Advertisement

ಉದ್ಯೋಗ ಖಾತರಿ ಸಿಬಂದಿ ಭರ್ತಿಗೆ ಮುಂದಾದ ಕೇಂದ್ರ

10:39 AM Mar 03, 2017 | Team Udayavani |

ಹೊಸದಿಲ್ಲಿ : ಕಪ್ಪುಹಣ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರಕ್ಕೆ ತನಿಖೆಗೆ ಮತ್ತು ಹೊಸ ಕಾರ್ಯಯೋಜನೆ ಜಾರಿಗೆ ಸಿಬ್ಬಂದಿಯೇ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ. ಆದಾಯ ತೆರಿಗೆ ಇಲಾಖೆ, ಪೊಲೀಸ್‌, ಕಸ್ಟಮ್ಸ್‌ ಮತ್ತು ಸುಂಕ ವಲಯಕ್ಕೆ 1.8 ಲಕ್ಷ ಹೊಸ ಸಿಬ್ಬಂದಿಯನ್ನು ನೇಮಿಸಲು ಸರಕಾರ ಮುಂದಾಗಿದೆ.

Advertisement

ಪ್ರಸ್ತುತ ರೈಲ್ವೆಯ 13.31 ಲಕ್ಷ ಸಿಬ್ಬಂದಿ ಜತೆಗೆ ಒಟ್ಟು 55 ಇಲಾಖೆಗಳ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ 32.84 ಲಕ್ಷ. 2018ರ ವೇಳೆಗೆ ಈ ಸಂಖ್ಯೆಯನ್ನು 35.67 ಲಕ್ಷಕ್ಕೆ ಹಿಗ್ಗಿಸಲು ಸರಕಾರ ಚಿಂತಿಸಿದೆ. ಅದರಲ್ಲೂ ಅಪನಗದೀಕಣದಿಂದ ಆದಾಯ ತೆರಿಗೆ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದ್ದು, 46,236 ಸಿಬ್ಬಂದಿ ಸಾಲುತ್ತಿಲ್ಲ ಎನ್ನುವ ಕೊರಗು ಕೇಂದ್ರದ್ದು. ಹೀಗಾಗಿ, ದುಪ್ಪಟ್ಟು ಸಿಬ್ಬಂದಿಯ ನೇಮಕಕ್ಕೆ ನಿರ್ಧರಿಸಲಾಗಿದೆ. ಪೊಲೀಸ್‌ ಪಡೆಯಲ್ಲಿ (ಪಾರ್ಲಿಮೆಂಟರಿ ಮತ್ತು ದಿಲ್ಲಿ ಪೊಲೀಸ್‌) ಈಗ 10,07,366 ಸಿಬ್ಬಂದಿಯಿದ್ದು, 2018ರ ವೇಳೆಗೆ 11,13, 683 ಮುಟ್ಟಲಿದೆ. ಕಸ್ಟಮ್ಸ್‌ ಮತ್ತು ಸುಂಕ ಇಲಾಖೆಗೂ 41 ಸಾವಿರ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಆದರೆ, ರೇಲ್ವೆ ಇಲಾಖೆಗೆ ಮಾತ್ರ ಹೊಸ ನೇಮಕಾತಿ ಇಲ್ಲ. ಖಾಲಿಯಾದ ಸ್ಥಾನಗಳಿಗಷ್ಟೇ ಭರ್ತಿ ಕಾರ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next