Advertisement

ಕಂಪ್ಯೂಟರ್‌ “ಸ್ಲೋ’ನಾ?

11:02 AM Oct 10, 2017 | |

ಕಂಪ್ಯೂಟರ್‌ ಸ್ಲೋ ಇದೆ ಅಂತ್ಲೋ, ದರಿದ್ರ ಇಂಟರ್ನೆಟ್‌ ಸ್ಪೀಡ್‌ ಇಲ್ಲ ಅಂತ್ಲೋ ಗೊಣಗ್ತಿರೋ ಹಲವರನ್ನು ನೋಡ್ತಿರ್ತೀವಿ. ಇಂಟರ್ನೆಟ್‌ ಸೆಂಟರ್‌ನಲ್ಲಿ ಒಂದು ಮೇಲ… ಕಳಿಸೋಕೆ ಹದಿನೈದು ನಿಮಿಷವಾದರೆ ಪಿತ್ತ ನೆತ್ತಿಗೇರುತ್ತೆ. ಹಳೇದಾದ ಕಂಪ್ಯೂಟರನ್ನು, ಅದರ ಮಾಲೀಕನನ್ನು ದೂರುತ್ತಾ ಕೂರುವುದರ ಬದಲು, ಅದೇಕೆ ನಿಧಾನವಾಗುತ್ತೆ ಅನ್ನೋದನ್ನು ಅರಿತರೆ, ಪರಿಹಾರ ಸುಲಭ. ಅದಕ್ಕೆ ನೀವು ಸಾಫ್ಟ್ವೇರ್‌ ಎಂಜಿನಿಯರ್‌ ಅಥವಾ ಗಣಕತಂತ್ರಜ್ಞನೇ ಆಗಬೇಕಿಲ್ಲ. ಕಂಪ್ಯೂಟರ್‌ ನಿಧಾನವಾಗೋಕಿರೋ ಒಂದಿಷ್ಟು ಸಾಮಾನ್ಯ ಕಾರಣಗಳು ಮತ್ತು ಅವುಗಳನ್ನು ಬಗೆಹರಿಸೋದು ಹೇಗೆಂಬುದನ್ನು ನೋಡೋಣ…

Advertisement

1. ನೀವು ಸರಿಯಾಗಿ ಶಟ್ ಡೌನ್‌ ಮಾಡೋಲ್ಲ!
ಇತ್ತೀಚೆಗೆ ನಮ್ಮೂರಿನಲ್ಲಿನ ಸೈಬರ್‌ ಸೆಂಟರಿಗೆ ಹೋಗಿದ್ದೆ. ಆದರೆ, ಅದಕ್ಕೆ ಹೊಕ್ಕರೆ “ನೆಟ್ಟಿದೆ, ಆದ್ರೆ, ಸ್ವಲ್ಪ ಸ್ಲೋ’ ಅಂದ್ರು. “ಪರ್ವಾಗಿಲ್ಲ ಕೊಡಿ’ ಅಂತ ತಗೊಂಡೆ. ಅದನ್ನು ಕರೆಂಟಿನ ಪ್ಲಗ್ಗುಗಳಿಗೆ ಹಾಕಿ, ಅದು ಆನ್‌ ಆಗಿ, ಡೆಸ್ಕ್ಟಾಪ್‌ನ ಸ್ಕ್ರೀನ್‌ ಸೇವರ್‌ ಕಾಣೋ ಹೊತ್ತಿಗೆ ಬರೋಬ್ಬರಿ ಹತ್ತು ನಿಮಿಷ ಕಳೆದೋಗಿತ್ತು. 

“ಏನಪ್ಪಾ ಕಾರಣ?’ ಅಂತಂದರೆ ಹಿಂದೆ ಕಂಪ್ಯೂಟರ್‌ ಬಳಸಿದವರು ಅದನ್ನು ಸರಿಯಾಗಿ ಶಟ…ಡೌನ್‌ ಮಾಡಿರಲಿಲ್ಲ. ಹಾಗಾಗಿ, ನಾನು ಅದನ್ನು ಆನ್‌ ಮಾಡಿದಾಗ ಸ್ಟಾರ್ಟ್‌ಅಪ್‌ ರಿಪೈರ್‌ ಶುರುವಾಗಿತ್ತು. ನಿಮ್ಮ ಆ ಹೊತ್ತಿನ ಕಂಪ್ಯೂಟರ್‌ ಬಳಕೆ ಮುಗಿದ ಕೂಡಲೇ ಶಟ… ಡೌನ್‌ ಮಾಡುವ ಬದಲು ಸೀದಾ ಕರೆಂಟಿನ ಸ್ವಿಚ್ಡ್ಆಫ್ ಮಾಡುತ್ತಿದ್ದೀರೆಂದರೆ, ನಿಮಗೂ ಇಂಥ ತೊಂದರೆ ಬರಬಹುದು. ನೀವು ಸದ್ಯದ ಮಟ್ಟಿಗೆ ಕಂಪ್ಯೂಟರನ್ನು ಬಳಸುತ್ತಿಲ್ಲ. ಆದರೆ, ಇನ್ನೊಂದರ್ಧ ಗಂಟೆಯಲ್ಲಿ ಮತ್ತೆ ಬಳಸುತ್ತೀರೆಂದರೆ ಅಥವಾ ಇಂಟರ್ನೆಟ… ಸೆಂಟರ್‌ ಇತ್ಯಾದಿ ಜಾಗಗಳ ಬಹುಜನರು ಬಳಸೋ ಕಂಪ್ಯೂಟರ್‌ ಬಳಸುತ್ತೀರೆಂದರೆ, ಲಾಗೌಟ… ಅಥವಾ ಹೈಬರ್ನೇಟ್‌ ಆಯ್ಕೆಗಳನ್ನು ಬಳಸಿ. ಇದರಿಂದ ಕಂಪ್ಯೂಟರ್‌ ಆನ್‌ ಆಗಲು ಬೇಕಾಗೋ ಸಮಯ ಬಹಳ ಕಡಿಮೆಯಿರುತ್ತದೆ. 

2. ಮೆಮೊರಿ/ ರ್ಯಾಮ್ ಅಪ್‌ಗ್ರೇಡ್‌ ಆಗಿಲ್ಲ
ಕಂಪ್ಯೂಟರ್‌ ನಿಧಾನವಾಗಲು ಮತ್ತೂಂದು ಕಾರಣವೆಂದರೆ, ರ್ಯಾಮ… ಕೊರತೆ. ಬಹಳ ಹಿಂದೆ ತಗೊಂಡ ಕಂಪ್ಯೂಟರುಗಳಾದರೆ ಅದರಲ್ಲಿ 512 ಎಂ.ಬಿ.ಯೋ, 1 ಜಿ.ಬಿ.ಯೋ ರ್ಯಾಮ… ಇರುತ್ತೆ. ಈಗಿನ ಹೊಸ ಆಪರೇಂಟಿಗ್‌ ಸಿಸ್ಟಂಗಳಿಗೆ ಅದನ್ನು ಅಪ್‌ಗ್ರೇಡ್‌ ಮಾಡೋಕೆ ಬರೋಲ್ಲ. ಮಾಡಿದರೂ ಆ ಕಂಪ್ಯೂಟರುಗಳು ನಿಧಾನವಾಗೋಕೆ ಶುರುವಾಗುತ್ತೆ. ಇಂಥವಕ್ಕೆ ಶಾಶ್ವತ ಪರಿಹಾರವೆಂದರೆ, ರ್ಯಾಮ್‌ ಹೆಚ್ಚಿಸೋದು. ಆದರೆ, 2 ಜಿ.ಬಿ., 4 ಜಿ.ಬಿ.- ಹೀಗೆ ಹೆಚ್ಚಿನ ರ್ಯಾಮ್‌ಗಳಿರೋ ಕಂಪ್ಯೂಟರುಗಳಲ್ಲೂ ಈ ಥರದ ಸಮಸ್ಯೆ ಎದುರಾದರೆ ಅಥವಾ “ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಇಲ್ಲವೇ?’ ಎಂದರೆ, ಖಂಡಿತಾ ಇದೆ. ನಿಮ್ಮ ಕಂಪ್ಯೂಟರಿನ ಕೆಳ ಮೂಲೆಯಲ್ಲಿರೋ ಟಾಸ್ಕ್ ಬಾರ್‌ನ ಮೇಲೆ (ದಿನಾಂಕ, ವಾಲ್ಯೂಮು ಮುಂತಾದವೆಲ್ಲಾ ತೋರಿಸೋ ಬಾರ್‌ನಲ್ಲಿರೋ ಖಾಲಿ ಜಾಗ) ರೈಟ್ ಕ್ಲಿಕ್‌ ಮಾಡಿ, ಟಾಸ್ಕ್ ಮ್ಯಾನೇಜರ್‌ ಆಯ್ಕೆ ಮಾಡಿ. ಅದರಲ್ಲಿ ಪರ್ಫಾಮೆನ್ಸ್‌ ಅನ್ನು ಆಯ್ಕೆಮಾಡಿ. ಅದರ ಮೇಲೆ ಕ್ಲಿಕ್ಕಿಸಿದಾಗ ಯಾವ ಅಪ್ಲಿಕೇಶನ್‌ ಜಾಸ್ತಿ ಮೆಮೊರಿ ತಿನ್ನುತ್ತಿದೆ ಅನ್ನೋದು ಗೊತ್ತಾಗುತ್ತೆ. ಚಿತ್ರದಲ್ಲಿ ತೋರಿಸಿದಂತೆ ಸಿ.ಪಿ.ಯು. ಅಥವಾ ಮೆಮೊರಿ ಅನ್ನುವ ಆಯ್ಕೆಯ ಮೇಲೆ ಕ್ಲಿಕ್ಕಿಸಿದರೆ, ಹೆಚ್ಚು ಸಿ.ಪಿ.ಯು. ಅಥವಾ ಮೆಮೊರಿ ತೆಗೆದುಕೊಳ್ಳುವ ಅಪ್ಲಿಕೇಶನ್ನುಗಳನ್ನು ತೋರಿಸುತ್ತದೆ. ಇದರಲ್ಲಿ ನಿಮಗೆ ಗೊತ್ತಿಲ್ಲದೇ ಇರುವ ಅಪ್ಲಿಕೇಶನ್ನುಗಳನ್ನು ಬಂದ್‌ ಮಾಡಬಹುದು. 

explorer.exe ಅನ್ನುವ ಮುಖ್ಯ ಅಪ್ಲಿಕೇಶನ್‌ ಒಂದನ್ನು ಬಂದ್‌ ಮಾಡದಿದ್ದರೆ ಕಂಪ್ಯೂಟರಿಗೆ ಯಾವ ಹಾನಿಯೂ ಇಲ್ಲ. ಬಂದ್‌ ಮಾಡಿದರೂ ಲಾಗೌಟ್/ ಶಟ್ ಡೌನ್‌ ಮಾಡಿ ಮತ್ತೆ ಲಾಗಿನ್‌ ಮಾಡಿದಾಗ ಇವು ತಾನೇ ತಾನಾಗಿ ಶುರುವಾಗುತ್ತವೆ. 

Advertisement

3. ಅಪ್ಲಿಕೇಷನ್‌ ಓವರ್‌ಲೋಡ್‌
ರ್ಯಾಮ್‌ ಎಲ್ಲಾ ಸರಿಯಿದ್ದರೂ ಕಂಪ್ಯೂಟರ್‌ ನಿಧಾನವಾಗುತ್ತಿದೆ ಅಂದ್ರೆ ಅದಕ್ಕೆ ಕಾರಣ ಸಿ.ಪಿ.ಯು. ಕೊರತೆ ಆಗಿರಬಹುದು. ಟಾಸ್ಕ್ ಮ್ಯಾನೇಜರಿನ ಸಿ.ಪಿ.ಯು. ಕಿಟಕಿಯಲ್ಲಿ ಸಿ.ಪಿ.ಯು. ಶೇ.100 ಅಥವಾ ಶೇ.50ಕ್ಕಿಂತ ಜಾಸ್ತಿ ತೋರಿಸ್ತಿದೆ ಅಂದ್ರೆ ಏನೋ ಸಮಸ್ಯೆ ಇದೆ ಅಂತಲೇ ಲೆಕ್ಕ. ಟಾಸ್ಕ್ ಮ್ಯಾನೇಜರನ್ನ ಬಳಸಿ ಜಾಸ್ತಿ ಸಿ.ಪಿ.ಯು. ಪವರ್‌ಅನ್ನು ಬಳಸುತ್ತಿರುವ ಅಪ್ಲಿಕೇಶನ್ನುಗಳನ್ನು ಚಿತ್ರದಲ್ಲಿ ತೋರಿಸಿದಂತೆ ಬಂದ್‌ ಮಾಡಬಹುದು. 

4. ತುಂಬಾ ಸ್ಟಾರ್ಟ್‌ಅಪ್‌ ಪ್ರೋಗ್ರಾಮ್‌ಗಳುಮ್
ಕಂಪ್ಯೂಟರ್‌ ನಿಧಾನವಾಗೋಕೆ ಮತ್ತೂಂದು ಕಾರಣವೆಂದರೆ ಸ್ಟಾರ್ಟಪ್‌(Start up) ಪ್ರೋಗ್ರಾಮ್ಸ್‌. ಕಂಪ್ಯೂಟರ್‌ ಆನ್‌ ಆದ ಕೂಡಲೆ ಹಲವಾರು ಸಾಫ್ಟ್ವೇರ್‌ ಅಪ್ಲಿಕೇಷನ್‌ಗಳು ಬ್ಯಾಕ್‌ಗ್ರೌಂಡಿನಲ್ಲಿ ಅಟೋಮ್ಯಾಟಿಕ್‌ ಆಗಿ ಶುರುವಾಗಿಬಿಡುತ್ತವೆ. ತುಂಬಾ ಸ್ಟಾರ್ಟಪ್‌ ಪ್ರೋಗ್ರಾಮ್‌ಗಳಿಂದ ಸಿಸ್ಟಂ ಸ್ಲೋ ಆಗುವ ಸಾಧ್ಯತೆ ಇದೆ. ಇವುಗಳಲ್ಲಿ ನಿಮಗೆ ಅಗತ್ಯವಿಲ್ಲದ ಪ್ರೋಗ್ರಾಂಗಳೂ ಇದ್ದಿರಬಹುದು. ಹೀಗಾಗಿ ಬೇಡದ ಪ್ರೋಗ್ರಾಂಗಳು ಈ ಲಿಸ್ಟಿನಲ್ಲಿದ್ದರೆ disable(ನಿಷ್ಕ್ರಿಯ) ಮಾಡಿರಿ. ಟಾಸ್ಕ್ ಮ್ಯಾನೇಜರಿನಲ್ಲೇ ಇರುವ ಸ್ಟಾರ್ಟಪ್‌ ಅನ್ನೋ ಟ್ಯಾಬ್‌ ಕ್ಲಿಕ್‌ ಮಾಡಿದರೆ, ಸ್ಟಾರ್ಟಪ್‌ ಪ್ರೋಗ್ರಾಮುಗಳ ಲಿಸ್ಟು ಮೂಡುತ್ತದೆ. ಅದರಲ್ಲಿ ನಿಮಗೆ ಬೇಡದೇ ಇರುವ ಪ್ರೋಗ್ರಾಮುಗಳನ್ನು  enabled  ಸ್ಥಿತಿಯಿಂದ disabled ಮಾಡಬಹುದು. ಈ ಲಿಸ್ಟಿನಲ್ಲಿ ಆಪರೇಟಿಂಗ್‌ ಸಿಸ್ಟಮ್‌ನ ಮುಖ್ಯವಾದ ಪ್ರೋಗ್ರಾಮುಗಳೂ ಇರುವುದರಿಂದ ಡಿಸೇಬಲ್‌ ಮಾಡುವಾಗ ಎಚ್ಚರಿಕೆ ಅಗತ್ಯ. 

ಪ್ರಶಸ್ತಿ ಪಿ.

Advertisement

Udayavani is now on Telegram. Click here to join our channel and stay updated with the latest news.

Next