Advertisement
ವಯನಾಡಿನಲ್ಲಿ 2ನೇ ಬಾರಿಗೆ ಅಭೂತಪೂರ್ವ ಜಯಗಳಿಸಿದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಕೇರಳದಲ್ಲಿ ರಾಹುಲ್ ರೋಡ್‌ಶೋ ಹಾಗೂ ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ವೇಳೆ ಕ್ಷೇತ್ರ ಆಯ್ಕೆ ಸಂಬಂಧಿಸಿದಂತೆ ತಮಗೆ ಎದುರಾಗಿರುವ ಗೊಂದಲವನ್ನು ಜನರಿಗೆ ತಿಳಿಸಿ, ತಮಗೆ ಮತ್ತೂಮ್ಮೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದವನ್ನೂ ಹೇಳಿದ್ದಾರೆ.
ಇದೇ ವೇಳೆ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್, “ಮೋದಿ ತಮ್ಮನ್ನು ತಾವು ದೈವಾಂಶ ಸಂಭೂತರು ಎಂದಿದ್ದರು. ಅದು ನಿಜ, ಮೋದಿ ಹಿಂದೆ ಕಾಣದ ದೇವರೊಬ್ಬರು ಇದ್ದಾರೆ. ದೇಶದ ಏರ್‌ಪೋರ್ಟ್‌ಗಳು, ವಿದ್ಯುತ್ ಸ್ಥಾವರಗಳನ್ನು ಅದಾನಿ, ಅಂಬಾನಿಗೆ ನೀಡುವಂತೆ ಆ ದೇವರೇ ಮೋದಿಗೆ ನಿರ್ದೇಶನ ನೀಡಿರಬಹುದು. ಆದರೆ ನಾನೊಬ್ಬ ಸಾಮಾನ್ಯ ಮನುಷ್ಯ. ದೇಶದ ಬಡ ಜನರೇ ನನಗೆ ದೇವರು ಎಂದು ಹೇಳಿದ್ದಾರೆ. ವಯನಾಡ್‌ಗೆ ರಾಗಾ ಗುಡ್‌ಬೈ?: ಕೆಪಿಸಿಸಿ ಅಧ್ಯಕ್ಷ ಸುಳಿವು
ಕ್ಷೇತ್ರ ಆಯ್ಕೆ ಬಗ್ಗೆ ರಾಹುಲ್ ಸಂದಿಗ್ಧತೆಯಲ್ಲಿರುವಾಗಲೇ ಅವರು ವಯನಾಡು ಕ್ಷೇತ್ರ ತೊರೆಯಬಹುದೆಂಬ ಬಗ್ಗೆ ಅಲ್ಲಿನ ಕೆಪಿಸಿಸಿ ಮುಖ್ಯಸ್ಥ ಸುಧಾಕರನ್ ಸುಳಿವು ನೀಡಿದ್ದಾರೆ. ರಾಹುಲ್ ರಾಷ್ಟ್ರ ಮುನ್ನಡೆಸಬೇಕಾದವರು. ಅವರು ವಯನಾಡಿನಲ್ಲೇ ಉಳಿಯಬೇಕೆಂದು ನಿರೀಕ್ಷಿಸುವುದಾಗಲಿ, ಅವರು ಕ್ಷೇತ್ರ ತೊರೆಯುತ್ತಾರೆಂದು ಬೇಸರ ಪಡುವುದಾಗಲೀ, ನಾವು ಮಾಡಬಾರದು. ಎಲ್ಲರೂ ಪರಿಸ್ಥಿತಿ ಅರ್ಥೈಸಿಕೊಂಡು ಅವರಿಗೆ ಬೆಂಬಲ ನೀಡಬೇಕು ಎಂದು ಸುಧಾಕರನ್ ಜನರಿಗೆ ಕರೆ ನೀಡಿದ್ದಾರೆ. ಈ ಹೇಳಿಕೆಯು ರಾಹುಲ್ ವಯನಾಡು ತೊರೆಯುವುದು ಬಹುತೇಕ ಖಚಿತ ಎಂಬ ಅನುಮಾನ ಮೂಡಿಸಿದೆ.