Advertisement

ರಾಷ್ಟ್ರ ಭದ್ರತೆ ಹಿತಾಸಕ್ತಿಯಲ್ಲಿ ಕಂಪ್ಯೂಟರ್‌ ವಿಚಕ್ಷಣೆ: ಜೇತ್ಲಿ

07:18 PM Dec 21, 2018 | udayavani editorial |

ಹೊಸದಿಲ್ಲಿ : ‘ಯಾವುದೇ ಕಂಪ್ಯೂಟರ್‌ ನ ವಿಚಕ್ಷಣೆ  ಮತ್ತು ಅದರ ಗೂಢ ದರ್ಶನಕ್ಕೆ ಸಿಬಿಐ ಮತ್ತು ಭದ್ರತಾ ಸಂಸ್ಥೆಗಳಿಗೆ ಅವಕಾಶ ನೀಡುವ ಆದೇಶವನ್ನು  ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಹೊರಡಿಸಲಾಗಿದೆ’ ಎಂದು ಸರಕಾರದ ಮೇಲೆ ಮುಗಿ  ಬಿದ್ದಿರುವ ವಿರೋಧ ಪಕ್ಷಗಳಿಗೆ ಬಿಜೆಪಿ ಸರಕಾರ ಉತ್ತರಿಸಿದೆ.

Advertisement

”2009ರಲ್ಲಿ ಕಾಂಗ್ರೆಸ್‌ ನೇತೃತ್ವದ UPA ಸರಕಾರಾವಧಿಯಲ್ಲಿ ರೂಪಿಸಲಾಗಿದ್ದ ನಿಯಮಗಳಡಿ ಕೇಂದ್ರ ಗೃಹ ಸಚಿವಾಲಯವು ಪುನರಪಿ ಹೊರಡಿಸಿರುವ ಆದೇಶ ಇದಾಗಿದೆಯೇ ಹೊರತು ಹಾಲಿ ಸರಕಾರ ರೂಪಿಸಿರುವ ಹೊಸ ನಿಯಮವೇನೂ ಇದಲ್ಲ” ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ವಿಪಕ್ಷಗಳ ಭಯ ಮತ್ತು ಆಕ್ರೋಶವನ್ನು ನಿವಾರಿಸುವ ಪ್ರಯತ್ನವಾಗಿ ಹೇಳಿದರು. 

ಬಿಜೆಪಿ ಸರಕಾರ ದೇಶವನ್ನು ಕಣ್ಗಾವಲು ರಾಷ್ಟ್ರವನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹುಯಿಲೆಬ್ಬಿಸಿದ್ದವು. 

ಕಾಂಗ್ರೆಸ್‌ ಪಕ್ಷ ಅನಗತ್ಯವಾಗಿ ಸಣ್ಣ ಸಣ್ಣ ವಿಷಯಗಳನ್ನು ಪರ್ವತ ಮಾಡುತ್ತಿದೆಯಲ್ಲದೆ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ವಿಷಯದಲ್ಲಿ ಕ್ಷುಲ್ಲಕವಾಗಿ ಆಟವಾಡುತ್ತಿದೆ ಎಂದು ಆರೋಪಿಸಿದ ಜೇತ್ಲಿ, ಸಂಸತ್ತಿನಲ್ಲಿಂದು ಗದ್ದಲ ನಿರತ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next