದು ಹೇಳಿತ್ತು. ಆದರೆ, ಕಂದಾಯ ಇಲಾಖೆಗೆ 1112 ನೌಕರರ ಪಟ್ಟಿ ಸಿಕ್ಕಿದೆ. ಇದರಿಂದ ಗೊಂದಲವಾಗಿದೆ. ಆರೋಗ್ಯ ಇಲಾಖೆ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಸಿದ್ಧಪಡಿಸಿದಾಗ 763 ಇದ್ದ ಸಂಖ್ಯೆ 1348ಕ್ಕೆ ಬೆಳೆದಿದೆ. ನಂತರ ಅವರ ಕುಟುಂಬದವರನ್ನೂ ಸೇರಿ 1750ಕ್ಕೂ ಹೆಚ್ಚು ಜನ ಜ್ಯುಬಿಲಿಯಂಟ್ ಸಿಬ್ಬಂದಿ ಹಾಗೂ ಕುಟುಂಬದವರ ಪರೀಕ್ಷೆ ನಡೆಸಿದ ಇಲಾಖೆ ಎಲ್ಲರ ಪರೀಕ್ಷೆ ಮುಗಿಸಿದೆ. ಆದರೆ, ನಾನು ಜ್ಯುಬಿಲಿಯಂಟ್ ಸಿಬ್ಬಂದಿ ನನಗೆ ಕೋವಿಡ್ ಪರಿಕ್ಷೆ ಮಾಡಿ ಎಂದು ಹಲವರು ಕಾರ್ಖಾನೆ ಐಡಿ ಕಾರ್ಡಿನೊಂದಿಗೆ ಮಂಗಳವಾರ ದಿಂದ ಇಲಾಖೆಯತ್ತ ಬರುತ್ತಿದ್ದಾರೆ. ಇದರಿಂದ ತಾಲೂಕು ಆರೋಗ್ಯ ಇಲಾಖೆ ಪಾಲಿಗೆ ತಲೆ ನೋವಾಗಿದೆ.
ಕಾರ್ಖಾನೆಯ ಆಡಳಿತ ವರ್ಗ ಇವರ ಹೆಸರನ್ನು ಏಕೆ ನೀಡಿಲ್ಲ. ಇವರೆಲ್ಲ ಕ್ವಾರಂಟೈನ್ ಅವಧಿ ಮುಗಿಯುವವರಿಗೂ ಎಲ್ಲಿದ್ದರು ಎಂದು ಪ್ರಶ್ನಿಸಿದ ಇಲಾಖೆ, ಈಗ ಜ್ಯುಬಿಲಿಯಂಟ್
ಅಧಿಕಾರಿಗಳಿಂದ ಸ್ಪಷ್ಟನೆ ಯೊಂದಿಗೆ ಬಂದರೆ ಮಾತ್ರ ಪರೀಕ್ಷ ಮಾಡಲಾಗು ವುದು ಎಂದಿದೆ. ಕೊರೊನಾ ವಿಷಯದಲ್ಲಿ ಸತ್ಯವನ್ನು ಹೇಳದ ಜ್ಯುಬಿಲಿಯಂಟ್ ತನ್ನ ನೌಕರರ
ವಿಷಯದಲ್ಲೂ ಮರೆ ಮಾಚಿದ್ದು ಏಕೆ ಎಂಬ ಪ್ರಶ್ನೆ ಮಾದಿದೆ.