Advertisement

ಸಮಗ್ರ ಆರೋಗ್ಯ ಸುಧಾರಣೆಗೆ ಆದ್ಯತೆ

03:46 PM Mar 01, 2017 | Harsha Rao |

ಉಡುಪಿ: ಫಿಸಿಯೋಥೆರಪಿ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಪೂರಕವಾದ ಎಲ್ಲ ರಂಗಗಳನ್ನೂ ಒಳಗೊಂಡು ಸಮಗ್ರ ಆರೋಗ್ಯ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

Advertisement

ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ದ.ಕ. ಫಿಸಿಯೋಥೆರಪಿ ಶಿಕ್ಷಕರ ಸಂಘದ ಆಶ್ರಯಧಿದಲ್ಲಿ ಮಣಿಪಾಲದ ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸ್‌ (ಎಸ್‌ಒಎಎಚ್‌ಎಸ್‌) ಮಂಗಳಧಿವಾರ ಆಯೋಜಿಸಿದ “ಫಿಸಿಯೋಕಾನ್‌ 2017′ ಪೂರ್ವಧಿಸಮ್ಮೇಳನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಸರಕಾರಿ ಸ್ವಾಮ್ಯದಲ್ಲಿ ಒಂದು ಕಡೆ ಫಿಸಿಯೋಧಿಥೆರಪಿ ಸಂಸ್ಥೆ ಇದ್ದು ಇನ್ನೊಂದನ್ನು ಆರಂಭಿಸಲು ಯತ್ನಿಸಲಾಗುವುದು. ಫಿಸಿಯೋಧಿಥೆರಪಿ ಕೋರ್ಸ್‌ಗೆ ಬೇಡಿಕೆ ಇದೆ ಎಂದರು.

ಮಾನವ ಸಂಪದ
ಮಾನವ ಸಂಪನ್ಮೂಲಕ್ಕೆ ತರಬೇತಿ, ಶಿಕ್ಷಣವನ್ನು ಕೊಟ್ಟರೆ ಅದೇ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಮಣಿಪಾಲದ ಶಿಕ್ಷಣ ಸಂಸ್ಥೆಗಳು. ಬೆಂಗಳೂರು ಮಾಹಿತಿ ತಂತ್ರಧಿಜ್ಞಾನದ ಕೇಂದ್ರವಾಗಿ ಬೆಳೆಯಲು ಹಿಂದಿಧಿನವರು ಆರಂಭಿಸಿದ ಎಂಜಿನಿಯರಿಂಗ್‌ ಕಾಲೇಜುಧಿಗಳು ಕಾರಣ. ಮಣಿಪಾಲ ಸಂಸ್ಥೆ ಉತ್ತರ ಕರ್ನಾಟಕಧಿದಲ್ಲಿಯೂ ಕ್ಯಾಂಪಸ್‌ ತೆರೆದು ಅಲ್ಲಿನ ಅಬಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಸಹಧಿಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು, ಸಚಿವರು ಇದೇ ಮೊದಲ ಬಾರಿಗೆ ಮಣಿಪಾಲಕ್ಕೆ ಬಂದಿರುವುದು ಸಂತಸ ತಂದಿದೆ. ಸಚಿವರ ಅಪೇಕ್ಷೆಯಂತೆ ಉತ್ತರ ಕರ್ನಾಟಕದಲ್ಲಿ ಕ್ಯಾಂಪಸ್‌ ತೆರೆಯಲು ಪ್ರಯತ್ನಿಸುತ್ತೇವೆ ಎಂದರು. 

Advertisement

ಕುಲಪತಿ ಡಾ| ಎಚ್‌. ವಿನೋದ ಭಟ್‌ ಸ್ವಾಗತಿಸಿ ಎಸ್‌ಒಎಎಚ್‌ಎಸ್‌ ಡೀನ್‌ ಡಾ| ರಾಜಶೇಖರ್‌ ಅತಿಥಿಗಳನ್ನು ಪರಿಚಯಿಸಿದರು. ಕರ್ನಾಟಕ ರಾಜ್ಯ ಫಿಸಿಯೋಥೆರಪಿ ಫೆಡರೇಶನ್‌ ಕಾರ್ಯಾಧ್ಯಕ್ಷ ಡಾ| ಯು.ಟಿ. ಇಫ್ತಿಕಾರ್‌ ಅಲಿ ಪ್ರಸ್ತಾವನೆಗೈದರು. ವಿ.ವಿ. ಮಂಗಳೂರು ಕ್ಯಾಂಪಸ್‌ ಸಹಕುಲಪತಿ ಡಾ| ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಫಿಸಿಯೋಥೆರಪಿ ಉಪನ್ಯಾಸಕ ಅಬ್ರಹಾಂ ಸ್ಯಾಮುವೆಲ್‌ ಬಾಬು ನಿರ್ವಹಿಸಿ, ವಿಭಾಗ ಮುಖ್ಯಸ್ಥೆ ಡಾ| ವೈಶಾಲಿ ಕೆ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next