ಬದಿಯಡ್ಕ: ಸರಕಾರ ಜನ ಸಾಮಾನ್ಯರ ಕನಿಷ್ಠ ಸಾರಿಗೆ ಆವಶ್ಯಕತೆ ಗಳನ್ನು ಪೂರೈಸುವಲ್ಲಿ ವಹಿಸುತ್ತಿರುವ ನಿರ್ಲಕ್ಷ್ಯ ಖಂಡನಾರ್ಹ ವಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ಮುಂಗಡ ಪತ್ರದಲ್ಲಿ ಕೈಗೊಂಡ ತೀರ್ಮಾನಗಳನ್ನು ಮುಂದಿನ ಮುಂಗಡಪತ್ರದ ಮೊದಲೇ ಪೂರ್ತಿಗೊಳಿಸಬೇಕಾಗಿರುವುದು ಆಳು ವವರ ಕರ್ತವ್ಯವಾಗಿದೆ. ಆ ಕೆಲಸವನ್ನು ಮಾಡದಿರುವುದು ವಿಧಾನ ಸಭೆಗೆ ಅವಮಾನ ಮಾಡಿದಂತೆ. ತೆರಿಗೆ ಮೂಲಕ ಪಡಕೊಂಡ ಜನರ ಹಣವನ್ನು ಜನರಿಗಾಗಿ ಮೀಸಲಿರಿಸಿದರೆ ಸಾಲದು. ಅದರ ಮೂಲಕ ಜನತೆಯ ಆವಶ್ಯಕತೆಯನ್ನು ಪೂರ್ತಿಗೊಳಿಸುವ ಜವಾಬ್ದಾರಿ ಸರಕಾರ, ಅಧಿಕಾರಿ ವರ್ಗಕ್ಕೆ ಇದೆ ಎಂದು ಹಿರಿಯ ನಾಗರಿಕರ ಬದಿಯಡ್ಕ ಘಟಕದ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಚೆರ್ಕಳ-ಕಲ್ಲಡ್ಕ, ಬದಿಯಡ್ಕ- ಏತಡ್ಕ-ಸುಳ್ಯಪದವು, ಮುಳ್ಳೇರಿಯ – ಆರ್ಲಪದವು ಮೊದಲಾದ ರಸ್ತೆಗಳ ಶೋಚನೀಯಾ ವಸ್ಥೆಯನ್ನು ಪರಿಹರಿಸ ಬೇಕೆಂಬ ಬೇಡಿಕೆಯನ್ನಿರಿಸಿ ಜನಪರ ಹೋರಾಟ ಸಮಿತಿ ನೇತƒತ್ವದಲ್ಲಿ ಬದಿಯಡ್ಕದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರದ 11ನೇ ದಿನ ಸೋಮವಾರ ಪ್ರತಿಭಟನೆಯ ಎರಡನೇ ಹಂತ ಅನಿರ್ದಿಷ್ಟ ಸರಣಿ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿದರು.
ಜನಪರ ಹೋರಾಟ ಸಮಿತಿ ಅಧ್ಯಕ್ಷ ಮಾಹಿನ್ ಕೇಳ್ಳೋಟ್ ಅಧ್ಯಕ್ಷತೆ ವಹಿಸಿದ್ದರು. ರವಿ ನವಶಕ್ತಿ ಹಾಗೂ ಸಿ.ಎಚ್. ಚಂದ್ರನ್ ಅವರು ಪ್ರತಿಭಟನೆಯ ವೇದಿಕೆಯಲ್ಲೆ ಹಾಸಿಗೆ ಹಾಸಿ ದಿನಪೂರ್ತಿ ಮಲಗಿ ಪ್ರತಿಭಟನೆಯ ಹೊಸ ಕಾವಿಗೆ ಕಾರಣರಾದರು.
ಬಾಲಕೃಷ್ಣ ಶೆಟ್ಟಿ, ಎಸ್.ಎನ್.ಮಯ್ಯ, ಕುಂಜಾರು ಮೊಹಮ್ಮದ್ ಹಾಜಿ, ನೌಶಾದ್, ನಾರಾಯಣ ವಿದ್ಯಾಗಿರಿ, ಮೊಯ್ದಿàನ್ ಮುನಿ ಯೂರು, ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡು ಸೆಕ್ರೆಟರಿ ಬಾಲಕೃಷ್ಣ ಅಚಾಯಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಸಂಜೆ ನಡೆದ ದಿನದ ಸಮಾರೋಪದಲ್ಲಿ ಬೇ.ಸಿ. ಗೋಪಾಲಕೃಷ್ಣ ಭಟ್, ಜಗನ್ನಾಥ ಆಳ್ವ ಮೂಲಡ್ಕ ಮೊದಲಾ ದವರು ಉಪಸ್ಥಿತರಿದ್ದರು.