Advertisement
ಗ್ರಾ. ಪಂ. ಮಟ್ಟದಲ್ಲಿ ಪಿಡಿಒ, ಕಾರ್ಯ ದರ್ಶಿ, ದ್ವಿತಿಯ ದರ್ಜೆ ಸಹಾಯಕರನ್ನು ಈ ಹಿಂದಿನ ಚುನಾವಣೆಯ ಪ್ರಕ್ರಿಯೆಯಂತೆ ಚುನಾವಣೆ ವಿಶೇಷ ಕರ್ತವ್ಯ ಗಳಿಗೆ ಇದುವರೆಗೆ ನಿಯೋಜಿಸಿಲ್ಲ. ಪ್ರಸ್ತುತ ಎಲ್ಲ ಗ್ರಾ. ಪಂ. ಅಧಿಕಾರಿಗಳು, ಸಿಬಂದಿ ಅದೇ ಗ್ರಾ. ಪಂ. ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ಚುನಾ ವಣೆ ಪೂರ್ವ ತಯಾರಿ, ಗ್ರಾಮ ಮಟ್ಟದ ಮಾಹಿತಿ ಸಂಗ್ರಹದ ಮೇಲುಸ್ತು ವಾರಿಯನ್ನು ಮಾತ್ರ ವಹಿಸಲಾಗಿದೆ.
ಅರ್ಜಿ ಹಿಡಿದು ಗ್ರಾ. ಪಂ.ಗೆ ಹೋದರೆ ಚುನಾವಣೆ ನೀತಿ ಸಂಹಿತೆ ಇದೆ. ಈಗ ಕೆಲವು ಸೇವೆ ಕೊಡಲು ಸಾಧ್ಯವಿಲ್ಲ. ಅರ್ಜಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಗ್ರಾ. ಪಂ.ಗಳಲ್ಲಿ ಹೇಳು ತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಸ್ತುತ ಗ್ರಾ. ಪಂ. ಗಳಲ್ಲಿ ಸಾಮಾನ್ಯ ಸಭೆ ಮಾಡಲು ಸಾಧ್ಯವಿಲ್ಲ. ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ, ಯಾವ ಅರ್ಜಿಗಳಿಗೂ ಅನುಮೋದನೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹಲವು ವಿಷಯಗಳ ಕುರಿತಂತೆ ಗ್ರಾ.ಪಂ. ಸಿಬಂದಿ, ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಯಾವುದೇ ಅರ್ಜಿಗಳನ್ನು ಮಾನ್ಯ ಮಾಡುತ್ತಿಲ್ಲ.
Related Articles
ಕಟ್ಟಡ ಲೈಸೆನ್ಸ್, ಡೋರ್ ನಂಬರ್, ಬೋರ್‌ವೆಲ್ ಎನ್‌ಒಸಿ, 9/11, ಖಾತಾ ಬದಲಾವಣೆ ಮೊದಲಾದ ಸೇವೆಗೆ ಜನರು ದಿನ ಬೆಳಗಾದಲ್ಲಿ ಗ್ರಾ. ಪಂ.ಗೆ
ಬರುತ್ತಾರೆ. ಗ್ರಾ. ಪಂ.ಗಳತ್ತ ಅರ್ಜಿ ಹಿಡಿದು ಓಡಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿರುವ ವೃದ್ದಾಪ್ಯ ಪಿಂಚಣಿ, ವಿಧವಾ ಭತ್ತೆ ಸಹಿತ ಅಗತ್ಯ ಸಾರ್ವಜನಿಕ ಸೇವೆಗಳನ್ನು ನೀತಿ ಸಂಹಿತೆಯಡಿ ಸ್ಥಗಿತಗೊಳಿಸಲಾಗಿದೆ. ಆದರೆ ಗ್ರಾ. ಪಂ. ಮಟ್ಟದಲ್ಲಿ ಸಾರ್ವಜನಿಕರಿಗೆ ಯಾವ ಸೇವೆ ಕೊಡಬಹುದು, ಕೊಡಬಾರದು ಎಂಬ ಬಗ್ಗೆ ಆಯೋಗವು ಸ್ಪಷ್ಟತೆ ನೀಡದೆ ಇರುವುದರಿಂದ ಅಧಿಕಾರಿ, ಸಿಬಂದಿ ಗೊಂದಲಪಡುವಂತಾಗಿದೆ.
Advertisement
– ಅವಿನ್ ಶೆಟ್ಟಿ