ಕರ್ನಾಟಕ ಸಂಘಟನೆಯ ಶನಿವಾರ ಆಯೋಜಿಸಿದ ರಾಜ್ಯಮಟ್ಟದ ಬಂಜಾರಾ ಯುವ ಚಿಂತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ತಾಂಡಾಗಳಲ್ಲಿ ಈಗಲೂ ಬಡತನ, ಅನರಕ್ಷತೆ ತಾಂಡವವಾಡುತ್ತಿದೆ. ಬಂಜಾರರ ಮೂಲ ಬೇರು ಮರೆಯಬಾರದು. ಇಂಥ ಚಿಂತನ ಶಿಬಿರಗಳು ನಡೆಯಬೇಕು. ಶಿಬಿರದ ಚಿಂತನಗಳನ್ನು ಸರಕಾರದ ಗಮನಕ್ಕೂ ತರಲಾಗುವುದು ಎಂದರು. ವಿಶ್ವವಿದ್ಯಾಲಯ ಕುಲಸಚಿವ ಡಾ| ಸಿ.ಎಸ್. ಪಾಟೀಲ ಮಾತನಾಡಿ, ಬಂಜಾರ ಸಮಾಜದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಎಲ್ಲರೂ ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಹೊಸದಿಲ್ಲಿಯ ರಾಷ್ಟ್ರೀಯ ಬುಡಕಟ್ಟು ಆಯೋಗದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೇಣುಕೆ ಮಾತನಾಡಿ, ಸಂತ ಶ್ರೀಸೇವಾಲಾಲ್ ಮಹಾರಾಜರ ವಿಚಾರಧಾರೆ ಇಡೀ ದೇಶದ ಬಂಜಾರರು ಅನುಸರಿಸುತ್ತಾರೆ. ಅವರರೊಬ್ಬ ಮಹಾನ್ ತತ್ವಜ್ಞಾನಿಯಾಗಿದ್ದರು. ಮೌಡ್ಯದ
ವಿರೋಧಿ ಯಾಗಿದ್ದರು. ಬಂಜಾರರನ್ನು ಗೋರ್, ಗೋರ್ ಮಾಟಿ, ಬಂಜಾರ ಎಂದು 15ರಿಂದ 20 ಉಪ ಪಂಗಡಗಳಿಂದ ಕರೆಯಲಾಗುತ್ತದೆ. ಬ್ರಿಟಿಷರು ಈ ಬಂಜಾರರನ್ನು ಕ್ತಿಮಿನಲ್
ಸಮುದಾಯ ಎಂದು ಘೋಷಿಸಿತ್ತು. 1952ರಲ್ಲಿ ಭಾರತ ಸರಕಾರ ಬ್ರಿಟಿಷರ ಕಾಯ್ದೆ ರದ್ದುಪಡಿಸಿತು. ಹೀಗಾಗಿ ಈ ಸಮುದಾಯಕ್ಕೆ ಅನುಕೂಲವಾಗಿದೆ ಎಂದರು. ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಅಧ್ಯಯನ ಪೀಠದ ನಿರ್ದೇಶಕ ಡಾ| ದಶರಥ ನಾಯಕ, ಪರ್ಯಾಯ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ| ಮಹೇಶ ರಾಠೊಡ, ರಾಷ್ಟ್ರೀಯ ಕಾನೂನು ಶಾಲೆ ಅಧ್ಯಾಪಕ ಡಾ| ಪ್ರದೀಪ ರಾಮಾವತ್, ಹೈಕೋರ್ಟ್ ನ್ಯಾಯವಾದಿ ಅನಂತ ನಾಯ್ಕ, ಅಧ್ಯಾಪಕ ಡಾ| ಆನಂದ ನಾಯ್ಕ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸತೀಶ ಚವ್ಹಾಣ, ಮುಖಂಡರಾದ ವಿಜಯಲಕ್ಷ್ಮೀ, ಡಾ| ಶಾರದಾದೇವಿ ಜಾಧವ್, ಸಂತೋಷ ರಾಠೊಡ, ಸಂತೋಷ ನಾಯ್ಕ ಹಾಜರಿದ್ದರು. ಹಮ್‌ಗೋರ್‌ನ ವಿಜಯಜಾಧವ್ ನಿರ್ವಹಿಸಿದರು. ಜೈಸಿಂಗ್ ಜಾಧವ್ ಪ್ರಾರ್ಥನಾ ಗೀತೆ ಹಾಡಿದರು.
Advertisement