ಹೊಸದಿಲ್ಲಿ: ಇ-ಕಾಮರ್ಸ್ ಕಂಪೆನಿಗಳು ಇನ್ನು ವಿದೇಶದ ಸರ್ವರ್‌ಗಳಲ್ಲಿ ಡೇಟಾ ಸಂಗ್ರಹಿಸುತ್ತಿದ್ದರೆ ಅದನ್ನು ಇತರ ಕಂಪನಿ ಗಳೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂಬ ಕಠಿನ ನಿಯಮವನ್ನು ಭಾರತ ಸರಕಾರ ರೂಪಿಸಿದೆ.
ಇ-ಕಾಮರ್ಸ್ ಕರಡು ನೀತಿ ಯನ್ನು ಪ್ರಕಟಿಸಿರುವ ಕೇಂದ್ರ ಸರಕಾರ, ವ್ಯಕ್ತಿಗಳ ಸಮ್ಮತಿ ಪಡೆದೂ ಈ ಡೇಟಾಗಳನ್ನು ಇತರ ಕಂಪೆನಿಗಳಿಗೆ ವರ್ಗಾವಣೆ ಮಾಡು ವಂತಿಲ್ಲ ಎಂದಿದೆ. ಅಷ್ಟೇ ಅಲ್ಲ, ವಿದೇಶದ ಸರಕಾರ ಗಳಿಗೆ ಡೇಟಾ ಹಂಚಿಕೊಳ್ಳಲು ಭಾರತ ಸರಕಾರದ ಸಂಬಂಧಿತ ಇಲಾಖೆಯ ಅನು ಮತಿ ಪಡೆಯುವುದೂ ಕಡ್ಡಾಯವಾಗಿರಲಿದೆ.
ಭಾರತದ ಡೇಟಾವನ್ನು ಭಾರತದ ಏಳ್ಗೆಗಾ ಗಿಯೇ ಬಳಸಬೇಕು ಎಂಬ ಧ್ಯೇಯವನ್ನಿಟ್ಟು ಕೊಂಡು ಈ ನೀತಿಯನ್ನು ರೂಪಿಸಲಾಗಿದ್ದು, ಇದಕ್ಕೆ ರಾಷ್ಟ್ರೀಯ ಇಕಾಮರ್ಸ್ ನೀತಿ, ಭಾರತದ ಡೇಟಾ ಭಾರತದ ಅಭಿವೃದ್ಧಿಗಾಗಿ ಎಂದು ಶೀರ್ಷಿಕೆ ನೀಡಲಾಗಿದೆ.
ಇದು ಇ-ಕಾಮರ್ಸ್ ಮಾತ್ರವಲ್ಲ, ಸಾಮಾಜಿಕ ಮಾಧ್ಯಮಗಳು, ಸರ್ಚ್ ಇಂಜಿನ್ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಇಂದು ಡೇಟಾ ಎಂಬುದು ತೈಲವಿದ್ದಂತೆ ಎಂಬುದು ಸಾಬೀತಾಗಿರುವ ಸಂಗತಿ. ಗಡಿ ಯಾಚೆಗೆ ಡೇಟಾ ಸುಲಭವಾಗಿ ಸಾಗ ಬಹುದು. ನಮ್ಮ ದೇಶದ ಡೇಟಾವನ್ನು ವಿದೇಶ ಗಳಿಗೆ ಸಾಗಿಸಬಹುದು ಹಾಗೂ ಅದನ್ನು ಸಂಗ್ರಹಿಸಬಹುದು.
ಅಲ್ಲದೆ ಅದನ್ನು ಸೂಕ್ತ ಪ್ರಮಾಣದಲ್ಲಿ ಮೌಲೀಕರಣವನ್ನೂ ನಡೆಸ ಬಹುದು. ಈ ಡೇಟಾ ನಿಯಂತ್ರಣಕ್ಕಾಗಿ ಡೇಟಾ ಪ್ರಾಧಿಕಾರ ರಚಿಸಲಾಗುತ್ತದೆ.
ಈ ಪ್ರಾಧಿಕಾರವು ನೀತಿಯ ಅನುಷ್ಠಾನದ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ನೀತಿಯಲ್ಲಿ ವಿವರಿಸಲಾಗಿದೆ.