Advertisement

ವಂಶಾಡಳಿತ,ವಿಕಾಸ ನಡುವಿನ ಸಂಘರ್ಷ

06:35 AM Nov 28, 2017 | Harsha Rao |

ಅಹ್ಮದಾಬಾದ್‌: “”ಈ ಬಾರಿಯ ಗುಜರಾತ್‌ ವಿಧಾನಸಭಾ ಚುನಾವಣೆ ಅಭಿವೃದ್ಧಿ ಮೇಲಿನ ನಂಬಿಕೆ ಹಾಗೂ ರಾಜವಂಶ ರಾಜಕೀಯದ ನಡುವಿನ ಸಂಘರ್ಷ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸೋಮವಾರ ಬೆಳಗ್ಗೆ ಇಲ್ಲಿನ ಕಛ… ಜಿಲ್ಲೆಯ ಬುಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ನಿರಂತರ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‌ಗೆ ನೀಡಿದ ಎದುರೇಟಿನ ಪರಿ ಹೀಗಿತ್ತು. ಭಾಷಣದುದ್ದಕ್ಕೂ ವಿಪಕ್ಷ ಕಾಂಗ್ರೆಸ್‌ ವಿರುದ್ಧ ವಾಗಾœಳಿ ನಡೆಸಿದರು. ಡಿ. 9ರಂದು ರಾಜ್ಯ ವು ಮೊದಲ ಹಂತದ ಮತ ದಾನಕ್ಕೆ ಸಾಕ್ಷಿಯಾ ಗಲಿರುವ ಹಿನ್ನೆಲೆಯಲ್ಲಿ ತಮ್ಮ ತವರು ರಾಜ್ಯದಲ್ಲಿ ಮೋದಿ ಎರಡು ದಿನಗಳ ಪ್ರಚಾರವನ್ನು ಆರಂಭಿಸಿದರು.

ಮುಂಬಯಿ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಇತ್ತೀಚೆಗೆ ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದಕ್ಕೆ ಮೋದಿಗೆ ಟಾಂಗ್‌ ನೀಡಿದ್ದ ರಾಹುಲ್‌ ಗಾಂಧಿಗೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, “”ಹಫೀಜ್‌ ಬಿಡುಗಡೆಗೆ ಕಾಂಗ್ರೆಸ್ಸಿಗರೇ ಚಪ್ಪಾಳೆ ತಟ್ಟಿದ್ದಾರೆ. ಡೊಕ್ಲಾಂ ವಿವಾದದ ವೇಳೆ, ಚೀನಾ ರಾಯಭಾರಿಯನ್ನು ಭೇಟಿಯಾಗಿ (ರಾಹುಲ್‌) ಆಲಂಗಿಸಿ ಬಂದವರೂ ಕಾಂಗ್ರೆಸ್ಸಿಗರೆ. ಇದೆಲ್ಲವೂ ಭಾರತೀಯ ಸೈನಿಕರಿಗೆ ಮಾಡಿದ ದ್ರೋಹ ಎಂದೆನಿಸಲಿಲ್ಲವೇ? ಈಗ ನಾನು ಆಲಂಗಿಸಿದ್ದನ್ನು ಮಾತ್ರ ಏಕೆ ಪ್ರಶ್ನಿಸುತ್ತಿದ್ದೀರಿ?” ಎಂದು ಛಾಟಿ ಬೀಸಿದರು.

ಹಫೀಜ್‌ ಬಿಡುಗಡೆ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ರಾಹುಲ್‌, “”ನೀವು ಆಲಂಗಿಸಿದ್ದ ಟ್ರಂಪ್‌ ಕೈಯ್ಯಲ್ಲಿ ಹಫೀಜ್‌ ಬಿಡುಗಡೆ ತಡೆಯಲು ಸಾಧ್ಯವಾಗಲಿಲ್ಲ. ಬಹುಶಃ ಟ್ರಂಪ್‌ ಅವರಿಗೆ ನಿಮ್ಮ ಮತ್ತಷ್ಟು ಅಪ್ಪುಗೆ ಬೇಕಾಗಬಹುದು” ಎಂದು ಛೇಡಿಸಿದ್ದರು.

ಇನ್ನು, ರಾಫೆಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಬದಲಾಯಿಸಿದ್ದಕ್ಕೆ ಯಾರಿಗೆ ಲಾಭ ಮಾಡಲು ಈ ಒಪ್ಪಂದ ಬದಲಾಯಿಸಿದ್ದೀರಿ ಎಂದು ಇತ್ತೀಚೆಗೆ ರಾಹುಲ್‌ ಗಾಂಧಿ ಕೇಳಿದ್ದ ಪ್ರಶ್ನೆಗೂ ಉತ್ತರಿಸಿದ ಅವರು, “”ಚೀನಾ ರಾಯಭಾರಿಯನ್ನು ನೀವು ಯಾರ ಲಾಭಕ್ಕಾಗಿ ಅಪ್ಪಿಕೊಂಡಿದ್ದಿರಿ?” ಎಂದು ಮರುಪ್ರಶ್ನೆ ಹಾಕಿದರು.

Advertisement

ಅಮೆರಿಕ ಬಳಿಕ ಪಾಕ್‌ ವಿರುದ್ಧ ಫ್ರಾನ್ಸ್‌ ಕೆಂಡ
2008ರ ಮುಂಬಯಿ ದಾಳಿ ರೂವಾರಿ, ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ದಾವತ್‌ನ ಮುಖ್ಯಸ್ಥ ಹಫೀಸ್‌ ಸಯೀದ್‌ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕ ಪಾಕಿಸ್ತಾನಕ್ಕೆ ತನ್ನ ಅಸಮಾಧಾನವನ್ನು ತಿಳಿಸಿದ ಬೆನ್ನಲ್ಲೇ, ಫ್ರಾನ್ಸ್‌ ಕೂಡ ಈ ಕುರಿತು ಸಿಟ್ಟು ಹೊರಹಾಕಿದೆ. ಸರ್ಕಾರ ಸಯೀದ್‌ ಬಿಡುಗಡೆ ಕುರಿತು ತನ್ನ ಅತಂಕವನ್ನು ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ಫ್ರಾನ್ಸ್‌ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಜೊತೆಗೆ, ಫ್ರಾನ್ಸ್‌ ಮತ್ತು ಭಾರತ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ. 2018ರಲ್ಲಿ ಪ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಅಲ್‌ ಮ್ಯಾಕ್ರಾನ್‌ ಭಾರತ ಭೇಟಿ ಮಾಡುವ ಸಂದರ್ಭ “ಭಯೋತ್ಪಾದಕ ಶಕ್ತಿಗಳನ್ನು ಹಿಮ್ಮೆಟ್ಟಲು ಪರಸ್ಪರ ಸಹಕಾರ ಉತ್ತಮಪಡಿಸುವುದೇ ಮುಖ್ಯ ವಿಷಯವಾಗಲಿದೆ’ ಎಂದಿದೆ. 

ನಾನು ಮಾರಿದ್ದು ಟೀಯನ್ನು, ದೇಶವನ್ನಲ್ಲ! 
ತಮ್ಮನ್ನು ಚಹಾವಾಲಾ ಎಂದು ಟೀಕಿಸಿರುವ ಕಾಂಗ್ರೆಸ್‌ ವಿರುದ್ಧ ಸೋಮವಾರ ಮಧ್ಯಾಹ್ನ ರಾಜ್‌ಕೋಟ್‌ನಲ್ಲಿ ನಡೆದ ರ್ಯಾಲಿ ಭಾಷಣದಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ಕುಟುಕಿದರು. “”ನಾನು ಬಡತನದ ಹಿನ್ನೆಲೆಯಿಂದ ಬಂದವನೆಂಬ ಕಾರಣಕ್ಕೆ ಕಾಂಗ್ರೆಸ್‌ ನನ್ನನ್ನು ಇಷ್ಟಪಡುವುದಿಲ್ಲ. ಹೌದು, ನಾನು ಹಿಂದೆ ಟೀ ಮಾರುತ್ತಿದ್ದೆ. ಆದರೆ, ದೇಶವನ್ನು ಮಾರಿರಲಿಲ್ಲ” ಎಂದು ತಿರುಗೇಟು ನೀಡಿದರು. ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಮೆಮೆಯೊಂದನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್‌, ಅದರಲ್ಲಿ ಮೋದಿ ಚಹಾ ಮಾರುತ್ತಿದ್ದ ದಿನಗಳನ್ನು ಅಪಹಾಸ್ಯ ಮಾಡಿತ್ತು.

ಮೋದಿ ಮ್ಯಾರಥಾನ್‌ 
ಗುಜರಾತ್‌ ಪ್ರಚಾರಕ್ಕೆ ಧುಮುಕಿರುವ ಪ್ರಧಾನಿ ಮೋದಿ, ಸೋಮವಾರ ನಾಲ್ಕು ಕಡೆ ಬೃಹತ್‌ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬೆಳಗ್ಗೆ ಕಛ… ಜಿಲ್ಲೆಯ ಬುಜ್‌ನಲ್ಲಿ ಮೊದಲ ರ್ಯಾಲಿ ನಡೆಸಿದ ಅವರು, ಆನಂತರ ರಾಜ್‌ಕೋಟ್‌ನ ಜಸಾªನ್‌ಗೆ ತೆರಳಿ ರ್ಯಾಲಿಯಲ್ಲಿ ಪಾಲ್ಗೊಂಡರು. ಬಳಿಕ ಅಮ್ರೇಲಿಯಲ್ಲಿನ ಬೃಹತ್‌ ಬಹಿರಂಗ ಸಭೆಯಲ್ಲಿ, ಅಲ್ಲಿಂದ ಸಂಜೆ ಹೊತ್ತಿಗೆ ಸೂರತ್‌ ಬಳಿಯ ಕಂಡೋದರಾ ಎಂಬಲ್ಲಿ ಮತ್ತೂಂದು ರ್ಯಾಲಿಯಲ್ಲಿ ಭಾಗವಹಿಸಿದರು.
ನ. 29ರಂದು ಮೋದಿಯವರ 2ನೇ ಸುತ್ತಿನ ಪ್ರಚಾರ ಆರಂಭವಾಗಲಿದೆ. ಅಂದು, ಸೋಮನಾ ಥಪುರ ಬಳಿಯ ಮೊರ್ಬಿ, ಪ್ರಾಚಿ ಹಳ್ಳಿಗಳ ಸಮೀಪ ಮೊದಲ ರ್ಯಾಲಿ ನಡೆಯಲಿದೆ. ಅದೇ ದಿನ ಭಾವ್‌ನಗರ್‌ನ ಪಟಿಯಾಲಾ, ದಕ್ಷಿಣ ಗುಜರಾತ್‌ನ ನವ್‌ಸಾರಿಗಳಲ್ಲಿ ರ್ಯಾಲಿಗಳು ನಡೆಯಲಿವೆ. ಸುಮಾರು ಐದಾರು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ಈ ರ್ಯಾಲಿಗಳನ್ನು ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next