Advertisement

ಸಾವಿನ ಪ್ರಮಾಣ ತಗ್ಗಿಸಲು ವ್ಯಾಪಕ ಪರೀಕ್ಷೆ ನಡೆಸಿ

02:09 PM Aug 29, 2020 | Suhan S |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ -19ಕ್ಕೆ ಸಂಬಂಧಿಸಿದಂತೆ ಸಾವಿನ ಪ್ರಕರಣ ಗಳ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ಸಕ್ರಿಯ ಕಣ್ಗಾವಲು ಕೊರತೆಯೇ ಕಾರಣವೆಂದುವೈದ್ಯಕೀಯ ತಜ್ಞರ ಸಮಿತಿ ವಿಶ್ಲೇಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ತೀವ್ರಗೊಳಿಸಲು ಹಾಗೂ ರ್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಪರೀಕ್ಷೆಗಳನ್ನು ವ್ಯಾಪಕವಾಗಿ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚಿಸಿದ್ದಾರೆ.

Advertisement

ಕೋವಿಡ್‌ ಕಾರಣದಿಂದ ಸಾವಿಗೀಡಾದವರ ಪೈಕಿ 50 ವರ್ಷ ಮೇಲ್ಪಟ್ಟವರೇ ಹೆಚ್ಚು ಇರುವುದು ಕಂಡುಬಂದಿದೆ. ಅಲ್ಲದೇ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಕೋವಿಡ್‌ ನಿಂದ ಮೃತಪಟ್ಟ ಬಗ್ಗೆಯೂವರದಿಯಾಗಿದೆ. ಹೀಗಾಗಿ ಸಾವು ಸಂಭವಿಸಿದ ಗ್ರಾಮಾಂತರ ಪ್ರದೇಶಗಳಲ್ಲಿ ವಯೋವೃದ್ಧರು, ಮಧುಮೇಹ, ಕ್ಷಯ, ಎಚ್‌ಐವಿ, ಡಯಾಲಿಸಿಸ್‌ಗೆ ಒಳಗಾಗಿರುವವರು, ಗರ್ಭಿಣಿಯರು, ಬಾಣಂತಿಯರುಸೇರಿದಂತೆ ಆರೋಗ್ಯ ಕಾಳಜಿಗಾಗಿ ಗುರುತಿಸಲಾಗಿರುವ ವಿಶೇಷ ವರ್ಗದವರಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮೂಲಕ ಕೋವಿಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಶೀತ ದಂತಹ (ಐಎಲ್‌ಐ), ಸಾರಿ (ತೀವ್ರ ಉಸಿರಾಟ ತೊಂದರೆ) ಪ್ರಕರಣ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಈ ಪ್ರಕರಣಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮುಂದಿನ ತಪಾಸಣೆಗೆ ಕ್ರಮ ವಹಿಸುವ ಮೂಲಕವೂ ಸೋಂಕು ತಡೆಗೆ ಮುಂದಾಗುವಂತೆ ತಿಳಿಸಲಾಗಿದೆ. ಆರೋಗ್ಯ, ಆಶಾ ಕಾರ್ಯಕರ್ತೆಯರು, ಇತರೆ ವೈದ್ಯಕೀಯ ಸಿಬ್ಬಂದಿ ನೆರವಿನೊಂದಿಗೆ ತಾಲೂಕು ಆರೋಗ್ಯ ಅಧಿಕಾರಿಗಳು ಕಣ್ಗಾವಲು ಸರ್ವೇಕ್ಷಣಾ ಕಾರ್ಯ ತೀವ್ರ ಗೊಳಿಸಬೇಕು. ಇನ್ಸಿಡೆಂಟ್‌ ಕಮಾಂಡರ್‌ಗಳು ಕಣ್ಗಾವಲು ಸರ್ವೇಕ್ಷಣಾ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಬೇಕೆಂದರು. ಜನತೆ ಜಿಲ್ಲಾಡಳಿತ ಆರೋಗ್ಯ ಸಂಬಂಧಿ ನೀಡುವ ಸಲಹೆ ಸೂಚನೆ ಮುಂಜಾಗ್ರತಾ ಕ್ರಮ ಪಾಲಿಸುವ ಮೂಲಕ ಕೊರೊನಾ ತಡೆಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next