Advertisement

ಆತ್ಮವಿಶ್ವಾಸ: ಜಾನ್‌ ಫಾನ್‌ ನೊಯ್ಮಾನ್‌

08:20 PM Jan 27, 2020 | Lakshmi GovindaRaj |

ಇಪ್ಪತ್ತನೇ ಶತಮಾನ ಕಂಡ ಉತ್ಕೃಷ್ಟ ಗಣಿತಜ್ಞರಲ್ಲಿ ಒಬ್ಬನಾದ ಜಾನ್‌ ಫಾನ್‌ ನೊಯ್ಮಾನ್‌ಗೆ ತನ್ನ ಬುದ್ಧಿವಂತಿಕೆಯ ಬಗ್ಗೆ ಅದಮ್ಯ ವಿಶ್ವಾಸ ಇತ್ತು. ಗಣಿತದಲ್ಲಂತೂ ತನಗಿಂತ ಬೇಗನೆ ಉತ್ತರ ಹೇಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎಂದು ಅವನು ಭಾವಿಸಿದ್ದ. ಅವನ ಭಾವನೆಯನ್ನು ಮುರಿಯುವ ಪ್ರಸಂಗ ಎಂದೂ ನಡೆಯಲೇ ಇಲ್ಲ ಎನ್ನುವುದೂ ಗಮನೀಯ. ಒಮ್ಮೆ ಯಾಕೋಬ್‌ ಬ್ರೊನೋಸ್ಕಿ ಎಂಬ ಇನ್ನೊಬ್ಬ ಗಣಿತಜ್ಞನಿಗೂ ನೊಯ್ಮಾನ್‌ಗೂ ಒಂದು ಗಣಿತ ಸಮಸ್ಯೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂತು. ಇಬ್ಬರೂ ತಮ್ಮದೇ ಸರಿ ಎಂದು ವಾದಿಸಿದರು.

Advertisement

ಅದಾಗಿ ಎರಡು ದಿನಗಳ ಬಳಿಕ ರಾತ್ರಿ ಒಂದು ಗಂಟೆಗೆ ನೊಯ್ಮಾನ್‌ ಮನೆಗೆ ಫೋನ್‌ ಕರೆ ಬಂತು. ಅರೆನಿದ್ದೆಯಲ್ಲಿ ಬಂದು ರಿಸೀವರ್‌ ಎತ್ತಿಕೊಂಡರೆ ಅತ್ತ ಕಡೆ ಬ್ರೊನೋಸ್ಕಿಯ ಧ್ವನಿ. “ಕಳೆದೆರಡು ದಿನಗಳಿಂದ ಆ ಸಮಸ್ಯೆಯ ಬಗ್ಗೆ ಯೋಚಿಸುತ್ತಿದ್ದೆ. ಈಗಷ್ಟೇ ಅದರ ಪೂರ್ಣ ಪರಿಹಾರ ಹೊಳೆಯಿತು. ಅದರ ಪ್ರಕಾರ ನಿನ್ನ ವಾದವೇ ಸರಿ ಎಂದು ಒಪ್ಪಿಕೊಳ್ಳಬೇಕಾ­ಗುತ್ತದೆ. ನಿನಗಿದು ಸಂತೋಷದ ಸುದ್ದಿಯಾದೀತೆಂದು, ಉತ್ತರ ಸಿಕ್ಕಿದೊಡನೆ ಫೋನ್‌ ಮಾಡಿದೆ. ನಿದ್ರಾಭಂಗವಾದರೆ ಕ್ಷಮಿಸು’ ಎಂದ ಬ್ರೊನೋಸ್ಕಿ. ನಿದ್ರೆಯಿಂದೆದ್ದ ಕೋಪದಲ್ಲಿದ್ದ ನೊಯ್ಮಾನ್‌ “ನನ್ನ ಗಣಿತದಲ್ಲಿ ತಪ್ಪು ಕಂಡುಹಿಡಿದಾಗ ಮಾತ್ರ ಫೋನ್‌ ಮಾಡಬಹುದು. ಸರಿಯಿರುವಾಗೆಲ್ಲ ಫೋನ್‌ ಮಾಡುವ ಅವಶ್ಯಕತೆಯಿಲ್ಲ ‘ ಎಂದು ಕುಕ್ಕಿದ.

* ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next