ತಿ.ನರಸೀಪುರ: ಪ್ರಸಕ್ತ ಸನ್ನಿವೇಶದಲ್ಲಿ ಕಂಪ್ಯೂಟರ್ ಆಧಾರಿತ ತಾಂತ್ರಿಕ ಶಿಕ್ಷಣದ ಅಗತ್ಯವಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಆರಂಭಿಸಬೇಕು ಎಂದು ತಾಪಂ ಸದಸ್ಯ ಎಂ.ರಮೇಶ ಸಲಹೆ ನೀಡಿದರು.
ತಾಲೂಕಿನ ಡಣಾಯಕನಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತೀಕರಣದ ಕಾಲಘಟ್ಟದಲ್ಲಿ ಉದ್ಯೋಗ ಬೇಕಾದರೆ ಕಂಪ್ಯೂಟರ್ ಜಾnನ ಅವಶ್ಯತೆ ಇರುವುದರಿಂದ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಶಿಕ್ಷಣ ಮಕ್ಕಳಿಗೆ ಅಗತ್ಯವಿದೆ. ಈ ಸಂಬಂಧ ಜಿಪಂ ಸಿಇಒ ಅವರಿಗೂ ಪತ್ರ ಬರೆದಿದ್ದೇನೆ ಎಂದರು.
ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಡಣಾಯಕನಪುರ ಸರ್ಕಾರಿ ಶಾಲೆಯ ಪಕ್ಕದ ನಿವೇಶನ ಪಡೆಯಲಿಕ್ಕೆ ಇರುವ ಅಡಚಣೆಗಳನ್ನು ನಿವಾರಣೆ ಮಾಡಲು ಗಮನಹರಿಸಲಾಗುವುದು. ಅಲ್ಲದೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಜಿಪಂ ಸದಸ್ಯರು ಹಾಗೂ ತಾವು ಕೂಡ ಅನುದಾನ ನೀಡುತ್ತೇವೆ. ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾದ ಶಿಕ್ಷಣ ಈ ಶಾಲೆಯಲ್ಲಿ ದೊರೆಯುವಂತಾಗಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರದ ಉಚಿತ ಸೈಕಲ್‌ಗಳನ್ನು ವಿತರಿಸಿ ಗಗೇìಶ್ವರಿ ಜಿಪಂ ಕ್ಷೇತ್ರದ ಸದಸ್ಯೆ ಜಯಮ್ಮ ಮಾತನಾಡಿದರು. ಟಿಎಪಿಸಿಎಂಎಸ್ ನಿರ್ದೇಶಕ ಬಿ.ಶಿವಸ್ವಾಮಿ, ಕಿರಗಸೂರು ಮಹೀಂದ್ರಾ ಕೋಟಕ್ ಬ್ಯಾಂಕ್ ವ್ಯವಸ್ಥಾಪಕ ಸಮರಸಿಂಹ ಠಾಕೂರ, ಗ್ರಾಪಂ ಸದಸ್ಯ ಸಿ.ನಿಂಗರಾಜು, ಮುಖ್ಯ ಶಿಕ್ಷಕಿ ಎಂ.ಮಹದೇವಮ್ಮ,
-ಸಹ ಶಿಕ್ಷಕರಾದ ಸಿ.ಗೀತಾಸಲೋಮಿ, ಸಿ.ಎಸ್.ತ್ರಿವೇಣಿ, ಎಂ.ಶಿವರಾಜು, ಎಸ್.ಪಿ.ಸವಿತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಚಿನ್ನಬುದ್ಧಿ, ಸದಸ್ಯರಾದ ಬಿ.ಎಸ್. ಮಹದೇವಯ್ಯ, ಎಸ್.ಎಂ.ಶಶಿಕಾಂತ್, ಡಿ.ಎಂ.ಸುರೇಶ್‌ಕುಮಾರ್, ನಾಗಮಲ್ಲನಾಯಕ, ಮುಖಂಡ ರಾಜಶೇಖರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.