ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿನ ರಸ್ತೆಗಳ ದೋಷ ಮುಕ್ತ ಅವಧಿಯಲ್ಲಿರುವ (ಡಿಎಲ್‌ಪಿ)ರಸ್ತೆಗಳನ್ನು ಪಟ್ಟಿಮಾಡಿ ಸುಸ್ಥಿತಿ ಯಲ್ಲಿಲ್ಲದ ರಸ್ತೆಗಳನ್ನು ಗುತ್ತಿಗೆದಾ ರರಿಂದ ಕೂಡಲೆ ದುರಸ್ತಿಪಡಿಸಬೇಕು ಎಂದು ಮುಖ್ಯ ಆಯುಕ್ತರು ಗೌರವ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ತ ವ್ಯಾಪ್ತಿಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಜಲಮಂಡಳಿ, ಬೆಸ್ಕಾಂ ನಿಂದ ರಸ್ತೆಗಳನ್ನು ಹಗೆದು ತೀರಾ ಹಾಳಾಗಿರುವ ರಸ್ತೆಗಳನ್ನು ತ್ವರಿತವಾಗಿ ದುರಸ್ತಿ ಪಡಿಸಬೇಕು. ಯಶವಂತಪುರ ವಿಧಾನಸಭಾ ಕ್ಷೇತ್ತ ವ್ಯಾಪ್ತಿಯಲ್ಲಿ 5 ವಾರ್ಡ್‌ಗಳು ಬರಲಿದ್ದು, 110 ಹಳ್ಳಿಗಳ ಪೈಕಿ 19 ಹಳ್ಳಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಲಿವೆ.
ಈ ಸಂಬಂಧ ಜಲಮಂಡಳಿ ವತಿ ಯಿಂದ ನಡೆಯುತ್ತಿರುವ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೆಸ್ಕಾಂ ಅಳವಡಿಸುತ್ತಿರುವ ನೆಲದಡಿ ಕೇಬಲ್ ಕಾಮಗಾರಿಯನ್ನು ಕೂಡ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದರು.
ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಗಾಂಧಿನಗರ ಹೊಸಕೆರೆಯು 43.3 ಎಕರೆ ಪ್ರದೇಶದಲ್ಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2019ರಲ್ಲಿ ಪಾಲಿಕೆಗೆ ಹಸ್ತಾಂತರವಾಗಿದೆ. ಪ್ರಸ್ತುತ ಕೆರೆಯ ಬಂಡ್ ನಲ್ಲಿ ಕೆರೆಯ ನೀರು ಸೋರಿಕೆಯಾಗುತ್ತಿದ್ದು, ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಜೊತೆಗೆ ಜಲಮಂಡಳಿಯ ಲೈನ್ ನಿಂದ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಈ ಸಂಬಂಧ ಬಿಡಿಎ ಹಾಗೂ ಜಲಮಂಡಳಿಯಿಂದ ಇರುವ ಸಮಸ್ಯೆಯನ್ನು ಸರಿಪಡಿಸಿ ಕೊಡುವುದಾಗಿ ತಿಳಿಸಿದರು.
ದೊಡ್ಡಬೊಮ್ಮಸಂದ್ರ ವಾರ್ಡ್ ವ್ಯಾಪ್ತಿಯ ರಸ್ತೆಗಳ ಪರಿಶೀಲನೆ: ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮಾನ್ಯ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಸ್ಕಾಂ ವತಿಯಿಂದ ನೆಲದಡಿ 11 ಕೆ.ವಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆ ಭಾಗದ ಪ್ರತಿ 100 ಅಡಿ ದೂರದಲ್ಲಿ ಹಗೆದು ಕೇಬಲ್ ಅಳವಡಿಸುತ್ತಿದ್ದಾರೆ.
ಇದನ್ನೂ ಓದಿ:- ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಸಹಕರಿಸಿ
ರಸ್ತೆ ಹಗೆದ ಬಳಿಕ ಅದನ್ನು ಮುಚ್ಚುವ ಕಾರ್ಯವಾಗುತ್ತಿಲ್ಲ. ಜೊತೆಗೆ ಕೇಬಲ್ಗಳು ರಸ್ತೆ ಮೇಲೆಯೇ ಬಿಡಲಾಗುತ್ತಿದ್ದು, ಅದನ್ನು ಸರಿಯಾಗಿ ಮುಚ್ಚಬೇಕು. ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿ ಚರಂಡಿ ಕೆಲಸ ನಡೆಯುತ್ತಿದ್ದು, ಕೂಡಲೆ ಕಾಮಗಾರಿ ಪೂರ್ಣಗೊಳಿಸಬೇಕು.
ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಹಕಾರ ಸಚಿವ ಎಸ್ .ಟಿ.ಸೋಮಶೇಖರ್, ವಲಯ ಆಯುಕ್ತರು ರೆಡ್ಡಿ ಶಂಕರ ಬಾಬು, ವಲಯ ಜಂಟಿ ಆಯುಕ್ತರು ನಾಗರಾಜು, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಬೃಹತ್