Advertisement

70 ಲಕ್ಷ ರೂ.ನಲ್ಲಿ ಕಾಂಕ್ರೀಟ್‌ ರಸ್ತೆ

03:09 PM Apr 12, 2022 | Team Udayavani |

ಮಾಗಡಿ: ಕಕ್ಕಪ್ಪನಪಾಳ್ಯದ ಕಾಂಕ್ರೀಟ್‌ ರಸ್ತೆಯನ್ನು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ತಗ್ಗೀಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಕ್ಕಪ್ಪನಪಾಳ್ಯದ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಭರವಸೆ ಈಡೇರಿಕೆ: ಚುನಾವಣೆ ವೇಳೆ ನನ್ನನ್ನು ಪ್ರೀತಿಯಿಂದ ಗ್ರಾಮಕ್ಕೆ ಬರಮಾಡಿಕೊಂಡು ನನಗೆ ಹೆಚ್ಚು ಮತಗಳನ್ನು ಕೊಡುವ ಮೂಲಕ ಬಹು ಮತದಿಂದ ಗೆಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ಬೆಂಬಲಕ್ಕೆ ನಿಂತಿದ್ದಾರೆ. ಅವರ ಪ್ರೀತಿ ವಿಶ್ವಾಸ ಚಿರ ಋಣಿ ಯಾಗಿದ್ದೇನೆ ಎಂದರು. ಚುನಾವಣೆ ಮತಕೇಳಲು ನಾನು ಬಂದ ವೇಳೆ ನಾನು ಈ ಗ್ರಾಮಕ್ಕೆ ಸುಸಜ್ಜಿತ ಕಾಂಕ್ರೀಟ್‌ ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಆರ್‌ಡಿಪಿಆರ್‌ ನಿಂದ ಸುಮಾರು 70 ಲಕ್ಷ ರೂ. ಅನುದಾನ ಮಂಜೂರಾತಿ ತಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ.

ಪಕ್ಷ ಸಂಘಟನೆಗೆಒತ್ತು: ಈ ಭಾಗದ ಸುತ್ತಮುತ್ತಲ ಏಳು ಹಳ್ಳಿಗಳ ಸಮಗ್ರ ಅಭಿವೃದ್ಧಿಗೊಳಿಸಲು ಸಂಕಲ್ಪ ತೊಟ್ಟಿದ್ದೇನೆ. ಜೆಡಿಎಸ್‌ ವರಿಷ್ಠರು ನನಗೆ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. ರಾಮನಗರ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ವಾರಕ್ಕೊಮ್ಮೆ ಜೆಡಿಎಸ್‌ ಕಾರ್ಯಕರ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದು, ಸಂಘಟಿಸುವುದು ಮಾಡಿ, ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ. ತಾಲೂಕು ಕೇಂದ್ರಗಳಲ್ಲೂ ಅಧ್ಯಕ್ಷರನ್ನು ನೇಮಕ ಮಾಡಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಲು ಪ್ರೋತ್ಸಾಹಿಸಲಾಗುವುದು. ಈ ಕ್ಷೇತ್ರದ ಅಭಿವೃದ್ಧಿ ಮಾಗಡಿ ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನಾಗಿಸಿದ್ದಾರೆ ಎಂದ ಅವರ ನನ್ನ ಆಡಳಿತದ ಅವಧಿಯಲ್ಲಿ ಬೆಳಗುಂಬ ಬೆಟ್ಟದಲ್ಲಿ ಕ್ರಷರ್‌ ನಡೆಸಲು ಬಿಡುವುದಿಲ್ಲ, ಗ್ರಾಮದ ಜನರ ವಿರುದ್ಧವಾಗಿ ಎಂದೂ ನಡೆದುಕೊಳ್ಳುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.

ಕ್ರಷರ್‌ ಅನುಕೂಲಕ್ಕೆ ಕಾಂಕ್ರಿಟ್‌ ರಸ್ತೆ: ಬೆಳಗುಂಬ ಬೆಟ್ಟದಲ್ಲಿ ಕ್ರಷರ್‌ ನಡೆಯುತ್ತಿತ್ತು. ಇದರಿಂದ ಕಕ್ಕಪ್ಪನಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರಿಗೆ ತೊಂದರೆಯಾಗಿದೆ. ಈ ಭಾಗದಲ್ಲಿರುವ ರೈತರೆಲ್ಲರೂ ಅರ್ಧ, ಒಂದು ಎಕರೆ ಜಮೀನು ಹೊಂದಿದ್ದೇವೆ. ಅರ್ಧ ಕಿಮೀ ಸಮೀಪವೇ ಕ್ರಷರ್‌ ಇರುವುದು, ಇದರಿಂದ ಮನೆ ಬಿರುಕುಬಿಟ್ಟಿವೆ. ರಾತ್ರಿ ವೇಳೆ ನಿದ್ದೆ ಮಾಡಲಾಗುತ್ತಿಲ್ಲ, ಜತೆಗೆ ಕ್ರಷರ್‌ ಶಬ್ಧಕ್ಕೆ ದನಕರುಗಳು ಕುರಿ,ಮೇಕೆಗಳು ಸಾವನ್ನಪ್ಪಿವೆ ಎಂದು ಕಕ್ಕಪ್ಪನಪಾಳ್ಯದ ಪುಷ್ಪಲತಾ ರಾಮಕೃಷ್ಣ ಆರೋಪಿಸಿದರು.

Advertisement

ಬಡಕುಟುಂಬದವರಾಗಿದ್ದು, ನಮಗೆ ಕ್ರಷರ್‌ನಿಂದ ತೊಂದರೆಯಾಗುತ್ತಿದೆ. ಕ್ರಷರ್‌ ಗೆ ನೀಡಿರುವ ಅನುಮತಿ ರದ್ದುಪಡಿಸಿ ನೆಮ್ಮದಿಯಿಂದ ಬದುಕು ನಡೆಸಲು ಸಹಕರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಸಧ್ಯಕ್ಕೆ ಕ್ರಷರ್‌ ನಿಲ್ಲಿಸಲಾಗಿದೆ. ಇದಕ್ಕೆ ಕೆಲವರು ನಮ್ಮ ವಿರುದ್ಧ ಪೊಲೀಸ್‌ ಕೇಸು ಎಂಬಬೆದರಿಕೆ ಹಾಕಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ, ನೆಮ್ಮದಿ ಜೀವನ ಬೇಕಷ್ಟೆ. ಕ್ರಷರ್‌ಗೆ ಅನುಕೂಲ ಮಾಡಿಕೊಡಲು ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ ಎಂಬ ಆರೋಪವನ್ನು ಮಾಡಿದರು.

ಪುರಸಭಾ ಮಾಜಿ ಅಧ್ಯಕ್ಷ ನರಸೇಗೌಡ, ಬೆಳಗುಂಬ ಗ್ರಾಪಂ ಅಧ್ಯಕ್ಷ ಬಿ.ಎನ್‌.ಕೋಟಪ್ಪ, ಉಪಾಧ್ಯಕ್ಷ ಸದಾಶಿವಯ್ಯ, ಕನಕಾ ಗಿರೀಶ್‌, ಶೋಭಾ, ಭೈರಪ್ಪ, ಗಂಗಲಕ್ಷ್ಮಮ್ಮ,,ದವಳಗಿರಿ ಚಂದ್ರಣ್ಣ, ರಾಮಣ್ಣ , ಪದ್ಮಾ, ದಿನೇಶ್‌, ಭರತ್‌, ಮುನಿರಾಜು, ರಮೇಶ್‌, ಶಿವಣ್ಣ, ವೆಂಕಟೇಶ್‌, ಕುಮಾರ್‌, ರಂಗಸ್ವಾಮಿ, ರವಿ ಜಯಕುಮಾರ್‌, ನರಸಿಂಹಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next