ಈ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, “ಜನಗಣತಿ ಜತೆಗೆ ಜಾತಿ ಗಣತಿ ಕಾರ್ಯಗತಗೊಂಡಾಗ ಅದು ಐತಿಹಾಸಿಕ ಹೆಜ್ಜೆಯಾಗಲಿದೆ. ಇದರಿಂದ ಅಭಿವೃದ್ಧಿ ಯೋಜನೆಗಳು ಅತ್ಯಂತ ದುರ್ಬಲ ವರ್ಗದವರಿಗೆ ತಲುಪಲು ಸಹಕಾರಿಯಾಗಿದೆ. ಜತೆಗೆ ಹೆಚ್ಚು ಬಲಿಷ್ಠ ಮತ್ತು ಸರ್ವಾಂಗೀಣ ಭಾರತ ರಚನೆ ಸಾಧ್ಯವಾಗಲಿದೆ’ ಎಂದು ಹೇಳಿದರು.
Advertisement
ಇದರಿಂದ ಸಮಾಜದ ಜಾತಿ ಸಂಯೋಜನೆ ಮತ್ತು ಸಾಮಾಜಿಕ-ಆರ್ಥಿಕ ಸೂಚಕಗಳಲ್ಲಿ ಅದರ ಪ್ರತಿಫಲನದ ಬಗ್ಗೆ ಸಮಗ್ರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲಿದೆ” ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ವಿರುದ್ಧ ಆಕ್ರೋಶ ಮುಂದುವರಿಸಿರುವ ಎಸ್‌ಪಿ ಅಧ್ಯಕ್ಷ ಅಖೀಲೇಖ್ ಯಾದವ್ ಕಾಂಗ್ರೆಸ್‌ಗೆ ಈಗ ಜಾತಿ ಗಣತಿ ನಡೆಸುವುದು ಬೇಕಾಗಿದೆ. ಏಕೆಂದರೆ ಅವರು ಹುಡುಕುತ್ತಿದ್ದ ಮತಗಳು ಈಗ ತಮ್ಮ ಬಳಿ ಇಲ್ಲ ಎಂಬುದು ಅವರಿಗೆ ಅರಿವಾಗಿದೆ. ಈಗ ಗಣತಿಗೆ ಒತ್ತಾಯ ಮಾಡುತ್ತಿರುವ ಅದೇ ಪಕ್ಷ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ್ದ ಜಾತಿ ಗಣತಿಯ ವರದಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.