Advertisement

ಬೇಗ ಡಿಗ್ರಿ ಮುಗಿಸೋ ಅಂದ್ರೆ, ಮಾತಾಡೋದ್ನೇ ನಿಲ್ಸೊದಾ?

06:00 AM Dec 18, 2018 | |

ಪರೀಕ್ಷೆಗೆ ತಯಾರಿ ಜೋರಾಗಿ ನಡೆದಿದೆ ಅಂತ ಗೊತ್ತಾಯ್ತು. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿಯೇ ಕೆಲಸ ಪಡೆಯಲು ಶ್ರಮ ಪಡುತ್ತಿದ್ದೀಯ, ಅಲ್ವಾ? ಆದರೆ, ಫೋನು, ಮೆಸೇಜ್‌ ಮಾಡದಿರುವುದು ಯಾಕೆ? ನಾನೇನೂ ಮಾತಾಡಿಸಲೇಬೇಡ ಅಂದಿಲ್ಲವಲ್ಲ. 

Advertisement

ಏ ಹುಡುಗ ನೆನಪಿದೆಯಾ?
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ನೀನು ನನ್ನನ್ನು ನೋಡುತ್ತಲೇ ಇದ್ದೆಯಂತೆ. ಹಾnಂ, ಪದೇ ಪದೆ ನನ್ನೆಡೆಗೆ ನೋಡುವುದನ್ನೇ “ಕೆಲಸ’ ಮಾಡಿಕೊಂಡಿದ್ದ ನಿನ್ನನ್ನು, ಮೊದಲು ಗುರುತಿಸಿದ್ದು ನನ್ನ ಗೆಳತಿ. “ಅವನ್ಯಾಕೆ ಹಾಗೆ ನಿನ್ನನ್ನು ನೋಡುತ್ತಿದ್ದಾನೆ? ಪರಿಚಯಾನ?’ ಅಂತ ಕೇಳಿದ್ದಳು. “ನನಗೂ ಗೊತ್ತಿಲ್ಲ. ಇದೇ ಮೊದಲು ನಾನವನನ್ನು ನೋಡ್ತಿರೋದು’ ಅಂತ ಉತ್ತರಿಸಿದ್ದೆ.  

ಆವತ್ತು ಕಣ್ಣಲ್ಲಿ ಪರಿಚಯ ನಡೆದ ನಂತರ, ನಿನ್ನನ್ನು ಮತ್ತೆ ನೋಡಿದ್ದು ಬಸ್‌ ಸ್ಟಾಂಡ್‌ನ‌ಲ್ಲಿ. ನೀನು ನನ್ನತ್ತಲೇ ಬರುತ್ತಿರುವುದನ್ನು ನೋಡಿ, ಅದ್ಯಾಕೋ ಗಾಬರಿಯಾಗಿ ಬಸ್‌ ಹತ್ತಿ ಹೋಗಿಯೇಬಿಟ್ಟೆ.  ಹೀಗೆ ಪದೇ ಪದೆ ಕ್ಯಾಂಪಸ್‌ನಲ್ಲಿ ಒಬ್ಬರನ್ನೊಬ್ಬರು ನೋಡುತ್ತಿದ್ದೆವು. ಆದರೆ, ಮಾತನಾಡಿಸಬೇಕಂತ ನೀನು ಹತ್ತಿರ ಬಂದಾಗಲೆಲ್ಲ ನಾನು ಗಾಬರಿಯಿಂದ ಹೊರಟು ಹೋಗುತ್ತಿ¨ªೆ. 

ಆದರೆ, ಆವತ್ತು ಬಸ್‌ ಪಾಸ್‌ ಮಾಡಿಸಲೆಂದು ಹೊಸ ಬಸ್‌ ಸ್ಟಾಂಡ್‌ಗೆ ಹೋಗಿದ್ದಾಗ ನೀನು ಅಲ್ಲಿಯೇ ಇದ್ದೆ. ನೋಟ್ಸ್‌ ಕೇಳುವ ನೆಪದಲ್ಲಿ ಮಾತಾಡಿಸಿ, ಪಾಠದ ಬಗ್ಗೆ ನಿಮ್ಮಲ್ಲಿ ಸ್ವಲ್ಪ ಡೌಟ್ಸ್‌ ಕೇಳಲಿಕ್ಕಿದೆ. ಹಾಗಾಗಿ ಮೊಬೈಲ್‌ ನಂಬರ್‌ ಕೊಡ್ತೀರಾ…ಅಂತ ರಾಗ ಎಳೆದಿದ್ದೆ. ಹೀಗೆ ನಂಬರ್‌ ಕೇಳ್ತಿರೋದಕ್ಕೆ ನೋಟ್ಸ್‌, ಡೌಟ್ಸ್‌ ಅನ್ನೋದೆಲ್ಲಾ ಒಂದು ನೆಪ ಅಂತ ನನಗೂ ಗೊತ್ತಿತ್ತು. ಆದರೂ, ಹಿಂದೆ ಮುಂದೆ ನೋಡದೆ ನಂಬರ್‌ ಕೊಟ್ಟುಬಿಟ್ಟೆ. 

ಮೊದಲಿಗೆ ಒಂದೆರಡು ಹಾಯ್‌, ಹೆಲೋ, ಆ ನೋಟ್ಸ್‌ ಬರೆದಿದ್ದೀರಾ?, ಊಟ ಆಯ್ತಾ- ತಿಂಡಿ ಏನು…ಅಂತೆಲ್ಲಾ ಕೇಳಿ, ಎರಡೇ ಎರಡು ದಿನದಲ್ಲಿ ನೀನು ಪ್ರೇಮ ನಿವೇದನೆಯನ್ನೂ ಮಾಡಿಬಿಟ್ಟೆ. “ನೋಡಿದ ಮೊದಲ ದಿನವೇ ಇಷ್ಟವಾಗಿದ್ದೆ. ನಿನ್ನ ನಗುವಿಗೆ ಮನ ಸೋತಿದ್ದೆ. ಬೇರೆ ಯಾವ ಹುಡುಗಿಯನ್ನು ನೋಡಿದಾಗಲೂ ಹೀಗಾಗಿರಲಿಲ್ಲ. ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಿಲ್ಲ’ ಅಂತೆಲ್ಲಾ ಹೇಳಿದೆ. ಆಗ ನಾನು, ಎಲ್ಲ ಹುಡುಗಿಯರು ಹೇಳುತ್ತಾರಲ್ಲಾ, “ಮೊದಲು ನೀನು ಓದು ಮುಗಿಸಿ ಕೆಲಸ ಹಿಡಿ. ನಂತರ ಮನೆಯಲ್ಲಿ ಹೇಳಿ ಒಪ್ಪಿಸೋಣ. ಅಲ್ಲಿಯವರೆಗೂ ತಾಳ್ಮೆ ಇರಲಿ’ ಅಂದಿದ್ದೆ. ನೀನು ಆ ಮಾತನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡು, ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳುವ ಪ್ರಾಮಿಸ್‌ ಮಾಡಿದೆ. 

Advertisement

ಅಲ್ಲಾ, ನೀನು ಅದನ್ನೆಲ್ಲ ಸೀರಿಯಸ್ಸಾಗಿ ತೆಗೆದುಕೊಂಡು ಮಾತಾಡಿಸುವುದನ್ನೇ ಬಿಟ್ಟರೆ ಹೇಗೆ? ಪರೀಕ್ಷೆಗೆ ತಯಾರಿ ಜೋರಾಗಿ ನಡೆದಿದೆ ಅಂತ ಗೊತ್ತಾಯ್ತು. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿಯೇ ಕೆಲಸ ಪಡೆಯಲು ಶ್ರಮ ಪಡುತ್ತಿದ್ದೀಯ, ಅಲ್ವಾ? ಆದರೆ, ಫೋನು, ಮೆಸೇಜ್‌ ಮಾಡದಿರುವುದು ಯಾಕೆ? ನಾನೇನೂ ಮಾತಾಡಿಸಲೇಬೇಡ ಅಂದಿಲ್ಲವಲ್ಲ. ಮದುವೆಯ ಮಾತೆಲ್ಲಾ, ವಿದ್ಯಾಭ್ಯಾಸದ ನಂತರ ಅಂದಿದ್ದೆ. ಅದಕ್ಕೊಪ್ಪಿದ ನೀನು ಮಾತು ಬಿಡ್ತೀಯ ಅಂತ ನಂಗೇನು ಗೊತ್ತಿತ್ತು? ಪ್ಲೀಸ್‌, ಹಾಗೆಲ್ಲಾ ಮಾಡಬೇಡ. ನಿನ್ನ ಕರೆಗಾಗಿ ಕಾಯ್ತಾ ಇದ್ದೀನಿ ನಾನು…

ಸ್ಮಿತಾ ಅಂಗಡಿ, ಧಾರವಾಡ 

Advertisement

Udayavani is now on Telegram. Click here to join our channel and stay updated with the latest news.

Next