Advertisement

ಪಾಲಿಕೆ ಆಯುಕ್ತರ ಮೇಲೆ ಹಲ್ಲೆಗೆ ಖಂಡನೆ

02:06 PM Dec 21, 2021 | Suhan S |

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮೇಲೆ ದುಷ್ಕರ್ಮಿಗಳುನಡೆಸಿರುವ ಮಾರಣಾಂತಿಕ ಹಲ್ಲೆ ಖಂಡಿಸಿಪಾಲಿಕೆ-ಸರ್ಕಾರಿ ನೌಕರರು ನಗರದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರಸಂಘದ ಜಿಲ್ಲಾ ಘಟಕಗಳು ಸೋಮವಾರ ನಗರ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಕೂಡಲೇ ಎಲ್ಲ ಆರೋಪಿತರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದವು.

ಈ ವೇಳೆ ಮಾತನಾಡಿದ ನೌಕರರ ಸಂಘದಪ್ರಮುಖರು, ಮಹಾನಗರ ಪಾಲಿಕೆ ಆಯುಕ್ತವಿಜಯಕುಮಾರ ಮೆಕ್ಕಳಕಿ ಅವರು ನಗರದ ಸುಕೂನ ಕಾಲೋನಿ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಪರಿಶೀಲನೆಗೆ ತೆರಳಿದಾಗ ಕೆಲವರು ಅನಗತ್ಯವಾಗಿಕರ್ತವ್ಯಕ್ಕೆ ಅಡ್ಡಿ ಮಾಡಿ ಹಲ್ಲೆ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಮೆಕ್ಕಳಕಿ ಅವರು ಜಿಲ್ಲೆಯಲ್ಲಿಪ್ರಾಮಾಣಿಕ ಕರ್ತವ್ಯದ ಮೂಲಕವೇ ತಮ್ಮನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಇಂಥಅಧಿಕಾರಿ ಮೇಲೆ ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿ ಅಧಿಕಾರಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆಂದು ದೂರಿದರು.

ಸರ್ಕಾರಕೂಡಲೇಹಲ್ಲೆನಡೆಸಿದದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಜಿಲ್ಲೆ ಸರ್ಕಾರಿ ನೌಕರರು, ಪೌರ ಕಾರ್ಮಿಕರು ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

Advertisement

ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ಸರಕಾರಿ ನೌಕರರಿಗೆ ಸೇವಾ ಭದ್ರತೆ ನೀಡಬೇಕು.ಕರ್ತವ್ಯ ನಿರ್ವಹಣೆಯಲ್ಲಿ ನೌಕರರಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರಬೋರಣ್ಣವರ ಮಾತನಾಡಿ, ಮಹಾನಗರ ಪಾಲಿಕೆ ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ನಗರದ ಜನರ ಸೇವೆಗಾಗಿ ಅಧಿಕಾರಿಗಳು-ಸಿಬ್ಬಂದಿ ನಿರಂತರ ಸೇವೆ ನೀಡುತ್ತಾರೆ. ಪೌರ ನೌಕರರು ದೈನಂದಿನ ಜೀವನದಲ್ಲಿ ನಗರ ಸ್ವಚ್ಛತೆಗಾಗಿ, ಕಾನೂನು ಪರಿಪಾಲನೆ ಸಂದರ್ಭದಲ್ಲಿ ಇಂಥಕೃತ್ಯಗಳು ನಡೆಸುವ ಪ್ರವೃತ್ತಿ ವಿರುದ್ಧಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದರು.

ಏಕಾಏಕಿಯಾಗಿ ಗುಂಪು-ಗುಂಪಾಗಿ ಬಂದು ಹೆದರಿಸುವ, ಹಲ್ಲೆ ಮಾಡುವ, ಅರಾಜಕತೆ ನಡೆಸುವಕೃತ್ಯಕ್ಕೆ ಕಡಿವಾಣ ಹಾಕಬೇಕು. ಸದರಿ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಮಹಾನಗರ ಪಾಲಿಕೆಯ ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮಣ ಹಂದ್ರಾಳ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ, ಆರ್‌ .ಪಿ.ಚಲವಾದಿ, ಆರ್‌.ಬಿ.ಶಿರಶಾಡ, ಎಲ್‌.ಎಂ.ಮೋರೆ ಹಾಗೂ ವಿಠ್ಠಲ ಹೊನ್ನಳ್ಳಿ ಮಾತನಾಡಿದರು.

ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜುಬೇರ ಕೆರೂರ, ಕಾರ್ಯದರ್ಶಿ ರಾಜಶೇಖರ ಧೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಜಗದೀಶ ಬೋಳಸೂರ, ಶಿವಾನಂದ ಮಂಗನ್ನವರ, ಉಮೇಶ ಕೌಲಗಿ, ನಿಜುಮೇಲಿನಕೇರಿ, ಬಸೀರ್‌ ನದಾಫ್‌, ಶರಣಬಸುಬೇನೂರ, ಎಚ್‌.ಕೆ. ಬೂದಿಹಾಳ, ಶಿವಲಿಂಗ ಪಟ್ಟಣಶೆಟ್ಟಿ, ವಿ.ಬಿ. ಕಂಪ್ಲಿ, ಅಜೀತ ಭುಸೇರಿಸೇರಿದಂತೆ ಸರ್ಕಾರಿ ನೌಕರರು ಹಾಗೂ ಪಾಲಿಕೆನೌಕರರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next