Advertisement

ವಿಶ್ವಾಸಮತ: ವಿಚಾರಣೆಯಿಂದ ಹಿಂದೆ ಸರಿದ ಎಜಿ

10:30 AM Jul 08, 2017 | |

ಹೊಸದಿಲ್ಲಿ: ತಮಿಳುನಾಡು ವಿಧಾನಸಭೆಯಲ್ಲಿ ಫೆ.18ರಂದು ನಡೆದ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ವಿಶ್ವಾಸಮತ ಕುರಿತ ಪ್ರಕರಣದ ವಿಚಾರಣೆಯಿಂದ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌ ಹಿಂದೆ ಸರಿದಿದ್ದಾರೆ. ವಿಶ್ವಾಸಮತದ ವೇಳೆ ಶಾಸಕರು ಒತ್ತಡಕ್ಕೆ ಒಳಗಾಗಿದ್ದು, ವಿಶ್ವಾಸಮತವನ್ನೇ ಅನೂರ್ಜಿತಗೊಳಿಸಬೇಕು ಎಂದು ಅಣ್ಣಾಡಿಎಂಕೆ ಬಣದ ಕೆ. ಪಾಂಡಿರಾಜನ್‌ ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಪನ್ನಿರ್‌ಸೆಲ್ವಂ ಬಣಕ್ಕೆ ತಾವು ಕಾನೂನು ಸಲಹೆ ನೀಡುತ್ತಿರುವ ಕಾರಣ ಈ ಪ್ರಕರಣದಲ್ಲಿ ವಾದ ಮಂಡಿಸಲು ಇಷ್ಟಪಡುವುದಿಲ್ಲ ಎಂದು ಸ್ವಯಂ ಪ್ರೇರಿತವಾಗಿ ವಿಚಾರಣೆಯಿಂದ ವೇಣುಗೋಪಾಲ್‌ ಹಿಂದೆ ಸರಿದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next