ಕಾಬೂಲ್:ಯುದ್ಧಗ್ರಸ್ತ ರಾಷ್ಟ್ರ ಅಫ್ಘಾನಿಸ್ತಾನ ದಲ್ಲಿ ತಾಲಿಬಾನ್ ಉಗ್ರರ ಪ್ರಭಾವ ಹೆಚ್ಚಾಗಿದೆ. ಬುಧವಾರ ಆ ದೇಶದ ವಿವಿಧೆಡೆ ನಡೆದ ಹೋರಾಟದಲ್ಲಿ ಇನ್ನೂ ಮೂರು ಪ್ರಾಂತೀಯ ರಾಜಧಾನಿಗಳು ಸರ್ಕಾರ ವಶ ದಿಂದಕೈಜಾರಿವೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಲ್ಲಿದ ತೆರವುಗೊಳಿಸಿದ ನಂತರ ಬೆಳವಣಿಗೆಯಲ್ಲಿ ಇದುವರೆಗೆ ಮೂರನೇ ಎರಡರಷ್ಟು ಪ್ರದೇಶವನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ಪಡೆದಿವೆ ಎಂದು ಅಫ್ಘಾನ್ ಸರ್ಕಾರವೇ ತಿಳಿಸಿದೆ.
ಜೈಲಿಗೇ ಉಗ್ರ ಲಗ್ಗೆ: ಕಂದಹಾರ್ ಪ್ರಾಂತ್ಯ ದಲ್ಲಿರುವ ಜೈಲಿಗೇಉಗ್ರರು ಲಗ್ಗೆಹಾಕಿದ್ದಾರೆ. ಅಲ್ಲಿಯ ಮುಖ್ಯ ದ್ವಾರವನ್ನು ಒಡೆದು ಹಾಕಿದ ಪರಿಣಾಮವಾಗಿ ಅಲ್ಲಿದ್ದ ಕೈದಿಗಳು ಪರಾರಿಯಾಗಿದ್ದಾರೆ. ಜೈಲು ಧ್ವಂಸ ಮಾಡಿರುವ ಬಗ್ಗೆ ಉಗ್ರ ಸಂಘಟನೆಯ ಖ್ವಾರಿ ಯೂಸುಫ್ ಅಹ್ಮದಿ ಚಿತಪಡಿಸಿದ್ದಾನೆ. ಅಲ್ಲಿನ ಕಾರಾಗೃಹದ ಸಂಪೂರ್ಣ ನಿಯಂತ್ರಣವನ್ನು ನಾವು ಪಡೆದುಕೊಂಡಿ ದ್ದೇವೆ. ಇದರ ಜತೆಗೆ ನಗರವೂ ಉಗ್ರ ಸಂಘಟನೆಯ ವಶವಾಗಿದೆ.
ಕಂದಹಾರ್ ಪ್ರಾಂತ್ಯದಲ್ಲಿ ನಡೆದ ಘೋರ ಕಾಳಗದಲ್ಲಿ 47 ಮಂದಿ ಅಸುನೀಗಿದ್ದಾರೆ. ಅಲ್ಲಿನ ಆಸ್ಪತ್ರೆಯೊಂದು ಈ ಮಾಹಿತಿ ನೀಡಿದೆ ಎಂದು ಅಲ್-ಜಜೀರಾ ಸುದ್ದಿ ವಾಹಿನಿ ವರದಿ ಮಾಡಿದೆ. ಸ್ಥಳೀಯ ನಿವಾಸಿ ಗಳು ಹೇಳುವ ಪ್ರಕಾರ ಆಸ್ಪತ್ರೆಯ ಆಸುಪಾಸಿನಲ್ಲಿಯೇ ಸರ್ಕಾರಿ ಪಡೆಗಳು ಮತ್ತು ಉಗ್ರರ ನಡುವೆ ಘನಘೋರ ಕದನ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ .
ಇದೇ ವೇಳೆ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಉಗ್ರರಿಂದ ಸುತ್ತುವರಿದಿರುವ ಭಾಲ್ಕ್ ಪ್ರಾಂತ್ಯಕ್ಕೆ ಧಾವಿಸಿ ಹೋಗಿದ್ದಾರೆ. ಇದುವರೆಗೆ ದೇಶದ ರಾಜಧಾನಿ ಕಾಬೂಲ್ ಗೆ ಮಾತ್ರ ಉಗ್ರರಿಂದ ನೇರ ತೊಂದರೆ ಉಂಟಾಗಿಲ್ಲ.
ಈ ಎಲ್ಲ ಗಲಾಟೆಗಳ ನಡುವೆ ಅಫ್ಘಾನಿ ಸ್ತಾನದ ಸೇನಾಮುಖ್ಯಸ್ಥರನ್ನು ಬದಲಾಯಿಸ ಲಾಗಿದೆ. ಸದ್ಯ ಜ.ಹಿಬಾತುಲ್ಲಾ ಅಲಿಜೈ ಮುಖ್ಯಸ್ಥರಾಗಿದ್ದು, ಅವರ ಸ್ಥಾನಕ್ಕೆ ಜ.ವಲಿ ಅಹ್ಮಜೈ ಅವರನ್ನು ನೇಮಿಸಲಾಗಿದೆ. ಈ ಬಗ್ಗೆಕಾರಣವನ್ನು ಸರ್ಕಾರ ನೀಡಿಲ್ಲ.
90 ದಿನದಲ್ಲಿ ಕಾಬೂಲ್ ವಶ
ಅಫ್ಘಾನಿಸ್ತಾನದಲ್ಲಿ ಪ್ರಬಲರಾಗಿರುವ ತಾಲಿಬಾನಿಗಳು ಗರಿಷ್ಠವೆಂದರೆ90 ದಿನಗಳಲ್ಲಿ ರಾಜಧಾನಿ ಕಾಬೂಲ್ ಅನ್ನುಕೈವಶ ಮಾಡಿಕೊಳ್ಳಲಿದೆ .ಈಬಗ್ಗೆ
ಅಮೆರಿಕದ ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಉಗ್ರರ ಜತೆಗೆ ಸರ್ಕಾರಿ ಪಡೆಗಳು ಸೋತರೆ ಕೇವಲ ಒಂದು ತಿಂಗಳಲ್ಲಿ ರಾಜಧಾನಿ ಉಗ್ರರ
ವಶವಾಗಲಿದೆ ಎಂದು ಹೇಳಲಾಗಿದೆ.