Advertisement

ಕಳತ್ತೂರು, ಕುತ್ಯಾರು, ಎಲ್ಲೂರು ಸಂಪರ್ಕ ರಸ್ತೆ ಕಾಂಕ್ರೀಟ್‌ 

12:55 AM Feb 07, 2019 | Harsha Rao |

ಕಾಪು: ಡಾಮರಿನ ಭಾಗ್ಯವಿಲ್ಲದೇ ಸೊರಗಿದ್ದ ಕಳತ್ತೂರು ಕುತ್ಯಾರು ಎಲ್ಲೂರು ಸಂಪರ್ಕ ರಸ್ತೆ ಇದೀಗ ಸಂಪೂರ್ಣ ಕಾಂಕ್ರೀಟ್‌ಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧ ವಾಗುತ್ತಿದೆ.

Advertisement

ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಡಾಮರು ಕಂಡು 25 ವರ್ಷಗಳಾಗಿದ್ದು ರಸ್ತೆಯಲ್ಲಿ ಸಂಚರಿಸುವುದೇ ಅಸಾಧ್ಯ ವಾಗಿತ್ತು.  ಈಗ  5 ಕೋ. ರೂ. ಅಂದಾಜು ಮೊತ್ತದಲ್ಲಿ ಸಂಪೂರ್ಣ ಕಾಂಕ್ರೀಟ್‌ಗೊಂಡಿದೆ.   

ಇತ್ತೀಚೆಗೆ ರಸ್ತೆ ದುರವಸ್ತೆ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಜತೆಗೆ ಸ್ಥಳೀಯರು, ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದು, ಇದರಿಂದ ಎಚ್ಚೆತ್ತ ಜನಪ್ರತಿನಿಧಿಗಳು ದುರಸ್ತಿಯ ಭರವಸೆ ನೀಡಿದ್ದರು. ರಸ್ತೆ ದುರಸ್ತಿಯಾದ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸಿದೆ.  

ಬಹುಕಾಲದ ಸಮಸ್ಯೆಗೆ ಮುಕ್ತಿ
ಎಲ್ಲೂರು – ಇರಂದಾಡಿ – ಕುತ್ಯಾರು – ಕಳತ್ತೂರು ರಸ್ತೆ ದುರವಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನಮ್ಮೂರಿನ ರಸ್ತೆ ಕಾಂಕ್ರೀಟ್‌ಗೊಂಡಿದ್ದು ಸಂತಸ ತಂದಿದೆ.  
-ನಿತೇಶ್‌ ಶೆಟ್ಟಿ ಇರಂದಾಡಿ ಸಂಚಾಲಕ, ರಸ್ತೆ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next